ನಿಂತಲ್ಲಿಯೇ ನಿಂತು ಹಾಳಾಗುತ್ತಿರುವ ಯಂತ್ರೋಪರಣಗಳು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪುರಸಭೆಯ ಕಾಮಗಾರಿಗಳು ಯಾರ ಹಿತಕ್ಕೆ ಎನ್ನುವುದೇ ತಿಳಿಯುತ್ತಿಲ್ಲ. ಸರಕಾರದ ವಿವಿಧ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಉಪಯುಕ್ತ ಕಾಮಗಾರಿಗಳಿಗೆ ಸದ್ಬಳಕೆ ಮಾಡಿದರೆ ಅದು ಅಭಿವೃದ್ಧಿ ಎನ್ನಬಹುದು. ಆದರೆ ಮುಗಳಖೋಡ ಪುರಸಭೆಯ ಅಧಿಕಾರಿಗಳು ಸರಕಾರದ ಎಸ್ ಎಫ್ ಸಿ, 14ನೇ ಹಣಕಾಸು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಪಟ್ಟಣದ ವಿವಿಧ ಕೆಲಸ ಕಾರ್ಯಗಳ ಉಪಯೋಗಕ್ಕೆಂದು ಖರೀದಿಸಲಾಗಿರುವ ಟ್ರ್ಯಾಕ್ಟರ್, ಚರಂಡಿ ಸ್ವಚ್ಛತಾ ಮಷೀನ್, 407 ವಾಹನ, ಕೃತಕ ಶೌಚಾಲಯಗಳು ಹಾಗೂ ಸ್ವಚ್ಛತಾ ಮಷೀನ್ ಇವೆಲ್ಲವೂ ಕೂಡ ಖರೀದಿ ಆದಾಗಿನಿಂದಲೂ ಯಥಾ ಸ್ಥಿತಿಯಲ್ಲಿಯೇ ನಿಂತಲ್ಲಿ ನಿಂತು ಹಾಳಾಗಿ ಹೋಗುತ್ತಿವೆ.ಇನ್ನು ವಾಹನಗಳನ್ನು ಖರೀದಿ ಮಾಡಿರುವ ಪುರಸಭೆ ಅಧಿಕಾರಿಗಳು ವರ್ಷಗಳೇ ಕಳೆದರೂ ಸಹ ಆರ್ ಟಿ ಓ ಅವರಿಂದ ಪಾಸಿಂಗ್ ಕೂಡ ಮಾಡಿಸಿಲ್ಲ, ವಾಹನಗಳು, ಯಂತ್ರೋಪಕರಣಗಳು ವರ್ಷಗಳೇ ಕಳೆದರೂ ಶಡ್ ನಿಂದ ಆಚೆ ಬರದೆ ನಿಂತಲ್ಲಿಯೇ ನಿಂತು ತುಕ್ಕು ಹಿಡಿಯುತ್ತಿವೆ. ಸಾರ್ವಜನಿಕ ಹಣವನ್ನು ವಿನಿಯೋಗ ಮಾಡಿ ವಾಹನಗಳನ್ನು ಹಾಗೂ ಯಂತ್ರೋಪಕರಣಗಳನ್ನು ಖರೀದಿ ಮಾಡಿರುವ ಪುರಸಭೆ ಅಧಿಕಾರಿಗಳ ಉದ್ದೇಶವಾದರೂ ಏನು? ಎನ್ನುವುದು ಸಾರ್ವಜನಿಕ ಪ್ರಶ್ನೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

What Is Cost? Explanation, How to Calculate & Examples

Thu Feb 9 , 2023
It is easier to track the materials and conversion costs for one batch and have those costs follow the batch to the next process. The primary difference between the two is that the formula for conversion costs takes overhead into account. For this reason, it’s a more relevant number for […]

Advertisement

Wordpress Social Share Plugin powered by Ultimatelysocial