1 ಲಕ್ಷ ರೂ ಪಾವತಿಸಿ ಐಫೋನ್ ಆರ್ಡರ್ ಮಾಡಿದ್ದ, ಆದರೆ ಬಂದಿದ್ದು ಏನು ಗೊತ್ತಾ?

Iphone: 1 ಲಕ್ಷ ರೂ ಪಾವತಿಸಿ ಐಫೋನ್ ಆರ್ಡರ್ ಮಾಡಿದ್ದ, ಆದರೆ ಬಂದಿದ್ದು ಏನು ಗೊತ್ತಾ?
ಆನ್​ಲೈನ್​ ಮೂಲಕ ಆರ್ಡರ್ ಮಾಡುವಾಗ ಕೊಂಚ ಗಮನಹರಿಸುವುದು ಮುಖ್ಯ. ಕೆಲವೊಮ್ಮೆ ಆನ್​ಲೈನ್​ ಆರ್ಡರ್​ನಿಂದ ಮೋಸ ಹೋಗುವ ಪ್ರಸಂಗಗಳು ಬೆಳಕಿಗೆ ಬರುತ್ತಿರುತ್ತದೆ. ಅದರಂತೆ ಇದೀಗ ವ್ಯಕ್ತಿಯೋರ್ವನಿಗೂ ಅದೇ ರೀತಿ ಆಗಿದೆ. ಆನ್​ಲೈನ್​ ಮೂಲಕ ಇಷ್ಟಪಟ್ಟು ಐಫೋನ್ ಖರೀದಿಸಲು ಹೋದ ವ್ಯಕ್ತಿಗೆ ಪಾರ್ಸೆಲ್​ನಲ್ಲಿ ಚಾಕೋಲೆಟ್ ಬಂದಿದೆ.

ಇದನ್ನು ನೋಡಿ ಆರ್ಡರ್​ ಮಾಡಿದ ವ್ಯಕ್ತಿ ಅಚ್ಚರಿಗೊಂಡಿದ್ದಾನೆ. ಮಾತ್ರವಲ್ಲದೆ ಕೋಪಗೊಂಡಿದ್ದಾನೆ. ಕೊನೆಗೆ ವ್ಯಕ್ತಿ ಏನು ಮಾಡಿದ್ದಾನೆ ಗೊತ್ತಾ?

ಇಂಗ್ಲೆಂಡ್‌ನ ಲೀಡ್ಸ್‌ನ ಡೇನಿಯಲ್ ಕ್ಯಾರೊಲ್ ಎಂಬಾತ ಐಫೋನ್ 13 ಪ್ರೊ ಮ್ಯಾಕ್ಸ್‌ ಖರೀದಿಸಬೇಕೆಂದು ಆಸೆಪಟ್ಟಿದ್ದನು. ಅದರಂತೆ ಆನ್​ಲೈನ್​ ಮೂಲಕ ಖರೀದಿಸಲು ಮುಂದಾಗಿದ್ದನು. ಕೊನೆಗೆ ಐಫೋನ್ 13 ಪ್ರೊ ಮ್ಯಾಕ್ಸ್‌ ಅನ್ನು ಬುಕ್​ ಮಾಡಿದ್ದನು. ಅದಕ್ಕಾಗಿ ಆತ ಸುಮಾರು 1 ಲಕ್ಷ ಪಾವತಿಸಿದ್ದನು ಕೂಡ.

ಬದಲಿಗೆ ಟಾಯ್ಲೆಟ್ ಪೇಪರ್‌ನಲ್ಲಿ ಸುತ್ತಿದ ಎರಡು ಚಾಕೊಲೇಟ್ ಬಾರ್‌ಗಳನ್ನು ಸ್ವೀಕರಿಸಿದಾಗ ಇನ್ನೊಬ್ಬ ಗ್ರಾಹಕರು ಅಸಭ್ಯವಾಗಿ ಆಶ್ಚರ್ಯಚಕಿತರಾದರು. ನಿರ್ದಿಷ್ಟವಾಗಿ ಇಂಗ್ಲೆಂಡ್‌ನ ಲೀಡ್ಸ್‌ನ ಡೇನಿಯಲ್ ಕ್ಯಾರೊಲ್ ತನ್ನ ಐಫೋನ್ 13 ಪ್ರೊ ಮ್ಯಾಕ್ಸ್‌ಗಾಗಿ ಕಾತರದಿಂದ ಕಾಯುತ್ತಿದ್ದನು, ಅದು ಎರಡು ವಾರಗಳ ವಿಳಂಬವಾಗಿತ್ತು. ಅವರು ಫೋನ್‌ಗಾಗಿ £ 1,045 (ಸುಮಾರು 1 ಲಕ್ಷ ರೂ.) ಪಾವತಿಸಿದ್ದಾರೆ.

