ಬಾಲಿವುಡ್‌ ಈಗ ಫಾರ್ಮ್‌ ಕಳೆದುಕೊಂಡ ವಿರಾಟ್‌ ಕೊಹ್ಲಿ ಸ್ಥಿತಿಯಲ್ಲಿದೆ

 

ದಕ್ಷಿಣ ಭಾರತದ ಚಿತ್ರಗಳು ಉತ್ತಮ ಸಾಧನೆ ಮಾಡುತ್ತಿವೆ. ಬಾಲಿವುಡ್‌ ಈಗ ಫಾರ್ಮ್‌ ಕಳೆದುಕೊಂಡ ವಿರಾಟ್‌ ಕೊಹ್ಲಿ ಸ್ಥಿತಿಯಲ್ಲಿದೆ ಎಂದು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಹೇಳಿದ್ದಾರೆ.

ವಿಕ್ರಾಂತ್‌ ರೋಣ ಹಿಂದಿ ಅವತರಣಿಕೆ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಟ್‌ ಕೊಹ್ಲಿ ಫಾರ್ಮ್‌ ಕಳೆದುಕೊಂಡಿದ್ದಾರೆ. ಹಾಗಂತ ಅವರು ಮಾಡಿದ ದಾಖಲೆಗಳನ್ನು ಕಡೆಗಣಿಸಲು ಸಾಧ್ಯವೇ? ಅದೇ ರೀತಿ ಬಾಲಿವುಡ್‌ ಸಿನಿಮಾಗಳು ಕೂಡ ಉತ್ತಮ ಸಾಧನೆ ಮಾಡುತ್ತಿಲ್ಲ ಎಂದರು.

ಸಿನಿಮಾ ಯಶಸ್ಸಿಗೆ ಯಾವುದೇ ಸೂತ್ರಗಳಿಲ್ಲ. ಪ್ರತಿಯೊಬ್ಬರೂ ಉತ್ತಮ ಚಿತ್ರ ಬಿಡುಗಡೆ ಮಾಡಬೇಕು ಎಂದು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಶೇ.೧೦೦ರಷ್ಟು ಪ್ರಯತ್ನ ಪಡುತ್ತಾರೆ. ಬಹುತೇಕ ಚಿತ್ರಗಳು ಇದರಲ್ಲಿ ವಿಫಲವಾಗುತ್ತವೆ. ಕೆಲವು ಮಾತ್ರ ಯಶಸ್ಸು ಕಾಣುತ್ತದೆ ಎಂದು ಸಲ್ಮಾನ್‌ ಖಾನ್‌ ಹೇಳಿದರು.

ಎಲ್ಲರನ್ನೂ ಸೇರಿಸಿ ಬಾಲಿವುಡ್‌ ಅನ್ನು ದಕ್ಷಿಣ ಭಾರತ ಚಿತ್ರಗಳು ಹಿಂದಿಕ್ಕಿವೆ ಎಂದು ಹೇಳುವುದು ಸರಿಯಲ್ಲ. ಈಗ ದಕ್ಷಿಣ ಭಾರತದ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಬಾಲಿವುಡ್‌ ಸಿನಿಮಾಗಳು ಕೂಡ ಲಯ ಕಂಡುಕೊಳ್ಳಬೇಕಿದೆ. ಸದ್ಯಕ್ಕೆ ನಾನು ನಷ್ಟ ಮಾಡಿಕೊಳ್ಳಲು ಪ್ರಯೋಗಕ್ಕೆ ಮುಂದಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Monero XMR: Monero Price, Market Charts and News

Tue Jul 26 , 2022
Content What is cryptocurrency? What Happens After I Buy Monero? What Is Monero? What’s the easiest way to buy Monero? Monero price prediction Where to buy XMR easily But you can choose the buy limit option if you want to buy at a predetermined price. Well, there are hundreds of […]

Advertisement

Wordpress Social Share Plugin powered by Ultimatelysocial