ಪತ್ನಿ ಸಾಕ್ಷಿ ಬಗ್ಗೆ ಅಭಿಮಾನಿ ಕೇಳಿದ ವೈಯಕ್ತಿಕ ಪ್ರಶ್ನೆಗೆ ಎಂ.ಎಸ್​. ಧೋನಿ ಕೊಟ್ಟ ಉತ್ತರ ವೈರಲ್!​

ನವದೆಹಲಿ: ಐಪಿಎಲ್​ 15ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೆನ್ನೈ ಸೂಪರ್ಸ್​ ಕಿಂಗ್​ (ಸಿಎಸ್​ಕೆ) ತಂಡ ಅಭಿಮಾನಿಗಳಿಗಾಗಿ ನಡೆಸಿದ ಈವೆಂಟ್​ನಲ್ಲಿ ಫ್ಯಾನ್ಸ್​ ಜತೆ ಕ್ಯಾಪ್ಟನ್ ಎಂ.ಎಸ್​.​ ಧೋನಿ ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಧೋನಿ ನೀಡಿದ ಉತ್ತರ ಭಾರೀ ವೈರಲ್​ ಆಗಿದೆ.ವಿಡಿಯೋವೊಂದನ್ನು ಸಿಎಸ್​ಕೆ ಫ್ಯಾನ್ಸ್ ಅಧಿಕೃತ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಅದರಲ್ಲಿ​ ಅಭಿಮಾನಿ ಮೊದಲು ಧೋನಿಗೆ ‘ವೈಯಕ್ತಿಕ ಪ್ರಶ್ನೆ’ ಕೇಳಬಹುದೇ ಎಂದು ಕೇಳುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಧೋನಿ, ನೀವು ಯಾವಾಗಲೂ ಕೇಳಬಹುದು. ಆದರೆ, ಅದಕ್ಕೆ ಉತ್ತರ ನೀಡಬೇಕಾ? ಬೇಡವಾ? ಎಂಬುದನ್ನು ನಾನು ನಿರ್ಧರಿಸುತ್ತೇನೆ ಎಂದರು.

ಇದಾದ ಬಳಿಕ ಪ್ರಶ್ನೆ ಕೇಳುವ ಅಭಿಮಾನಿ, ನೀವು ಎಲ್ಲ ಕ್ಷೇತ್ರದಲ್ಲಿ ನಂಬರ್​ 1 ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ನಿಮ್ಮ ಮನೆಯಲ್ಲಿ ಯಾರು ನಂಬರ್​ 1 ಸರ್​ ಎಂದು ಅಭಿಮಾನಿ ಪ್ರಶ್ನಿಸುತ್ತಾನೆ. ಇದಕ್ಕೆ ಪ್ರತಿಕ್ರಿಯೆ ನೀಡುವ ಧೋನಿ, ನೀವು ಹಿಂದೆ ನೋಡಿದರೆ ಅರ್ಧ ಜನ ಇನ್ನೂ ನಗುತ್ತಿದ್ದಾರೆ. ಏಕೆಂದರೆ, ಮನೆಯಲ್ಲಿ ಹೆಂಡತಿಯೇ ನಂಬರ್ 1 ಎಂಬುದು ಎಲ್ಲರಿಗೂ ಗೊತ್ತು ಎಂದು ಉತ್ತರಿಸಿದರು.

ಅನುಭವಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿರುವ ಎಂ.ಎಸ್​. ಧೋನಿ ಎರಡು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದರೆ ಐಪಿಎಲ್‌ನಲ್ಲಿ ಮಾತ್ರ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಪ್ರಸಕ್ತ ಐಪಿಎಲ್​ನಲ್ಲಿ ಮಾರ್ಚ್ 26 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಮೊದಲ ಪಂದ್ಯ ಎದುರಿಸಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PAK vs AUS: ಕರಾಚಿ ಟೆಸ್ಟ್ನಲ್ಲಿ ಬಾಬರ್ ಅಜಮ್ ಸ್ಕ್ರಿಪ್ಟ್ ವಿಶಿಷ್ಟ ಸಾಧನೆ, ಸುನಿಲ್ ಗವಾಸ್ಕರ್ ಜೊತೆಗೂಡಿದರು!

Thu Mar 17 , 2022
ಕರಾಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಪಾಕಿಸ್ಥಾನವನ್ನು ಉಳಿಸಲು ಬಾಬರ್ ಆಜಮ್ ಸಹಾಯ ಮಾಡಿದರು. ಮಂಗಳವಾರ ಇಡೀ ದಿನ ಬ್ಯಾಟಿಂಗ್ ಮಾಡಿದ ನಂತರ, ಪಾಕಿಸ್ತಾನದ ನಾಯಕ ಅಂತಿಮವಾಗಿ 5 ನೇ ದಿನದ ಅಂತಿಮ ಸೆಷನ್‌ನಲ್ಲಿ ಅವರು ಅರ್ಹವಾದ ದ್ವಿಶತಕದಿಂದ ವಜಾಗೊಂಡರು. ನಾಥನ್ ಲಿಯಾನ್‌ಗೆ ಔಟಾಗುವ ಮೊದಲು ಅವರು 425 ಎಸೆತಗಳಲ್ಲಿ 196 ರನ್ ಗಳಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾವು ನಾಲ್ಕನೇ ಇನ್ನಿಂಗ್ಸ್ ಚೇಸ್ ಅನ್ನು ಅತ್ಯುತ್ತಮವಾಗಿ […]

Advertisement

Wordpress Social Share Plugin powered by Ultimatelysocial