ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ  ಗಿರಿಯಪ್ಪ (60) ಅಕ್ಕಮ್ಮ (55) ರವರ ಮಗ ರಾಮು, ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಪಟ್ಟು, ಕ್ಷುಲ್ಲಕ ಕಾರಣಕ್ಕೆ ಹೆತ್ತವರ ಮೇಲೆ ಜಗಳ ತೆಗೆದು ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ತಂದೆ ಸಾವು–ಬದುಕಿನ‌ ಮಧ್ಯೆ ಹೋರಾಡಿ, ಗಂಗಾವತಿ ಆಸ್ಪತ್ರೆಯಲ್ಲಿ    ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಆರೋಪಿ ರಾಮು ಪೊಲೀಸ್ ಅಧಿಕಾರಿಗಳ  ವಶದಲ್ಲಿದ್ದಾನೆ.

ಗುಜರಾತ್ನಲ್ಲಿರುವ ರ‍್ದಾರ್ ವಲ್ಲಭ ಬಾಯ್ ಪ್ರತಿಮೆ ಮಾದರಿಯಲ್ಲಿ ಆನೇಕಲ್ ಸಮೀಪ ಮುತ್ಯಾಲ ಮಡುವಿನಲ್ಲಿ ೧೨೦ ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ನರ‍್ಮಿಸುವುದಾಗಿ ವಸತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.  ಮುತ್ಯಾಲ ಮಡುವಿನಲ್ಲಿ ೧೮೦ ಎಕರೆ ಜಮೀನಿನಲ್ಲಿ ,ಪ್ರವಾಸೋದ್ಯಮ ಕೇಂದ್ರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ತೀರಾ ಹಾಳಾಗಿದೆ. ರಾಜ್ಯ ರ‍್ಕಾರದ ರ‍್ಥಿಕ ಸ್ಥಿತಿಯೂ ಚೆನ್ನಾಗಿಲ್ಲ. ಹೀಗಾಗಿ, ರ‍್ಕಾರ […]

ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಮುಚ್ಚಲಾಗಿದ್ದ ಶಾಲಾ ಕಾಲೇಜಿಗಳನ್ನು  ಪುನರಾರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಅಧಿಕಾರಿಗಳ ಜೊತೆ ಚಿಂತನೆ ನಡೆಸುತ್ತಿದ್ದು, ಜುಲೈ ತಿಂಗಳಲ್ಲಿ ಇದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಾಗೂ ಎಸ್‌ಡಿಎಂಸಿ ಸದಸ್ಯರು ಪೋಷಕರ ಅಭಿಪ್ರಾಯ ಸಂಗ್ರಹಿಸಿ ನಂತರ ತೀರ್ಮಾನಿಸಲಾಗುವುದು ಎಂದರು. ಕೊರೊನಾ ನಿಯಂತ್ರಣದ ದೃಷ್ಟಿಯಿಂದ ಶಾಲೆ ಪ್ರಾರಂಭವಾದ ನಂತರ ಸ್ಕೂಲ್‌ನಲ್ಲಿ […]

ಭಾರಿ ಕುತೂಹಲ ಕೆರಳಿಸಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೊನೆಗೂ ಜಲಸಂಪನ್ಮೂಲ ಖಾತೆ ಮಂತ್ರಿ ರಮೇಶ್ ಜಾರಕಿಹೊಳಿ ಪಾಲಾಗಿದೆ. ಹಾಸನ ಜಿಲ್ಲಾ ಉಸ್ತುವಾರಿಯನ್ನು ಕೆ. ಗೋಪಾಲಯ್ಯ ಅವರಿಗೆ ನೀಡಲಾಗಿದೆ. ಇಲ್ಲಿಯವರೆಗೆ ಜಗದೀಶ್ ಶೆಟ್ಟರ್ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈಗ ಆ ಸ್ಥಾನಕ್ಕೆ ಜಾರಕಿಹೊಳಿ ಬಂದಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯಲ್ಲಿ ನಾಲ್ಕು ಜನ ಸಚಿವರಿದ್ದರೂ ಹೊರ ಜಿಲ್ಲೆಯವರಿಗೆ ಉಸ್ತುವಾರಿ ಹೊಣೆ ನೀಡಲಾಗಿತ್ತು. ಇನ್ನು ವಿವಾದಗಳ ಮೂಲಕ […]

