PUC Examination:ಸೆಕೆಂಡ್ ಪಿಯುಸಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ;

ಬೆಂಗಳೂರು: ಪಠ್ಯಕ್ರಮ ಪೂರ್ಣಗೊಳಿಸಲು ಸಮಯಾವಕಾಶ ಬೇಕಿರುವುದರಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಒಂದು ತಿಂಗಳು ವಿಳಂಬವಾಗಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೊರೋನಾ ಕಾರಣದಿಂದಾಗಿ ಶೈಕ್ಷಣಿಕ ಅವಧಿ ಕಡಿತಗೊಂಡಿದೆ.

ಇದರ ಪರಿಣಾಮ ಪಠ್ಯಕ್ರಮ ಪೂರ್ಣಗೊಳಿಸಲು ಸಮಯ ಬೇಕಿದ್ದು, ಪರೀಕ್ಷೆಯನ್ನು ಮುಂದೂಡುವ ಚಿಂತನೆ ನಡೆಸಲಾಗಿದೆ. ಪ್ರತಿ ವರ್ಷ ಮಾರ್ಚ್ ವೇಳೆಗೆ ನಡೆಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಈ ಬಾರಿ ಮೇ -ಜೂನ್ ನಲ್ಲಿ ನಡೆಯುವ ಸಾಧ್ಯತೆಯಿದೆ.

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಅಂಕಗಳು ಪ್ರಮುಖವಾಗಿರುವುದರಿಂದ ಪಠ್ಯಕ್ರಮ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಪಠ್ಯಕ್ರಮ ಪೂರ್ಣಗೊಳಿಸಬೇಕಿರುವುದರಿಂದ 15 -20 ದಿನ ತಡವಾಗಿ ಪರೀಕ್ಷೆ ಆರಂಭವಾಗಬಹುದು ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಷಕಾರಿ ಹಾವಿನಿಂದ ತನ್ನ ಮಾಲೀಕನನ್ನ ರಕ್ಷಿಸಿದ ಸಾಕು ನಾಯಿ

Tue Dec 28 , 2021
ವಿಜಯವಾಡದಲ್ಲಿ ನಾಗರ ಹಾವಿನಿಂದ ಮಾಲೀಕನನ್ನು ರಕ್ಷಿಸಿದ ಸಾಕು ನಾಯಿ ಸಾವನ್ನಪ್ಪಿದೆ  ಗೆಸ್ಟ್ ಹೌಸ್ ಗೆ ನುಗ್ಗಿದ ವಿಷಕಾರಿ ಹಾವನ್ನು ಕಂಡು ದಾಳಿ ಮಾಡಿದ ನಾಯಿ ಕೈಸರ್ ಇಲ್ಲದಿದ್ದರೆ ನರವನೇನಿ ಮುರಳಿ ಸಂಕಷ್ಟಕ್ಕೆ ಸಿಲುಕುತ್ತಿದ್ದರು  ಸರೀಸೃಪ ಒಳಗಿದೆ ಎಂಬ ಅರಿವಿಲ್ಲದೆ ಮುರಳಿ ಗೆಸ್ಟ್ ಹೌಸ್ ಪ್ರವೇಶಿಸಿದ್ದ. ಹಿಂತಿರುಗಿ ನೋಡಿದಾಗ ತನ್ನ ಮುದ್ದಿನ ನಾಯಿ ಕೈಸರ್ ಶವದ ಪಕ್ಕದಲ್ಲಿ  ನಾಗರಹಾವು ಸತ್ತು ಬಿದ್ದಿರುವುದು ಕಂಡಿತು.ಕ್ರಷರ್ ಘಟಕ ನಡೆಸುತ್ತಿರುವ ಇವರು ನಗರದ ಹೊರವಲಯದ ನಂದಿ […]

Advertisement

Wordpress Social Share Plugin powered by Ultimatelysocial