ರಾಜ್ಯದಲ್ಲಿ ಕೊರೊನಾ ಭೀಕಾರತೆಯಿಂದಾಗಿ ಜನರು ಆತಂಕದಲ್ಲಿ ಇದ್ದಾರೆ.ಆದರೆ ರಾಜ್ಯದ ಹಲವು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಗಾಳಿ ಸಹಿತ ಮಳೆಯಾಗಿತ್ತು, ಇದರಿಂದ ರೈತರ ಭಾರೀ ಆಸ್ತಿಪಾಸ್ತಿಗಳಿಗೆ ತೊಂದರೆಯಾಗಿದೆ. ಬದಾಮಿ ಹೊರವಲಯದ ರೈತರ ಹೊಲದಲ್ಲಿ ೮೦ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿಬಿದ್ದಿವೆ. ಬಸವರಾಜ ,ಹನುಮಂತ, ರಾಮಪ್ಪ, ಗ್ಯಾನಪ್ಪ, ಮಾಗುಂಡಪ್ಪ, ಎಂಬವರ ಮನೆಗಳ ಮೇಲ್ಚಾವಣಿಗೆ ಹೊದಿಸಲಾಗಿದ್ದ ಕಬ್ಬಿಣದ ಶೀಟ್ಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಮತ್ತೊಂದೆಡೆ ಅಪಾರ […]

ರ‍್ನಾಟಕದ ಬೆಂಗಳೂರು ನಗರದ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಚಾಮರಾಜಪೇಟೆಯ ಲಾಕ್ ಡೌನ್ ವೇಳೆಯಲ್ಲಿ ಕರ‍್ಯ ನರ‍್ವಹಿಸುತ್ತಿದ್ದರು. ಪೊಲೀಸ್ ಸಿಂಬ್ಬದಿ ಒಬ್ಬರು ಬೆಳಗಾವಿ ಪ್ರಯಾಣ ಮಾಡಿದ್ದು ಇವರಿಗೆ ಸೋಂಕು ತಗುಲಿದೆ. ಮತ್ತು ಪಾದರಾಯನಪುರ ವರ‍್ಡ್ನಲ್ಲಿ ಕರ‍್ಯ ನರ‍್ವಹಿಸುತ್ತಿದ್ದ ಹೆಡ್ ಕಾನ್ಸ್‌ಟೇಬಲ್‌ಗೆ ಸೋಂಕು ತಗುಲಿದೆ. ನಗರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸರದಿಯ ಆಧಾರದ ಮೇಲೆ ಪರೀಕ್ಷೆ ನಡೆಯುತ್ತಿರುವ […]

ದೇಶದಲ್ಲಿ ಲಾಕ್​ಡೌನ್​ ಸಡಿಲಿಕೆ ಬಳಿಕ ಕೊರೊನಾ ರ‍್ಭಟ ಹೆಚ್ಚಾಗಿದೆ ಕೊರೊನಾ ವೈರಸ್ ಮಹಾಮಾರಿ ದೇಶದಲ್ಲಿ ಕಳೆದ ೨೪ ಗಂಟೆಯಲ್ಲಿ ೮೧೭೧ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ . ಇದರಿಂದ.ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ೧,೯೮,೭೦೬ಕ್ಕೆ ಏರಿಕೆಯಾಗಿದೆ. ಹಾಗೂ ಗುಣಮುಖರಾಗುವವ ಪ್ರಮಾಣ ಶೇ.೪೮ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ೩,೭೦೭ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚರ‍್ಜ್ ಆಗಿದ್ದಾರೆ.೨೦೪ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ, ಇದುವರೆಗೂ ದೇಶದಲ್ಲಿ ಕೊರೊನಾಗೆ ಒಟ್ಟಾರೆ ಬಲಿಯಾದವರ ಸಂಖ್ಯೆ ೫೫೯೮ಕ್ಕೆ ಏರಿಕೆಯಾಗಿದೆ. ಎಂದು […]

ಕಾರವಾರ ತಾಲ್ಲೂಕಿನ ವಿವಿಧೆಡೆ ಇಂದು ಬೆಳಿಗ್ಗೆಯಿಂದ ಗುಡುಗು ಸಹಿತ ಧಾರಕಾರ ಮಳೆ ಬರುತ್ತಿದ್ದು.ನಿನ್ನೆ ಸಂಜೆಯೂ ನಗರದಲ್ಲಿ ಉತ್ತಮ ಮಳೆಯಾಗಿದೆ.ಉತ್ತರ ಕನ್ನಡದ ಭಾಗದಲ್ಲಿ ಭತ್ತದ ವ್ಯವಸಾಯ ಮಾಡುವವರು ಹೊಲಗಳನ್ನು ಉಳುಮೆ ಬಿತ್ತನೆಗೆ ಸಿದ್ಧತೆ ಆರಂಭಿಸಿದ್ದಾರೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ಉತ್ತಮವಾಗಿ ಮಳೆ ಬೀಳಲಿದೆ ಎಂದು ಸಂತಸದಿಂದ ರೈತರು ಅಭಿಪ್ರಾಯಪಟ್ಟಿದ್ದಾರೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮಂಗಳವಾರದಂದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ […]

ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಳೆದ 3 ತಿಂಗಳಿನಿಂದ ಕೆಲಸಕ್ಕೆ ಹಾಜರಾಗದ 150 ಜನ ಹಾಪ್‍ಕಾಮ್ಸ್ ನೌಕರರ ವಿರುದ್ಧ ಪರಿಶೀಲಿಸಿ ನಂತರ ಕಠಿಣ ಕ್ರಮ ಜಾರಿಗೊಳಿಸುವಂತೆ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ರಾಜ್ಯದ 550 ಹಾಪ್‍ಕಾಮ್ಸ್ ಮಳಿಗೆಗಳ ಪೈಕಿ ಕೇವಲ 250 ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು . […]

ದಾವಣಗೆರೆಯಲ್ಲಿ‌ ಇಂದು ಮತ್ತೊಂದು ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೋಲಿಸ್ ಪೇದೆಗೆ ಕೋರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕು ದೃಢವಾಗಿದೆ. ಕಳೆದ ಒಂದು ದಿನದ ಹಿಂದೆ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ವರದಿಗಾಗಿ ಕಳುಹಿಸಲಾಗಿತ್ತು. ಇಂದು ವರದಿ ಪಾಸಿಟಿವ್ ಬಂದಿದೆ. ಆದ್ದರಿಂದ ಸೋಂಕಿತ ಪೋಲಿಸ್ ಪೇದೆಗೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡುತ್ತಿದ್ದು. ಹಾಗೆಯೇ ಅವರ ಕುಟುಂಬದವರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮತ್ತು ಕೋವಿಡ್ ಆಸ್ಪತ್ರೆಯಲ್ಲಿ ಅವರ ಜೊತೆಗೆ […]

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್‌ ಡೌನ್‌ ಜಾರಿಗೊಳಿಸಿದ್ದರಿಂದ ಬೆಳೆಗಾರರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದರು. ಹಾಗೂ ಕೆಲವು ಕಡೆ ರೈತರುಗಳು ಆತ್ಮಹತ್ಯಗೆ ಶರಣಾಗಿದ್ದರು.  ಈ ಹಿನ್ನಲೆಯಲ್ಲಿ ಮೆಕ್ಕೆಜೋಳ ಹಾಗೂ ಹೂವು ಬೆಳೆದ ರೈತರ ನೆರವಿಗೆ ಧಾವಿಸಿದ್ದ ರಾಜ್ಯ ಸರ್ಕಾರ ಪರಿಹಾರ ಧನ ನೀಡುವುದಾಗಿ ಪ್ರಕಟಿಸಿತ್ತು. ಅದೇ ರೀತಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು  ಗೃಹ ಕಚೇರಿ ಕೃಷ್ಣಾದಲ್ಲಿ ಆನ್ಲೈನ್ ಮೂಲಕ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪವನ್ನು ಸಮರ್ಪಕವಾಗಿ ಎದುರಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ತಂಡ ಜೂ.4 ರಂದು ಜಿಲ್ಲೆಗೆ ಆಗಮಿಸಲಿದೆ. ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದ್ದು. ಇಂದು ಕರಾವಳಿ ಭಾಗದಲ್ಲಿ 115.6 ಮಿಲೀಮೀಟರ್ ನಿಂದ 204.4 ಮಿಲೀಮೀಟರ್ ನಷ್ಟು ಮಳೆಯಾಗಲಿದೆ, ಇದೇ ವೇಳೆ ಗುಡುಗು ಮತ್ತು ಗಾಳಿ ಕೂಡ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಮೀನುಗಾರಿಕೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅರಬ್ಬಿ ಸಮುದ್ರದಲ್ಲಿ […]

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ರವರು ನಗರದಲ್ಲಿ ಮಳೆಯಿಂದಾಗಿರುವ ಪ್ರವಾಹವನ್ನು ತಡೆಯಲು ನಾವು ಸನ್ನದ್ದರಾಗಿದ್ದೇವೆಂದು ಹೇಳಿದ್ದಾರೆ. ನಗರದಲ್ಲಿ ಮಳೆಯಿಂದಾಗಿರುವ ಅವಾಂತರ ತಪ್ಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಬಿಬಿಎಂಪಿ, ರಾಜ್ಯ ನೈರ‍್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಸ್ಕಾಂ, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳೊಂದಿಗೆ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಇಂದು ಸಭೆ ನಡೆಸಿದರು.

 ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ  ಗಿರಿಯಪ್ಪ (60) ಅಕ್ಕಮ್ಮ (55) ರವರ ಮಗ ರಾಮು, ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಪಟ್ಟು, ಕ್ಷುಲ್ಲಕ ಕಾರಣಕ್ಕೆ ಹೆತ್ತವರ ಮೇಲೆ ಜಗಳ ತೆಗೆದು ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ತಂದೆ ಸಾವು–ಬದುಕಿನ‌ ಮಧ್ಯೆ ಹೋರಾಡಿ, ಗಂಗಾವತಿ ಆಸ್ಪತ್ರೆಯಲ್ಲಿ    ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಆರೋಪಿ ರಾಮು ಪೊಲೀಸ್ ಅಧಿಕಾರಿಗಳ  ವಶದಲ್ಲಿದ್ದಾನೆ.

Advertisement

Wordpress Social Share Plugin powered by Ultimatelysocial