ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 12 ಫೋನಿಗೆ ಭರ್ಜರಿ ರಿಯಾಯಿತಿ!

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 12 ಫೋನಿಗೆ ಭರ್ಜರಿ ರಿಯಾಯಿತಿ!

ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ಆಫರ್‌ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಸೇಲ್ ಆಯೋಜಿಸುತ್ತದೆ. ಅದೇ ರೀತಿ ಫ್ಲಿಪ್‌ಕಾರ್ಟ್‌ ಇದೀಗ ಇಯರ್‌ ಎಂಡ್ ಸೇಲ್ ಆಯೋಜಿಸಿದ್ದು, ಆಯ್ದ ಫೋನ್‌ಗಳಿಗೆ ಭರ್ಜರಿ ಕೊಡುಗೆ ನೀಡಿದೆ.

ಹಾಗೆಯೇ ಈ ಸೇಲ್‌ನಲ್ಲಿ ಐಫೋನ್‌ 12 ಫೋನ್ ಸಹ ಆಕರ್ಷಕ ರಿಯಾಯಿತಿ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಆಯೋಜಿಸಿರುವ ಇಯರ್‌ ಎಂಡ್ ಸೇಲ್ ಸದ್ಯ ಚಾಲ್ತಿ ಇದೆ. ಈ ಸೇಲ್‌ ಮೇಳವು ಇದೇ ಡಿ. 31 ರ ವರೆಗೂ ಚಾಲ್ತಿ ಇರಲಿದೆ. ಈ ಸೇಲ್‌ನಲ್ಲಿ ಐಫೋನ್ 12 ಫೋನಿನ 64GB ವೇರಿಯಂಟ್ ಮಾಡೆಲ್‌ 51,999ರೂ. ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಗ್ರಾಹಕರಿಗೆ 15,450ರೂ. ವರೆಗೂ ಎಕ್ಸ್‌ಚೇಂಜ್ ಕೊಡುಗೆ ಲಭ್ಯ ಆಗಲಿದೆ. ಹಾಗೆಯೇ ರಿಯಲ್‌ಮಿ GT ನಿಯೋ 2 ಫೋನ್ ಸಹ ಆಕರ್ಷಕ ರಿಯಾಯಿತಿ ಪಡೆದಿದೆ. ಹಾಗಾದರೇ ಐಫೋನ್‌ 12 ಫೋನಿನ ಫೀಚರ್ಸ್‌ಗಳೆನು ಹಾಗೂ ರಿಯಲ್‌ಮಿ GT ನಿಯೋ 2 ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್‌ 12 ಫೀಚರ್ಸ್‌

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗುಡ್ ನ್ಯೂಸ್ ಇಂಡಿಯಾ- ಮುಂದಿನ ವರ್ಷ ಭಾರತದಲ್ಲಿ 5 G ಇಂಟರ್ ನೆಟ್ ಸೇವೆ ಆರಂಭ: DOT ಘೋಷಣೆ

Wed Dec 29 , 2021
ನವದೆಹಲಿ : ಭಾರತದಲ್ಲಿ ಸದ್ಯ 4G ನೆಟ್​ವರ್ಕ್ ಸಂಪರ್ಕ ಸೇವೆ ಲಭ್ಯವಿದೆ. 2022ರಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಹೋಗಲಿದೆ. ಭಾರತದಲ್ಲಿ ಮುಂದಿನ ವರ್ಷವೇ 5ಜಿ ಸಂಪರ್ಕ ಸೇವೆ ಆರಂಭವಾಗಲಿದೆ. 5ಜಿ ಸಂಪರ್ಕ ಸೇವೆಯಿಂದ ವೇಗದ ಇಂಟರ್ ನೆಟ್ ಸಂಪರ್ಕ ಸಾಧ್ಯವಾಗಲಿದೆ. ದೇಶದ ಆರೋಗ್ಯ, ದೂರಸಂಪರ್ಕ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ 5ಜಿ ಸಂಪರ್ಕ ಸೇವೆಯಿಂದ ಸಾಧ್ಯವಾಗುವ ನಿರೀಕ್ಷೆ ಇದೆ. ಆದರೆ, 5ಜಿ ಸಂಪರ್ಕ ಸೇವೆಯನ್ನು ಮೊದಲಿಗೆ ಎಲ್ಲೆಲ್ಲಿ ಆರಂಭಿಸಲಾಗುತ್ತದೆ […]

Advertisement

Wordpress Social Share Plugin powered by Ultimatelysocial