ಹರ ಗೋವಿಂದ ಖೊರಾನ

  
ಭಾರತೀಯ ಮೂಲಸ್ಥ ಅಮೆರಿಕದ ಪ್ರಜೆಯಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ವಿಜ್ಞಾನಿ ಹರ ಗೋವಿಂದ ಖೊರಾನ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಮಹತ್ವದ ಸಂಶೋಧನೆಗಳ ಮೂಲಕ ಜಗತ್ಪ್ರಸಿದ್ಧರಾದವರು.
ಖೊರಾನ ಅವರು 1922ರ ಜನವರಿ 9ರಂದು ಈಗಿನ ಪಾಕಿಸ್ತಾನದ ಭಾಗವಾಗಿರುವ ರಾಯಪುರದಲ್ಲಿ ಜನಿಸಿದರು. ಹರ ಗೋವಿಂದ ಖೊರಾನ ಅವರ ತಂದೆಯವರು ಪಟ್ವಾರಿ ಎಂಬ ಹಳ್ಳಿಯ ತೆರಿಗೆ ಅಧಿಕಾರ ಹೊಂದಿದ್ದು, ಖೊರಾನ ಅವರ ಹೈಸ್ಕೂಲುವರೆಗಿನ ಓದು ಮನೆಯಿಂದಲೇ ನಡೆಯುತ್ತಿತ್ತು. ಲಾಹೋರಿನ ಪಂಜಾಬ್ ವಿಶ್ವವಿದ್ಯಾಲಯದಿಂದ 1943ರಲ್ಲಿ ಬಿ.ಎಸ್ಸಿ ಮತ್ತು 1945ರಲ್ಲಿ ಎಂ.ಎಸ್ಸಿ ಪದವಿ ಪಡೆದ ಖೊರಾನ 1945ರಲ್ಲಿ ಬ್ರಿಟನ್ನಿನಲ್ಲಿರುವ ಲಿವರ್ಪೂಲ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿ 1948ರಲ್ಲಿ ಜೈವಿಕ ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಗಳಿಸಿದ ಅವರು ಮುಂದೆ ಎರಡು ವರ್ಷಗಳ ಕಾಲ ಜ್ಯೂರಿಚ್ನಲ್ಲೂ, ಮತ್ತೆರಡು ವರ್ಷಗಳ ಕಾಲ ಕೆಂಬ್ರಿಡ್ಜಿನಲ್ಲೂ ಹೆಚ್ಚಿನ ಅಧ್ಯಯನದಲ್ಲಿ ನಿರತರಾದರು. ಮುಂದೆ ಅವರು ಬ್ರಿಟಿಷ್ ಕೊಲಂಬಿಯಾ, ವಿಸ್ಕಾನ್ಸಿನ್ ಮ್ಯಾಡಿಸನ್ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸಿ, 1970ರಿಂದ 2007ರವರೆಗಿನ ಸುದೀರ್ಘ ಅವಧಿಯವರೆವಿಗೆ ಮಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ಪ್ರಾಧ್ಯಾಪಕರಾಗಿ ದುಡಿದರು.
‘ಕೊ‌ಎಂಸೈಮ್ ಎ’ ಎಂಬ ರಾಸಾಯನಿಕ ವಸ್ತುಗಳನ್ನು ತಯಾರು ಮಾಡಿದ್ದು ರಸಾಯನಶಾಸ್ತ್ರದಲ್ಲಿನ ಹರಗೋವಿಂದ ಖೊರಾನ ಅವರ ಒಂದು ದೊಡ್ಡ ಸಾಧನೆ. ಮಾನವ ಶರೀರದಲ್ಲಿನ ಕೆಲವು ಕ್ರಿಯೆಗಳಿಗೆ ಅಗತ್ಯವಾದ ಈ ರಾಸಾಯನಿಕ ವಸ್ತುವನ್ನು ಅವರು ಕೆನಡಾದಲ್ಲಿನ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿದ್ದಾಗ ತಯಾರಿಸಿದರು.
ಜೀವಗಳ ಉತ್ಪತ್ತಿಯಲ್ಲಿ ಬಹುಮುಖ್ಯವಾದ ಪಾತ್ರವಹಿಸುವ ಕೃತಕ ವಂಶವಾಹಿಯನ್ನು (ಜೀನ್) ಹರಗೋವಿಂದ ಖೊರಾನ ಮತ್ತು ಅವರ ತಂಡದವರು ಪ್ರಯೋಗಾಲಯದಲ್ಲಿ ತಯಾರು ಮಾಡಿ ಇಡೀ ಜಗತ್ತಿನ ಶ್ಲಾಘನೆಗೆ ಪಾತ್ರರಾದರು. ಇಂಥ ವಂಶವಾಹಿ ವಸ್ತು ಮನುಷ್ಯರ ಮತ್ತು ಪ್ರಾಣಿಗಳ ಕರುಳಿನಲ್ಲಿ ಇರುತ್ತದೆ. ಅವರು ಕೃತಕ ವಂಶವಾಹಿಯನ್ನು ಕರುಳಿನಲ್ಲಿರುವ ‘ಎಶ್ಚೆರೀಚಿಯ ಕೋಲಿ’ ಎಂಬ ಬ್ಯಾಕ್ಟೀರಿಯಕ್ಕೆ ಸೇರಿಸಿದರು. ಅದು ಸಹಜವಾದ ವಂಶವಾಹಿಯಂತೇಯೇ ಕಾರ್ಯ ಮಾಡಿತು. ಅವರ ಕ್ಲೋನಿಂಗ್ ತಂತ್ರಜ್ಞಾನ ಇಂದು ಸಸ್ಯ ಮತ್ತು ಪ್ರಾಣಿಶಾಸ್ತ್ರಗಳಲ್ಲಿ ಪ್ರಖ್ಯಾತಿ ಪಡೆದಿವೆ.
ಹರ ಗೋವಿಂದ ಖೊರಾನ ಅವರು ವಿಜ್ಞಾನ ಕ್ಷೇತ್ರದಲ್ಲಿನ ತಮ್ಮ ಮಹತ್ವದ ಸಾಧನೆಗಳಿಗಾಗಿ 1968ರಲ್ಲಿ ಮಾರ್ಷಲ್ ಡಬ್ಲ್ಯೂ. ನಿರೆನ್‌ಬರ್ಗ್ ಮತ್ತು ರಾಬರ್ಟ್ ಡಬ್ಲ್ಯೂ. ಹಾಲಿ ಅವರುಗಳ ಜೊತೆ ಔಷಧ ವಿಜ್ಞಾನ ಕ್ಷೇತ್ರದಲ್ಲಿನ ನೊಬೆಲ್ ಪುರಸ್ಕಾರವನ್ನು ಸ್ವೀಕರಿಸಿದರು.

