ಚುನಾವಣೆ ಫಲಿತಾಂಶ ಬಂದ ಬಳಿಕ ಯಾರು ಬರ್ತಾರೆ ಅಂತಾ ಹೇಳ್ತಿನಿ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ನಿಂದ ಬಿಜೆಪಿಗೆ ಮತ್ತೆ ಯಾರಾದ್ರೂ ಬರ್ತಾರಾ ಎಂಬ ಪ್ರಶ್ನೆಗೆ ರಮೇಶ್ ಜಾರಕಿಹೊಳಿ “ಈಗ ಯಾರು ಬರುವುದಿಲ್ಲ ಚುನಾವಣೆ ಫಲಿತಾಂಶ ಬಂದ ಬಳಿಕ ಯಾರು ಬರ್ತಾರೆ ಅಂತಾ ಹೇಳ್ತಿನಿ. ರಿಸಲ್ಟ್ ದಿನ ಯಾರು ನನ್ನ ಕಡೆಗೆ ಬರ್ತಾರೆ?
ಎಷ್ಟು ಜನ ಬರ್ತಾರೆ ಅನ್ನೋದನ್ನ ಹೇಳ್ತಿನಿ ” ಎಂದು ಪ್ರತಿಕ್ರಿಯಿಸಿದ್ದಾರೆ.ಬೆಳಗಾವಿ: ರಾಜ್ಯದಲ್ಲಿ ಚುನಾವಣೆ ನಂತರ ಮತ್ತೆ ಆಪರೇಷನ್ ಕಮಲ  ಆಗುತ್ತಾ ಎಂಬ ಪ್ರಶ್ನೆಗೆ ರಮೇಶ್ ಜಾರಕಿಹೊಳಿ  ಅವರು ಬೆಳಗಾವಿಯಲ್ಲಿ  ಟಿವಿ9 ಜೊತೆ ಮಾತನಾಡುವಾಗ ಎಕ್ಸ್‌ಕ್ಲೂಸಿವ್ ಹೇಳಿಕೆಯೊಂದನ್ನು ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಮತ್ತೆ ಯಾರಾದ್ರೂ ಬರ್ತಾರಾ ಎಂದು ಕೇಳಿದಾಗ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಒಂದನ್ನು ಸಿಡಿಸಿದಂತೆ ಕಾಣುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ನಿಂದ ಬಿಜೆಪಿಗೆ ಮತ್ತೆ ಯಾರಾದ್ರೂ ಬರ್ತಾರಾ ಎಂಬ ಪ್ರಶ್ನೆಗೆ ರಮೇಶ್ ಜಾರಕಿಹೊಳಿ “ಈಗ ಯಾರು ಬರುವುದಿಲ್ಲ ಚುನಾವಣೆ ಫಲಿತಾಂಶ ಬಂದ ಬಳಿಕ ಯಾರು ಬರ್ತಾರೆ ಅಂತಾ ಹೇಳ್ತಿನಿ. ರಿಸಲ್ಟ್ ದಿನ ಯಾರು ನನ್ನ ಕಡೆಗೆ ಬರ್ತಾರೆ? ಎಷ್ಟು ಜನ ಬರ್ತಾರೆ ಅನ್ನೋದನ್ನ ಹೇಳ್ತಿನಿ ” ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಮ್ಮೆ ಆಪರೇಷನ್ ಕಮಲ ಆಗುತ್ತಾ?

ಮತ್ತೊಮ್ಮೆ ಆಪರೇಷನ್‌ ಕಮಲ ಆಗುತ್ತಾ ಎಂದು ಕೇಳಿದಾಗ ರಮೇಶ್ ಜಾರಕಿಹೊಳಿ, “ಹಂಡ್ರೆಡ್ ಪರ್ಸಂಟ್ ಆಗುತ್ತೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನಾನು ಬಿಡುವುದಿಲ್ಲ. ಕಾಂಗ್ರೆಸ್‌ಗೆ ಯಾವುದೇ ಪರಿಸ್ಥಿತಿಯಲ್ಲಿ ಸರ್ಕಾರ ಕಟ್ಟಲು ಆಗೋದಿಲ್ಲ. ನನ್ನ ಬಳಿ ಎನೂ ಇಲ್ಲದಾಗ ನಾನು ಹದಿನೇಳು ಜನರನ್ನ ಬಿಜೆಪಿಗೆ ತಂದು ಕುಡಿಸಿದ್ದೇನೆ. ಆದರೆ ಈಗ ಹೈಕಮಾಂಡ್ ಅವರ ದೊಡ್ಡ ಪ್ರಮಾಣದಆಶೀರ್ವಾದ ನನ್ನ ಮೇಲಿದೆ, ಹಾಗಾಗಿ ಮುಂದೇನಾಗುತ್ತೆ ಅಂತ ನೀವೇ ನೋಡಿ” ಎಂದು ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ.