ರಾವಂದೂರಿನ ಹಾಸ್ಟೆಲ್‌ ವಾರ್ಡ್‌ನ್ ಎಚ್.ರಾಜಯ್ಯ ಎಂಬುವವರಿಗೆ ನೀಡಲಾಗಿದ್ದ ಕಾರಣ ಕೇಳಿ ನೋಟಿಸು ವಾಪಸ್ ಪಡೆಯಲು ಹಾಗೂ ಹಾಸ್ಟೆಲ್‌ ಅನ್ನು ತಪಾಸಣೆ ನಡೆಸದಿರಲು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು ಅವರನ್ನು ಒಪ್ಪಿಸುವುದಾಗಿ ಹೇಳಿದ ದ್ವಿತೀಯ ದರ್ಜೆ ಗುಮಾಸ್ತ (ಎಸ್‌ಡಿಎ) ಶಿವಣ್ಣ ಅವರು ಒಟ್ಟು 1.5 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಮೊದಲೇ 50 ಸಾವಿರ ರೂ ಹಣವನ್ನು ರಾಜಯ್ಯ ನೀಡಿದ್ದರು. ಆದರೂ ಬಾಕಿ ಒಂದು ಲಕ್ಷ […]

ದೇಶಾದಾದ್ಯಂತ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಪ್ರಕರಣಗಳನ್ನುದ್ದೇಶಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಪ್ರಮಾಣ ಮಾಡಿದಂತೆಯೇ ದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದಾಗಿ ಹೇಳಿದ್ದಾರೆ. ಟ್ರಂಪ್ ಅವರು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಶ್ವೇತ ಭವನದ ಹತ್ತಿರ ರಕ್ಷಣಾ ಪಡೆಗಳು ಹಾಗೂ ಪ್ರತಿಭಟನಾ ನಿರತರ ನಡುವೆ ಘರ್ಷಣೆ ನಡೆಯಿತು. ಇದನ್ನು ತಡೆಯಲು ಸಾವಿರಾರು ಸೈನಿಕರನ್ನು ನಿಯೋಜಿಸುವುದಾಗಿ ಎಚ್ಚರಿಕೆ ನೀಡಿದ್ರು. ಅಮೆರಿಕನ್ನರೇ, ಅಧ್ಯಕ್ಷನಾಗಿ ನನ್ನ ಅತ್ಯುನ್ನತ ಕರ್ತವ್ಯವೆಂದರೆ, ನಮ್ಮ ಮಹಾನ್ ದೇಶ ಮತ್ತು […]

ದೆಹಲಿ: ಕೊರೊನಾ ವೈರಸ್ ಭೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಭೋಗಿಗಳನ್ನೇ ಐಸೋಲೇಶನ್ ವಾರ್ಡ್‌ಗಳಾಗಿ ಪರಿವರ್ತಿಲಾಗಿತ್ತು. ಇದೀಗ, ದೆಹಲಿಯಲ್ಲಿ ಮೊದಲ ಸಲ ರೈಲು ಐಸೋಲೇಶನ್ ವಾರ್ಡ್ನಲ್ಲಿ ಕೊರೊನಾ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ.ದೆಹಲಿ ಸರ್ಕಾರದ ಮನವಿ ಮೆರೆಗೆ AC ರಹಿತವಾದ 10 ಬೋಗಿಗಳನ್ನು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನಿಯೋಜಿಸಲಾಗಿದೆ. ಅದರಲ್ಲಿ 160 ಬೆಡ್ ಗಳನ್ನು ಹೊಂದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುಂಚೆ ದೆಹಲಿಯಲ್ಲಿ ಸುಮಾರು 117 ಖಾಸಗಿ […]

