ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದ ರೈತರ ʻರಾಣಿ ಮಾʼ

 

ಸುಸ್ಥಿತಿಯ ಬಂಗಾಳಿ ಕುಟುಂಬದಲ್ಲಿ ಜನಿಸಿದ ಇಳಾ ಮಿತ್ರಾ ಅವಿಭಜಿತ ಭಾರತದಲ್ಲಿ ಮೆಚ್ಚುಗೆ ಪಡೆದ ಕ್ರೀಡಾಪಟುವಾಗಬೇಕೆಂಬ ಕನಸನ್ನು ಹೊಂದಿದ್ದವರು. ಆಕೆ ಕನಸಿಗೆ ನೀರೆರೆದಿದ್ದು ಚಿಕ್ಕ ವಯಸ್ಸಿನಿಂದಲೂ ಪ್ರೋತ್ಸಾಹಿಸಿದ್ದ ಆಕೆ ತಂದೆ ಮಾತ್ರ.ಅವಿಭಜಿತ ಬಂಗಾಳದ ಇತಿಹಾಸದಲ್ಲಿ, ಇಳಾ ಆ ಪ್ರದೇಶದ ರೈತರ ರಾಣಿ ಮಾ ಅಥವಾ ರಾಣಿ ತಾಯಿ ಎಂದು ಗುರುತಿಸಲ್ಪಟ್ಟಿದ್ದಾರೆ.1925 ರಲ್ಲಿ ಕಲ್ಕತ್ತಾದಲ್ಲಿ (ಕೋಲ್ಕತ್ತಾ) ಜನಿಸಿದ ಇಳಾ ಆರು ಮಕ್ಕಳಲ್ಲಿ ಹಿರಿಯಳು. ಆಕೆಯ ತಂದೆ, ಬಂಗಾಳದ ಅಕೌಂಟೆಂಟ್ ಜನರಲ್ ನಾಗೇಂದ್ರನಾಥ್ ಸೇನ್ ಅವರು ಬಾಸ್ಕೆಟ್‌ಬಾಲ್, ಈಜು ಮತ್ತು ಟ್ರ್ಯಾಕ್‌ನಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು. 1937 ರಿಂದ, ತನ್ನ ಕ್ರೀಡಾ ಸಾಮರ್ಥ್ಯಗಳಿಂದಾಗಿ ಹೆಸರು ಸಾಧಿಸಿದರು. 1937 ಮತ್ತು 1938 ರಲ್ಲಿ, ಅವರು ಸ್ಪೋರ್ಟ್ಸ್ ಕ್ಲಬ್ ಜಟಿಯಾ ಜುಬಾ ಸಂಘದಿಂದ ಬಂಗಾಳದಲ್ಲಿ ಬಾಲಕಿಯರ ಜೂನಿಯರ್ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗಳಿಸಿದರು. ಬಂಗಾಳದ ಪ್ರೆಸಿಡೆನ್ಸಿಯ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರು ಎನಿಸಿಕೊಂಡು ಸುಮಾರು 47 ಟ್ರೋಫಿಗಳನ್ನು ಮುಡಿಗೇರಿಸಿಕೊಂಡರು.1940 ರಲ್ಲಿ ಜಗತ್ತು 12 ನೇ ಒಲಿಂಪಿಕ್ಸ್‌ಗಾಗಿ ತಯಾರಿ ನಡೆಸುತ್ತಿರುವಾಗ ಇಳಾ 15 ವರ್ಷ ವಯಸ್ಸಿನವಳಾಗಿದ್ದಳು ಎರಡನೆಯ ಮಹಾಯುದ್ಧದ ಕಾರಣದಿಂದಾಗಿ ಆಟಗಳನ್ನು ರದ್ದುಗೊಳಿಸಲಾಯಿತು. ಇಳಾ ಬೆಥೂನ್ ಶಾಲೆಯಲ್ಲಿ ಪದವಿಯನ್ನು ಮುಂದುವರಿಸಿದರು. ಇದಾದ ಕೆಲವೇ ದಿನಗಳಲ್ಲಿ, ಜಮೀನ್ದಾರ್ ಕುಟುಂಬಕ್ಕೆ ಸೇರಿದ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ರಾಮೇಂದ್ರನಾಥ ಮಿತ್ರ ಎಂಬಾತನೊಂದಿಗೆ ವಿವಾಹವನ್ನು ನಿಶ್ಚಯಿಸಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ವಿಶ್ವ ರೈತ ದಿನಾಚರಣೆ ಪ್ರಗತಿಪರ ರೈತರ ಪಾದಪೂಜೆ....

Thu Dec 29 , 2022
ಇದೇ ಡಿಸೆಂಬರ್ 30 ಶುಕ್ರವಾರದಂದು ವಿಶ್ವ ರೈತ ದಿನಾಚರಣೆ ಅಂಗವಾಗಿ ರೈತರ ಪಾದಪೂಜೆ ಕಾರ್ಯಕ್ರಮ ಕೃಷಿ ಮಹಾವಿದ್ಯಾಲಯ ಭೀಮರಾಯನ ಗುಡಿಯಲ್ಲಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು.ಈ ಒಂದು ಭವ್ಯ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶಾಂತಗೌಡ ಪಾಟೀಲ್ ಚನ್ನಪಟ್ಟಣ ರಾಜ್ಯಾಧ್ಯಕ್ಷರು ರೈತ ಸೇನೆಯ ಅಧ್ಯಕ್ಷತೆಯಲ್ಲಿ.ರೈತರಿಗೆ ಪಾದ ಪೂಜೆ ಮಾಡಿ ನೇಗಿಲ ಯೋಗಿ ಪ್ರಶಸ್ತಿ ನೀಡಲಾಗುವುದು,ಹಾಗೂ ವಿವಿಧ ಕ್ಷೇತ್ರದಲ್ಲಿ ರೈತರಿಗೆ ರೈತರ ಕುಂದು ಕೊರತೆಗಳಿಗೆ ಸಹಕರಿಸಿದಂತ. ರೈತ ಬಂಧುಗಳಿಗೆ […]

Advertisement

Wordpress Social Share Plugin powered by Ultimatelysocial