ಶಿವರಾತ್ರಿಯಂದು ಉಜ್ಜಯಿನಿಯಲ್ಲಿ ಬೆಳಗಲಿವೆ 21 ಲಕ್ಷ ಹಣತೆಗಳು

ಭೋಪಾಲ್: ಮಹಾಶಿವರಾತ್ರಿ ಅಂಗವಾಗಿ ಶ್ರೀಕ್ಷೇತ್ರ ಉಜ್ಜಯಿನಿಯಲ್ಲಿ 21 ಲಕ್ಷ ಮಣ್ಣಿನ ಹಣತೆ ಬೆಳಗಿಸಲಾಗುವುದು.  ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಾಶಿವರಾತ್ರಿ ಸಂದರ್ಭದಲ್ಲಿ ಶಿವಜ್ಯೋತಿ ಅರ್ಪಣಂ 2023 ರ ಅಂಗವಾಗಿ ಫೆಬ್ರವರಿ 18 ರಂದು ಶ್ರೀ ಕ್ಷೇತ್ರ ಉಜ್ಜಯಿನಿ ನಗರದಾದ್ಯಂತ 21 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ವರ್ಷ 11 ಲಕ್ಷ ಹಣತೆ ಬೆಳಗಿಸಲಾಗಿತ್ತು. ಈ ಬಾರಿ 21 ಲಕ್ಷ ಬೆಳಗಿಸುವ ಮೂಲಕ ಗಿನ್ನಿಸ್ ದಾಖಲೆಗೆ ಪ್ರಯತ್ನಿಸಲಾಗುವುದು ಎಂದು ಹೇಳಲಾಗಿದೆ. 2022 ರ ದೀಪಾವಳಿ ಸಂದರ್ಭದಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ 15.76 ಲಕ್ಷ ದೀಪ ಬೆಳಗಿಸಿ ದಾಖಲೆ ನಿರ್ಮಿಸಲಾಗಿತ್ತು. ಉಜ್ಜಯಿನಿ 22 ಲಕ್ಷ ದೀಪ ಬೆಳಗಿಸಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2023 Aero India ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

Mon Feb 13 , 2023
    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದ್ವೈವಾರ್ಷಿಕ ಭಾರತದ ಏರೋಸ್ಪೇಸ್ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿದರು. ಈ ಪ್ರದರ್ಶನವು ಮಿಲಿಟರಿ ವಿಮಾನಗಳು, ಹೆಲಿಕಾಪ್ಟರ್‌ಗಳು, ಉಪಕರಣಗಳು ಮತ್ತು ಹೊಸ-ಯುಗದ ಏವಿಯಾನಿಕ್ಸ್‌ಗಳನ್ನು ತಯಾರಿಸಲು ಉದಯೋನ್ಮುಖ ಕೇಂದ್ರವಾಗಿ ದೇಶವನ್ನು ಪ್ರದರ್ಶಿಸುತ್ತದೆ. ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕ ಏರ್ ಫೋರ್ಸ್ ಸ್ಟೇಷನ್ ಕಾಂಪ್ಲೆಕ್ಸ್‌ನಲ್ಲಿ ಐದು ದಿನಗಳ ಪ್ರದರ್ಶನದಲ್ಲಿ 809 ರಕ್ಷಣಾ ಕಂಪನಿಗಳು ಮತ್ತು 98 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸರ್ಕಾರದ ‘ಮೇಕ್ ಇನ್ ಇಂಡಿಯಾ, ಮೇಕ್ […]

Advertisement

Wordpress Social Share Plugin powered by Ultimatelysocial