ಡೇನಿಯಲ್​ ಎರಡು ವಾರಗಳ ನಂತರ ತಾನು ಆರ್ಡರ್​ ಮಾಡಿದ್ದ ಐಫೋನ್ 13 ಪ್ರೊ ಮ್ಯಾಕ್ಸ್‌ ಬರುವಿಕೆಗೆ ಕಾಯುತ್ತಿದ್ದ. ಕೊನೆಗೊಂದು ದಿನ ಆತ ಆರ್ಡರ್​ ಮಾಡಿದ ವಸ್ತುವನ್ನು ಕೈಗೆ ಸಿಗುತ್ತದೆ. ಖಷಿಯಿಂದ ಐಫೋನ್ 13 ಪ್ರೊ ಮ್ಯಾಕ್ಸ್‌ ಬಂದಿದೆ ಎಂಬು ತೆರೆದ ನೋಡಿದಾಗ ಡೇನಿಯಲ್​ ಅಚ್ಚರಿಗೊಳ್ಳುತ್ತಾನೆ. ಅದರಲ್ಲಿ ಐಫೋನ್​ ಬದಲಿದೆ ಟಾಯ್ಲೆಟ್​ ಪೇಪರಿನಿಂದ ಸುತ್ತಿದ್ದ ಚಾಕೋಲೇಟ್​​ ಇರುತ್ತದೆ.

ಈ ಬಗ್ಗೆ ಮಾತನಾಡಿದ್ದ ಡೇನಿಯಲ್​ “ನಾನು ಆಯಪಲ್ ವೆಬ್‌ಸೈಟ್ ಮೂಲಕ ಡಿಸೆಂಬರ್ 2 ರಂದು ಫೋನ್ ಅನ್ನು ಆರ್ಡರ್ ಮಾಡಿದ್ದೇನೆ, ಆದರೆ ಸ್ಟಾಕ್‌ನ ಕಾರಣದಿಂದಾಗಿ ಆರಂಭಿಕ ಡೆಲಿವರಿ ದಿನಾಂಕ ಡಿಸೆಂಬರ್ 17 ಆಗಿತ್ತು.” ಕಳೆದ ಶುಕ್ರವಾರ ಅದನ್ನು ತಲುಪಿಸಬೇಕಾಗಿದ್ದ ದಿನದಲ್ಲಿ ನಾನು DHL ನಿಂದ ಅನೇಕ ಅಸಮಂಜಸ ವರದಿಗಳನ್ನು ಸ್ವೀಕರಿಸಿದ್ದೇನೆ,’ ಎಂದು ಹೇಳಿದ್ದಾನೆ.

ಬಳಿಕ ನಾನು ಗೋದಾಮಿಗೆ ಹೋದೆ. ಸೋಮವಾರಂದು ಐಫೋನ್​ ಪೊಟ್ಟಣವನ್ನು ತೆಗೆದುಕೊಳ್ಳಲು 24-ಮೈಲಿ ಸುತ್ತು ಪ್ರಯಾಣ ಮಾಡಿದೆ. ನಂತರ ನಾನು ಮನೆಗೆ ಬಂದಾಗ, ಸಡಿಲವಾದ ಪೆಟ್ಟಿಗೆಯನ್ನು ತೆರೆದು ನೋಡಿದೆ. ಇದನ್ನು ಯಾರೋ ತೆರೆದಿದ್ದಾರೆ ಎಂದು ಗೊತ್ತಾಯಿತು. ಕೊನೆಗೆ ಬಾಕ್ಸ್​ ಆನ್ನು ಸಂಪೂರ್ಣ ತೆರೆದು ನೋಡಿದಾಗ ಅದರಲ್ಲಿ ಐಫೋನ್ 13 ಪ್ರೊ ಮ್ಯಾಕ್ಸ್‌ ಇರಲಿಲ್ಲ ಬದಲಿಗೆ ಎರಡು ಕ್ಯಾಡ್​ಬೆರಿ ಚಾಕೋಲೇಟ್​ ಇತ್ತು.

