ಸಿಐಟಿಯು ಪದಾಧಿಕಾರಿಗಳಿಂದ ಮಧುಗಿರಿ ತಾಲ್ಲೂಕು ಪಂಚಾಯಿತಿ ಸಭಾಂಗಣದ ಮುಂದೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ದೇಶವ್ಯಾಪಿಯಿಂದ  ಕರೆದಿದ್ದ ಪ್ರತಿಭಟನೆಗೆ ಮಧುಗಿರಿ ಪದಾಧಿಕಾರಿಗಳು ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಕಮಲ, ತಾಲ್ಲೂಕು ಅಧ್ಯಕ್ಷೆ  ಪಾರ್ವತಮ್ಮ , ಸಂಚಾಲಕಿ ಸುಕನ್ಯಾ, ಭಾರತಿ ಇನ್ನೂ ಹಲವರು ಭಾಗಿಯಾಗಿದ್ದರು.

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಗುರುವಾರ ನಗರದಲ್ಲಿ ೮೮೯ ಪ್ರಕರಣ ದಾಖಲಾಗಿದೆ. ಬಿಬಿಎಂಪಿಯ ೧೫ ಸಿಬ್ಬಂದಿಗಳಿಗೂ ಸೋಂಕು ತಗುಲಿದೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಕೆಲ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಈಗ ಬಿಬಿಎಂಪಿ ಸಿಬ್ಬಂದಿಗೂ ಮಾರಕ ಸೋಂಕು ತಗುಲಿರುವುದು ವರದಿಯಾಗಿದೆ. ಮರ‍್ಚ್ ತಿಂಗಳಿನಿಂದ ಬಿಬಿಎಂಪಿ ಸಿಬ್ಬಂದಿಗಳು ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಬಿಬಿಎಂಪಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು […]

ಬೀದರ್ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಬೀದರ್ ಜಿಲ್ಲೆಯಲ್ಲಿ ಹೊಸದಾಗಿ 32 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆಯಾಗಿದೆ,  ಔರಾದ್ -14, ಬೀದರ್-11, ಬಸವಕಲ್ಯಾಣ-02, ಭಾಲ್ಕಿ-04,  ಕಮಲನಗರದಲ್ಲಿ 01 ಪ್ರಕರಣ ಸೇರಿದಂತೆ 32 ಜನರಲ್ಲಿ ಸೋಂಕು ದೃಢವಾಗಿದೆ. ಜಿಲ್ಲಾಡಳಿತ ಈವರೆಗೆ 38,989 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದ್ದು,  36,436 ವರದಿ ನೆಗೆಟಿವ್ ಬಂದಿದೆ, ಉಳಿದವರ ಪರೀಕ್ಷೇಯ ವರದಿ ಬಾಕಿ ಇದೆ. 21 […]

ಜಿಲ್ಲಾಧಿಕಾರಿ ನಕುಲ್ ಅವರು ನೀಡಿರುವ ಮಾಹಿತಿ ಪ್ರಕಾರ ಬಳ್ಳಾರಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ 1019 ಸೋಂಕಿತ ಪ್ರಕರಣಗಳು ದಾಖಲಾಗಿವೆ, ಸಾವಿನ ಪ್ರಮಾಣವೂ ಹೆಚ್ಚಿದೆ. ಜನರಲ್ಲಿ ಆತಂಕ ಶುರುವಾಗಿದೆ ಆದರಿಂದ್ದ ಇದಕ್ಕೆ ಬ್ರೇಕ್ ಹಾಕಲು ಜನರೇ ಮುಂದೆ ಬಂದಿದ್ದು, ಇಂದಿನಿಂದ ಬಳ್ಳಾರಿಯಲ್ಲಿ ಒಂದು ವಾರಗಳ ಕಾಲ ಮಧ್ಯಾಹ್ನ ಮೂರು ಗಂಟೆ ನಂತರ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಜನರು ಮಾಸ್ಕ್ ಹಾಕದೆ, ಅನಗತ್ಯ ಓಡಾಡುತ್ತಿದ್ದಾರೆ. ಹೀಗಾಗಿ […]

ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರಿಗೆ ಬಹುತೇಕ ಆಸ್ಪತ್ರೆಗಳಲ್ಲಿ ರಾಜಧಾನಿಯಲ್ಲಿ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕೇಸರಿ ಪಕ್ಷದ ಪ್ರಭಾವಿ ನಾಯಕರು ಕಾಫಿನಾಡಿನ ರೆಸಾ ರ್ಟ್ವೊಂದರಲ್ಲಿ ಸಭೆ ಸೇರಿ ರಹಸ್ಯ ಮೀಟಿಂಗ್ ಮಾಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ರೆಸಾ ರ್ಟ್ವೊಂದರಲ್ಲಿ ಕೆಲ ಸಚಿವರು, ಶಾಸಕರು, ಮುಖಂಡರು ರಹಸ್ಯ ಸಭೆ ಮಾಡಿದ್ದಾರೆ. ಈ ಸಭೆಗೆ ಸದ್ಯ ಬೆಂಗಳೂರಿನ ಕೋವಿಡ್ […]

ಬೆಳಿಗ್ಗೆಯಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಮತ್ತೊಮ್ಮೆ ಮಳೆನೀರಿನಲ್ಲಿ ಮುಳುಗಿದೆ. ಮುಂಬಯಿಯ ಕೆಲವು ತಗ್ಗು ಪ್ರದೇಶಗಳಲ್ಲಿ ತೀವ್ರ ಜಲಾವೃತ ಕಂಡುಬAದಿದೆ.ಮುAಬೈನ ಸಿಯಾನ್ ಮತ್ತು ಕುರ್ಲಾದಂತಹ ಪ್ರದೇಶಗಳು ಜಲಾವೃತ ವಾಗಿದ್ದು, ಮೂಲಕ ಸಂಚರಿಸಲು ಬಸ್ಸುಗಳು ಮತ್ತು ದ್ವಿಚಕ್ರ ವಾಹನಗಳು ಕಷ್ಟಪಡುತ್ತಿವೆ.ಹವಾಮಾನ ಇಲಾಖೆ ಈಗಾಗಲೇ ಮುಂಬೈಗೆ ಅರೇಂಜ್ ಅಲರ್ಟ್ ನೀಡಿದೆ ಮತ್ತು ಯಾವುದೇ ಸಂಭವನೀಯ ಪರಿಣಾಮವನ್ನು ಎದುರಿಸಲು ಸ್ಥಳೀಯ ಅಧಿಕಾರಿಗಳನ್ನು ಸಿದ್ಧಪಡಿಸುವಂತೆ ಕೇಳಿದೆ. ಪ್ರಾದೇಶಿಕ ಹವಾಮಾನ ಇಲಾಖೆ, “ಮುಂಬಯಿಯ ಹಲವಾರು ಭಾಗಗಳಲ್ಲಿ ಜಲಾವೃತವಾಗಬಹುದು” […]

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪೊಲೀಸರ ಮೇಲೆ ಗುಂಡಿನ ಮಳೆಗರೆದು ಡಿಎಸ್‌ಪಿ ಸಹಿತ ಎಂಟು ಪೊಲೀಸರ ಸಾವಿಗೆ ಕಾರಣವಾಗಿದ್ದು, ೬೦ಕ್ಕೂ ಹೆಚ್ಚು ಕೊಲೆ ಮತ್ತು ದರೋಡೆ ಪ್ರಕರಣಗಳ ಆರೋಪಿ ವಿಕಾಸ್ ದುಬೆ ವಿಕಾಸ್ ದುಬೆ ವಿರುದ್ಧ ರಾಹುಲ್ ತಿವಾರಿ ಎಂಬವರು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದರು. ಶುಕ್ರವಾರ ಮಧ್ಯರಾತ್ರಿ ೧ ಗಂಟೆ ಸುಮಾರಿಗೆ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತೆರಳಿದ್ದ ವೇಳೆಯಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿ ಪೊಲಿಸರನ್ನು ಕೊಲೆಗೈಯಲಾಗಿದೆ. ಇನ್ನು ಯಾರು […]

