ಉತ್ತರ ಪ್ರದೇಶದಲ್ಲಿ ಪೊಲೀಸರ ಮೇಲೆ ಗುಂಡಿನ ಮಳೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪೊಲೀಸರ ಮೇಲೆ ಗುಂಡಿನ ಮಳೆಗರೆದು ಡಿಎಸ್‌ಪಿ ಸಹಿತ ಎಂಟು ಪೊಲೀಸರ ಸಾವಿಗೆ ಕಾರಣವಾಗಿದ್ದು, ೬೦ಕ್ಕೂ ಹೆಚ್ಚು ಕೊಲೆ ಮತ್ತು ದರೋಡೆ ಪ್ರಕರಣಗಳ ಆರೋಪಿ ವಿಕಾಸ್ ದುಬೆ ವಿಕಾಸ್ ದುಬೆ ವಿರುದ್ಧ ರಾಹುಲ್ ತಿವಾರಿ ಎಂಬವರು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದರು. ಶುಕ್ರವಾರ ಮಧ್ಯರಾತ್ರಿ ೧ ಗಂಟೆ ಸುಮಾರಿಗೆ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತೆರಳಿದ್ದ ವೇಳೆಯಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿ ಪೊಲಿಸರನ್ನು ಕೊಲೆಗೈಯಲಾಗಿದೆ. ಇನ್ನು ಯಾರು ಈ ವಿಕಾಸ್ ದುಬೆ ಅಂತ ನೋಡೋದಾದ್ರೆ ೨೦೦೧ರಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಸಂತೋಶ್ ಶುಕ್ಲಾ ಅವರನ್ನು ಕೊಂದ ಆರೋಪ ಈ ವಿಕಾಸ್ ದುಬೆ ಮೇಲಿದೆ. ಶಿವ್ಲಿ ಪೊಲೀಸ್ ಠಾಣೆಗೆ ನುಗ್ಗಿ ಈತ ಸಂತೋಶ್ ಶುಕ್ಲಾ ಅವರನ್ನು ಕೊಲೆಗೈದಿದ್ದ. ಘಟನೆಯಲ್ಲಿ ಇಬ್ಬರು ಪೊಲೀಸರು ಹತ್ಯೆಯಾಗಿದ್ದರು. ಬಿಕ್ರು ಗ್ರಾಮದ ನಿವಾಸಿಯಾಗಿರುವ ಈತ ತನ್ನದೇ ಖಾಸಗಿ ಸೈನ್ಯವನ್ನು ಇಟ್ಟುಕೊಂಡಿದ್ದ. ಶುಕ್ಲಾ ಕೊಲೆ ಪ್ರಕರಣದಿಂದ ನಂತರ ಸೆಷನ್ ಕೋರ್ಟ್ ನಲ್ಲಿ ಖುಲಾಸೆಯಾಗಿದ್ದ. ತಾರಾಚಂದ್ ಇಂಟರ್ ನ್ಯಾಶನಲ್ ಕಾಲೇಜು ಪ್ರಿನ್ಸಿಪಾಲ್ ಆಗಿದ್ದ ಸಿದ್ದೇಶ್ವರ ಪಾಂಡೆ ಕೊಲೆ ಪ್ರಕರಣದಲ್ಲೂ ದುಬೆ ಪ್ರಮುಖ ಆರೋಪಿಯಾಗಿದ್ದಾನೆ, ೨೦೦೪ರಲ್ಲಿ ಉದ್ಯಮಿ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲೂ ವಿಕಾಸ್ ದುಬೆ ಹೆಸರು ಕೇಳಿ ಬಂದಿತ್ತು.ಕೊಲೆ, ಸುಲಿಗೆ, ಅಪಹರಣ ಮುಂತಾದ ಕೃತ್ಯಗಳಲ್ಲಿ ದುಬೆ ಹೆಸರಿದೆ. ಜೈಲಿನಲ್ಲಿದ್ದುಕೊಂಡೆ ಹತ್ಯೆಗಳಿಗೆ ಸ್ಕೆಚ್ ಸಿದ್ದಮಾಡುತ್ತಿದ್ದ ಎನ್ನಲಾಗ್ತಾಯಿದೆ

Please follow and like us:

Leave a Reply

Your email address will not be published. Required fields are marked *

Next Post

ಮುಂಬೈನಲ್ಲಿ ಧಾರಾಕಾರ ಮಳೆ

Fri Jul 3 , 2020
ಬೆಳಿಗ್ಗೆಯಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಮತ್ತೊಮ್ಮೆ ಮಳೆನೀರಿನಲ್ಲಿ ಮುಳುಗಿದೆ. ಮುಂಬಯಿಯ ಕೆಲವು ತಗ್ಗು ಪ್ರದೇಶಗಳಲ್ಲಿ ತೀವ್ರ ಜಲಾವೃತ ಕಂಡುಬAದಿದೆ.ಮುAಬೈನ ಸಿಯಾನ್ ಮತ್ತು ಕುರ್ಲಾದಂತಹ ಪ್ರದೇಶಗಳು ಜಲಾವೃತ ವಾಗಿದ್ದು, ಮೂಲಕ ಸಂಚರಿಸಲು ಬಸ್ಸುಗಳು ಮತ್ತು ದ್ವಿಚಕ್ರ ವಾಹನಗಳು ಕಷ್ಟಪಡುತ್ತಿವೆ.ಹವಾಮಾನ ಇಲಾಖೆ ಈಗಾಗಲೇ ಮುಂಬೈಗೆ ಅರೇಂಜ್ ಅಲರ್ಟ್ ನೀಡಿದೆ ಮತ್ತು ಯಾವುದೇ ಸಂಭವನೀಯ ಪರಿಣಾಮವನ್ನು ಎದುರಿಸಲು ಸ್ಥಳೀಯ ಅಧಿಕಾರಿಗಳನ್ನು ಸಿದ್ಧಪಡಿಸುವಂತೆ ಕೇಳಿದೆ. ಪ್ರಾದೇಶಿಕ ಹವಾಮಾನ ಇಲಾಖೆ, “ಮುಂಬಯಿಯ ಹಲವಾರು ಭಾಗಗಳಲ್ಲಿ ಜಲಾವೃತವಾಗಬಹುದು” […]

Advertisement

Wordpress Social Share Plugin powered by Ultimatelysocial