ಬೆಂಗಳೂರು: ಜೂನ್ 30 ರ ವರೆಗೂ ದೇಶಾದ್ಯಂತ ಲಾಕ್ಡೌನ್ ಮುಂದುವರೆಯಲಿದೆ. ಲಾಕ್ಡೌನ್ 5.0 ಘೋಷಣೆ ಮಾಡಿದ ಬೆನ್ನಲ್ಲೇ ಹಲವು ವಿನಾಯಿತಿಗಳನ್ನು ನೀಡಲಾಗಿದೆ.ಈಗಾಗಲೇ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಬಸ್ ಸಂಚಾರ ಆರಂಭಿಸಲಾಗಿದೆ. ನೈಟ್ ಕರ್ಫ್ಯೂ ಅವಧಿಯನ್ನು ಸಡಿಲಗೊಳಿಸಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದ್ದು, ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಅಂತೆಯೇ ಕೆಎಸ್‌ಆರ್ಟಿಸಿ ಬಸ್ ಗಳು ರಾತ್ರಿ […]

ದಾವಣಗೆರೆ: ಕೊರೊನಾ ವಾರಿಯರ್ಸ್ ಗೆ ಒಳ್ಳೆಯದಾಗಲಿ ಹಾಗೂ ಕೊರೊನಾ ವೈರಸ್ ನಿವಾರಣೆಗೆ ಪ್ರಾರ್ಥಿಸಿ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಗಿತ್ತು.ಹೊನ್ನಾಳಿ ಮತ್ತು ನ್ಯಾಮತಿಯ ಅವಳಿ ತಾಲ್ಲೂಕಿನಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದವರಿಗೆ ಇಂದು ಹೊನ್ನಾಳಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪುಷ್ಪವೃಷ್ಟಿ ಹಾಗೂ ಮಾಲಾರ್ಪಣೆಯ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಸರ್ವರಿಗೂ ಒಳ್ಳೆಯದಾಗಲಿ, ಕಾಲಕಾಲಕ್ಕೆ ಮಳೆ-ಬೆಳೆ ಉತ್ತಮವಾಗಲಿ ಎಂದು ಪ್ರಾರ್ಥಿಸಲಾಯಿತು. ಈ ವೇಳೆ ಹಿರೇಕಲ್ಮಠದ ಶ್ರೀಗಳು, ಶಾಸಕರಾದ ರೇಣುಕಾಚಾರ್ಯ ದಂಪತಿ, ಜಿಲ್ಲಾಧಿಕಾರಿ […]

ಬಾಲಿವುಡ್‌ನ ಖ್ಯಾತ್ ಸಂಗೀತ ಸಂಯೋಜಕ ವಾಜಿದ್ ಖಾನ್ ವಿಧಿವಶರಾಗಿದ್ದಾರೆ. ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಸೋಂಕು ತಗುಲಿತ್ತು ಎಂಬ ಶಂಕೆ ಕೂಡಾ ವ್ಯಕ್ತವಾಗಿತ್ತು. ವಾಜಿದ್ ಖಾನ್‌ಗೆ ೪೨ ವಯಸ್ಸಾಗಿತ್ತು. ಸಾಜಿದ್-ವಾಸಿದ್ ಜೋಡಿ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ೧೯೯೮ರಲ್ಲಿ ಸಲ್ಮಾನ್ ಖಾನ್ ನಟನೆಯ ಪ್ಯಾರ ಕಿಯಾ ತೋ ಡರ್‌ನಾ ಕ್ಯಾ ಮೂಲಕ ಈ ಜೋಡಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿತ್ತು.  ಲಾಕ್‌ಡೌನ್ ಟೈಮ್‌ನಲ್ಲಿ ಬಿಡುಗಡೆಯಾಗಿರೋ […]

Advertisement

Wordpress Social Share Plugin powered by Ultimatelysocial