ಐಫೋನ್ 13 ಪ್ರೊ ಮ್ಯಾಕ್ಸ್‌ ಖರೀದಿಸಲು ಹೋಗಿ ಮೋಸ ಹೋದ ಪ್ರಸಂಗದ ವಿವರವನ್ನು ಡೇನಿಯಲ್​ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾನೆ. ಆಯಪಲ್‌ನ ವೆಬ್‌ಸೈಟ್‌ನಲ್ಲಿ ಖರೀದಿಸಿದ ನಂತರ ಈ ರೀತಿ ಮೋಸ ಹೋಗಿರುವ ಬಗ್ಗೆ ಹೇಳಿಕೊಂಡಿದ್ದಾನೆ. ಜೊತೆಗೆ DHL ನಿಂದ ಅನೇಕ ವಿರೋಧಾತ್ಮಕ ನವೀಕರಣಗಳನ್ನು ಸ್ವೀಕರಿಸಿದನ್ನು ಹೇಳಿಕೊಂಡಿದ್ದಾನೆ.

” ನಾನು DHL ನಿಂದ ಅನೇಕ ವಿರೋಧಾತ್ಮಕ ನವೀಕರಣಗಳನ್ನು ಸ್ವೀಕರಿಸಿದ್ದೇನೆ. ಮೊದಲ “ವಿತರಣೆಯಲ್ಲಿ” ತಡವಾಯಿತು, ನಂತರ “ವಿತರಣೆ ಮಾಡುವಾಗ ಸಮಯ ಮಧ್ಯಾಹ್ನ 1:45 ರಿಂದ 2:45 ಆಗಿತ್ತು.” ಎಂದು ಅವರು ಟ್ವೀಟ್ ಮಾಡಿದ್ದಾರೆ.”

ಡೇನಿಯಲ್​ ಅವರು ಸಂಕಷ್ಟವನ್ನು ಅರಿತು DHL ಪ್ರತಿಕ್ರಿಯಿಸಿದೆ. ಅವರು ಪರಿಸ್ಥಿತಿಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಈ ರೀತಿ ಮೋಸದ ದಾರಿ ಕಂಡುಕೊಂಡವರನ್ನು ಹುಡುಕಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. “ನಾವು ಇದೀಗ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ ಮತ್ತು ಡೇನಿಯಲ್​ ಐಫೋನ್ 13 ಪ್ರೊ ಮ್ಯಾಕ್ಸ್‌ ಬದಲಿಯನ್ನು ಪಡೆಯುತ್ತಾರೆ ಎಂದು ಡಿಹೆಚ್​​ಎಲ್​ ವಕ್ತಾರರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 12 ಫೋನಿಗೆ ಭರ್ಜರಿ ರಿಯಾಯಿತಿ!

Wed Dec 29 , 2021
ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಆಫರ್‌ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಸೇಲ್ ಆಯೋಜಿಸುತ್ತದೆ. ಅದೇ ರೀತಿ ಫ್ಲಿಪ್‌ಕಾರ್ಟ್‌ ಇದೀಗ ಇಯರ್‌ ಎಂಡ್ ಸೇಲ್ ಆಯೋಜಿಸಿದ್ದು, ಆಯ್ದ ಫೋನ್‌ಗಳಿಗೆ ಭರ್ಜರಿ ಕೊಡುಗೆ ನೀಡಿದೆ. ಹಾಗೆಯೇ ಈ ಸೇಲ್‌ನಲ್ಲಿ ಐಫೋನ್‌ 12 ಫೋನ್ ಸಹ ಆಕರ್ಷಕ ರಿಯಾಯಿತಿ ಪಡೆದಿದೆ. ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಆಯೋಜಿಸಿರುವ ಇಯರ್‌ ಎಂಡ್ ಸೇಲ್ ಸದ್ಯ ಚಾಲ್ತಿ ಇದೆ. […]

Advertisement

Wordpress Social Share Plugin powered by Ultimatelysocial