ಒಂದು ಕಾಲದಲ್ಲಿ 609 ಕೆಜಿ ಇದ್ದ ವ್ಯಕ್ತಿ ಈಗ ಕೇವಲ 63 ಕೆ.ಜಿ.! ಇದು ವಿಶ್ವದ ಅತ್ಯಂತ ತೂಕದ ವ್ಯಕ್ತಿಯ ರೋಚಕ ಕಥೆ!

ಒಂದು ಕಾಲದಲ್ಲಿ 609 ಕೆಜಿ ಇದ್ದ ವ್ಯಕ್ತಿ ಈಗ ಕೇವಲ 63 ಕೆ.ಜಿ.! ಇದು ವಿಶ್ವದ ಅತ್ಯಂತ ತೂಕದ ವ್ಯಕ್ತಿಯ ರೋಚಕ ಕಥೆ!

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಒಂದು ಕಾಲದಲ್ಲಿ ವಿಶ್ವದ ಅತ್ಯಂತ ತೂಕದ ವ್ಯಕ್ತಿಯೊಬ್ಬ  ಇಂದು ಆಶ್ಚರ್ಯಕರ ರೀತಿಯಲ್ಲಿ ತೂಕ ಇಳಿಸಿಕೊಂಡಿದ್ದಾನೆ. ಹೌದು, ಸೌದಿ ಅರೇಬಿಯಾದ (Saudi Arabia) ಖಾಲಿದ್ ಮೊಹ್ಸಿನ್ ಅಲ್ ಶೇರಿ  ಒಂದು ಕಾಲದಲ್ಲಿ ಜಗತ್ತು ಅತ್ಯಂತ ಭಾರವಾದ ವ್ಯಕ್ತಿವಾಗಿದ್ದ, ಆದರೆ ಇಂದು ಈ ವ್ಯಕ್ತಿಯನ್ನು ಗುರುತಿಸುವುದು ಕಷ್ಟವಾಗಿದೆ.

ಖಾಲಿದ್ ಮೊಹ್ಸಿನ್ ಸೌದಿಯ ಜಾರ್ಜನ್ ಮೂಲದವರು. ಖಾಲಿದ್ 17 ವರ್ಷದವನಾಗಿದ್ದಾಗ 609 ಕೆಜಿ ತೂಕಹೊಂದಿದ್ದ. ಖಾಲಿದ್ ಎಷ್ಟು ಭಾರವಾಗಿದ್ದನೆಂದರೆ ಹಾಸಿಗೆಯಿಂದ ಸರಿಯಾಗಿ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಸೌದಿಯ ದಿವಂಗತ ರಾಜ ಅಬ್ದುಲ್ಲಾ ಅವರ ಆದೇಶದ ಮೇರೆಗೆ ಖಲೀದ್​ಗೆ ಆಸ್ಪತ್ರೆಯಲ್ಲಿ ತೂಕ ಇಳಿಕೆಯ ಚಿಕಿತ್ಸೆಗೆ ಅವಕಾಶ ಸಿಕ್ಕಿತು. ಹೀಗೆ ಚಿಕಿತ್ಸೆ ದೊರೆತ ಕೇವಲ ಆರು ತಿಂಗಳಲ್ಲೇ ಖಲೀದ್ ದೇಹದ 543 ಕೆಜಿ ತೂಕವನ್ನು ಕಳೆದುಕೊಂಡರು.

2013 ರಲ್ಲಿ ತಂಡವು ಅವನನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದಾಗ, ಖಲೀದ್ ನನ್ನು ಮನೆಯ ಮೆಟ್ಟಿಲುಗಳಿಂದ ಕೆಳಗಿಳಿಸುವುದು ಕಷ್ಟವಾಗಿತ್ತು. ಮನೆಯಿಂದ ಹೊರಗೆ ತರಲು ಅವರ ಮನೆಯ ಒಂದು ಭಾಗವನ್ನು ಕೆಡವಬೇಕಾಯಿತು. ನಂತರ ಅವರನ್ನು ಹಾಸಿಗೆಗಳು ಸೇರಿದಂತೆ ಕ್ರೇನ್ ಗಳ ಸಹಾಯದಿಂದ ಆಂಬ್ಯುಲೆನ್ಸ್ ಗಳಲ್ಲಿ ಇರಿಸಲಾಯಿತು. ನಂತರ ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಖಾಲಿದ್ ಅವರನ್ನು 30 ವೈದ್ಯರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ಸಮಯದಲ್ಲಿ, ಖಾಲಿದ್ ಗೆ ಶಸ್ತ್ರಚಿಕಿತ್ಸೆಯಿಂದ ಹಿಡಿದು ವಿವಿಧ ವ್ಯಾಯಾಮಗಳು ಮತ್ತು ಚಿಕಿತ್ಸೆಯನ್ನು ನೀಡಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ 543 ಕಿಲೋ ತೂಕವನ್ನು ಕಡಿಮೆ ಮಾಡಿದ್ದಾರೆ. ಈ ಮೂಲಕ ಒಂದು ಕಾಲದಲ್ಲಿ 609 ಕೆಜಿ ಇದ್ದ ವ್ಯಕ್ತಿ ಈಗ ಕೇವಲ 63 ಕೆ.ಜಿ.ಗೆ ದೇಹವನ್ನು ಇಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಮಗಳೂರು ಜಿಲ್ಲೆಯ ಏಳು ಪ್ರಸಿದ್ಧ ತಾಣಗಳಿವು;

Wed Dec 29 , 2021
ಕರ್ನಾಟಕದ ಪಶ್ಚಿಮ ಭಾಗದಲ್ಲಿರುವ ಸುಂದರವಾದ ಜಿಲ್ಲೆ ಚಿಕ್ಕಮಗಳೂರು . ‘ಕಾಫಿ ನಾಡು’ ಎಂದೇ ಪ್ರಸಿದ್ಧಿ ಪಡೆದಿದೆ . ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟಗಳು ಮತ್ತು ಆಕರ್ಷಣೀಯ ಗಿರಿಧಾಮಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಐತಿಹಾಸಿಕ ದೇವಾಲಯಗಳು ಹಾಗೂ ಜಲಪಾತಗಳು ಜನರ ಕಣ್ಮನ ಸೆಳೆಯುವಂತದ್ದು. ಮುಳ್ಳಯ್ಯನಗಿರಿ ಬೆಟ್ಟ: ಚಿಕ್ಕಮಗಳೂರಿನ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಮುಳ್ಳಯ್ಯನಗಿರಿ ಶಿಖರ ಕೂಡ ಒಂದು. ಇದು ಕರ್ನಾಟಕದ ಅತಿ ಎತ್ತರವಾದ ಶಿಖರ ವಾಗಿದ್ದು 2000 ಮೀಟರ್ (6330 ಅಡಿ) […]

Advertisement

Wordpress Social Share Plugin powered by Ultimatelysocial