“ಈ ಸಲುವಾಗಿ ಡಿಕೆ ಶಿವಕುಮಾರ್ ಗಡಬಡಾಯಿಸುತ್ತಿದ್ದಾನೆ. ಆಪರೇಷನ್ ಕಮಲ ಮಾಡಿ ಕಾಂಗ್ರೆಸ್‌ದಿಂದ ಮತ್ತೆ ಶಾಸಕರನ್ನ ಬಿಜೆಪಿಗೆ ತಂದೆ ತರುತ್ತೇನೆ” ಎಂದು ಟಿವಿ9 ಜೊತೆ ಮಾತನಾಡುವಾಗ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಪರಮೇಶ್ವರ್ ಬಿಜೆಪಿಗೆ ಬರ್ತಾರಾ ಎಂಬ ಪ್ರಶ್ನೆಗೆ, ” ಈ ಸಂದರ್ಭದಲ್ಲಿ ಯಾರ ಬಗ್ಗೆ ಹೇಳುವುದು ಬೇಡಾ. ಪರಮೇಶ್ವರ ಅವರು ಬಹಳ ದಿನ ಆಯ್ತು ಭೇಟಿಯಾಗಿಲ್ಲ. ಪರಮೇಶ್ವರ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ” ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್‌ದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ವಿಚಾರ

ಗೋಕಾಕ್‌ದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಮಾಡಲಿ ಎಂಬ ಪಂಚಮಸಾಲಿ ಸಮುದಾಯದ ಮುಖಂಡರ ಆಗ್ರಹ ವಿಚಾರವಾಗಿ ಮಾತನಾಡುವಾಗ ಬೆಳಗಾವಿಯಲ್ಲಿ ಟಿವಿ9‌ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ “ಅವರು ಬರಲಿ ಸ್ವಾಗತ, ಬಂದ್ರೇ ಬಹಳ ಚುಲೋ” ಎಂದು ಹೆಬ್ಬಾಳ್ಕರ್‌ಗೆ ಗೋಕಾಕ್‌ ಕ್ಷೇತ್ರಕ್ಕೆ ಆಹ್ವಾನ ಕೊಟ್ಟಿದ್ದಾರೆ.

ಆಪರೇಷನ್ ಕಮಲ

ದೇಶಕ್ಕೆ ಮೊದಲ ಬಾರಿ ಆಪರೇಷನ್ ಕಮಲ ಪರಿಚಯಿಸಿ ಬಿಎಸ್. ಯಡಿಯೂರಪ್ಪ ಯಶಸ್ಸು ಗಳಿಸಿದ ಬಳಿಕ ಬಿಜೆಪಿ ದೇಶದ ರಾಜಕಾರಣದ ಮೇಲೆ ಪ್ರಯೋಗಿಸುತ್ತಿದೆ. 2018 ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ 17 ಜನ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಇದರಿಂದ ಅಂದಿನ ಸಮಿಶ್ರ ಸರ್ಕಾರವು ಉರುಳಿತು. ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್‌, ಜೆಡಿಎಸ್‌ನ 17 ಶಾಸಕರ ಪೈಕಿ ರಮೇಶ್ ಜಾರಕಿಹೊಳಿ ಕೂಡ ಒಬ್ಬರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಮಿಳುನಾಡಿನಲ್ಲಿ ಕಾಂಗ್ರೆಸ್​-ಡಿಎಂಕೆಗೆ ನಟ ಕಮಲ್ ಹಾಸನ್ಬೆಂ ಬಲ ಸಿಕ್ಕಿದೆ,

Sun Feb 19 , 2023
ತಮಿಳುನಾಡಿನಲ್ಲಿ ಕಾಂಗ್ರೆಸ್​-ಡಿಎಂಕೆಗೆ ನಟ ಕಮಲ್ ಹಾಸನ್ಬೆಂ ಬಲ ಸಿಕ್ಕಿದೆ, ಈರೋಡ್​ನಲ್ಲಿ ಇಳಂಗೋವನ್ ಪರ ಪ್ರಚಾರ ನಡೆಸಲಿದ್ದಾರೆ.ತಮಿಳುನಾಡಿನಲ್ಲಿ ಕಾಂಗ್ರೆಸ್​-ಡಿಎಂಕೆಗೆ ನಟ ಕಮಲ್ ಹಾಸನ್ಬೆಂಬಲ ಸಿಕ್ಕಿದೆ, ಈರೋಡ್​ನಲ್ಲಿ ಇಳಂಗೋವನ್ ಪರ ಪ್ರಚಾರ ನಡೆಸಲಿದ್ದಾರೆ. ನಟ-ರಾಜಕಾರಣಿ ಕಮಲ್ ಹಾಸನ್ ಅವರು ಭಾನುವಾರ ಈರೋಡ್ ಪೂರ್ವ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದು, ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಅಭ್ಯರ್ಥಿ ಇವಿಕೆಎಸ್ ಇಳಂಗೋವನ್ ಪರ ಪ್ರಚಾರ ನಡೆಸಲಿದ್ದಾರೆ. 2018 ರಲ್ಲಿ ಸ್ಥಾಪನೆಯಾದ ನಂತರ 2021 ರ […]

Advertisement

Wordpress Social Share Plugin powered by Ultimatelysocial