ಭಾರತ-ಚೀನಾ ಗಡಿ ಬಿಕ್ಕಟ್ಟು ಸಂಘರ್ಷದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಡಾಖ್ ನ ಲೇಹ್ ಗೆ ಭೇಟಿ ನೀಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆಯೇ ಲಡಾಕ್ ಗೆ ತಲುಪಿದ್ದು, ಸೇನಾ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಜೊತೆಗೆ ಗಡಿಯಲ್ಲಿನ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.ಜೂನ್ ೧೫ ರ ರಾತ್ರಿ ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟಿನ ಬಳಿಕ ಇಂದು ಲಡಾಖ್ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ […]

ಸಕ್ಕರೆ ಕಾರ್ಖಾನೆಗಳಿಗೆ ಬೀದರ್ ಜಿಲ್ಲಾಡಳಿತದಿಂದ ನೋಟಿಸ್ ಜಾರಿ ಮಾಡಲಾಗಿದೆ. ರೈತರಿಗೆ ಕಬ್ಬಿನ ಬಾಕಿ ಪಾವತಿಸದೆ ಇರುವುದು ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗ್ತಾಯಿದೆ. ಕಳೆದ ೨೦೧೯-೨೦ ಸಾಲಿಗೆ ಸಕ್ಕರೆ ಕಾರ್ಖಾನೆಗಳಿಗೆ ರೈತರು ತಾವು ಬೆಳೆದ ಕಬ್ಬುಗಳನ್ನು ಪೂರೈಸಿದ್ದರು. ಆದರೆ, ರೈತರಿಗೆ ಕಬ್ಬಿನ ಬಾಕಿ ಹಣ ನೀಡಿರಲಿಲ್ಲ. ಹಣ ಪಾವತಿಸದ ಹಿನ್ನಲೆ ಜಿಲ್ಲೆಯ ಎರಡೂ ಸಕ್ಕರೆ ಕಾರ್ಖಾನೆಗಳಿಗೆ ಬೀದರ್ ಜಿಲ್ಲಾಡಳಿತದಿಂದ ನೋಟಿಸ್ ಜಾರಿ ಮಾಡಿದೆ. ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಇಮಾಮಪೂರ್ […]

ಸೂಕ್ತ ಚಿಕಿತ್ಸೆ ದೊರೆಯದೆ ಮತ್ತಿಬ್ಬರು ಅಮಾನವೀಯವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೊಸಕೋಟೆ ತಾಲೂಕಿನ ಸಮೇತನಹಳ್ಳಿಯ ೪೫ ವರ್ಷದ ಮಹಿಳೆ ಹಾಗೂ ಕಾಚರಕನಹಳ್ಳಿಯ ವೃದ್ಧರೊಬ್ಬರು ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟ ದುರ್ದೈವಿಗಳು. ೪೫ ವರ್ಷದ ಮಹಿಳೆ ಕಳೆದ ಬುಧವಾರ ಮನೆಗೆ ಹೋಗುತ್ತಿದ್ದಾಗ ತಲೆ ತಿರುಗಿ ಕುಸಿದು ಬಿದ್ದರು. ತಕ್ಷಣ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಎಂವಿಜೆ, ಮಣಿಪಾಲ್ ಮತ್ತು ವೈದೇಹಿ ಆಸ್ಪತ್ರೆಗೆ ಸುತ್ತಾಡಿ ಕೊನೆಗೆ ಸಿಲಿಕಾನ್ ಸಿಟಿ […]

Advertisement

Wordpress Social Share Plugin powered by Ultimatelysocial