ಹರ ಗೋವಿಂದ ಖೊರಾನ ಅವರು 2011ರ ನವೆಂಬರ್ 9ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೂವರೆ ವರ್ಷಗಳಲ್ಲಿ ಮೊದಲ ಬಾರಿಗೆ ಇಂದು ಚಿನ್ನದ ಬೆಲೆ 55,000 ರೂ.!

Wed Mar 9 , 2022
ಭಾರತದಲ್ಲಿ ಚಿನ್ನದ ಬೆಲೆ ಒಂದೂವರೆ ವರ್ಷದಲ್ಲಿ ಮೊದಲ ಬಾರಿಗೆ 55,000 ರೂ. ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಮಿತ್ರರಾಷ್ಟ್ರಗಳಿಂದ ವ್ಲಾಡಿಮಿರ್ ಪುಟಿನ್ ದೇಶದ ಮೇಲೆ ನಂತರದ ನಿರ್ಬಂಧಗಳು ಹಳದಿ ಲೋಹದ ಬೆಲೆಯನ್ನು ತಳ್ಳಿದವು. ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಬುಧವಾರದಂದು 0915 ಗಂಟೆಗೆ 10 ಗ್ರಾಂಗೆ 55,111 ರೂಪಾಯಿಗಳಿಗೆ ಚಿನ್ನದ ಬೆಲೆ ಭವಿಷ್ಯವು ಶೇಕಡಾ 1.64 ರಷ್ಟು ಜಿಗಿದಿದೆ. ಅದೇ ರೀತಿ, ಜಾಗತಿಕ ಸೂಚ್ಯಂಕಗಳ […]

Advertisement

Wordpress Social Share Plugin powered by Ultimatelysocial