ದೇಶದಾದ್ಯಂತ ಮಾರಕ ಕೋವಿಡ್ ೧೯ ಸೋಂಕು ತಲ್ಲಣ ಸೃಷ್ಟಿಸಿದ್ದು, ಸೋಂಕಿತರ ಸಂಖ್ಯೆ ಐದು ಲಕ್ಷ ಗಡಿದಾಟಿದೆ. ಗಡಿ ಭದ್ರತಾ ಪಡೆಯಲ್ಲೂ ಕೊರೊನಾ ಸೋಂಕು ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೩ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ ೯೧೧ಕ್ಕೆ ಏರಿಕೆಯಾಗಿದೆ. ಈ ಪೈಕಿ ೬೩೩ ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆಂದು ಬಿಎಸ್ಎಫ್ ಮೂಲಗಳು ತಿಳಿಸಿವೆ.

ಕೊರೊನಾ ಸೋಂಕು ಭೀತಿಯಿಂದ ಕೆಲವರು ಆತ್ಮಹತ್ಯೆ ಮಾಡಿಕೊಳ್ಳತ್ತಿರುವ ಘಟನೆಗಳು ಒಂದು ಕಡೆಯಾದರೆ, ೯೯ ರ‍್ಷದ ವೃದ್ಧೆಯೊಬ್ಬರು ಕೊರೊನಾದಿಂದ ಗುಣಮುಖರಾಗಿ ಚೇತರಿಸಿಕೊಂಡಿದ್ದು, ಇದು ಆಶಾದಾಯಕ ಬೆಳವಣಿಗೆಯಾಗಿ ಪರಿಣಮಿಸಿದೆ. ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ೯೯ ರ‍್ಷದ ವೃದ್ಧೆಗೆ ಕೊರೊನಾ ದೃಢಪಟ್ಟಿತ್ತು, ಜೂನ್ ೧೮ ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಕೇವಲ ೯ ದಿನಗಳಲ್ಲಿ ಗುಣಮುಖರಾಗಿ ಡಿಸ್ಚರ‍್ಜ್ ಆಗಿದ್ದಾರೆ. ೧೦೦ ರ ವಯಸ್ಸಿನಲ್ಲೂ ಕೊರೊನಾ ವಿರುದ್ಧ ಹೋರಾಡಿ ಗೆದ್ದಿರುವುದು ವೃದ್ಧರಿಗೆ ಕೊರೊನಾ ಸೋಂಕು ತಗುಲಿದರೆ […]

ರಾಜ್ಯ ಸರ್ಕಾರ ಕೊರೊನಾ ವೈರಸ್ ಸಂಕಷ್ಟದ ನಡುವೆಯು ಅತಿದೊಡ್ಡ ರಿಸ್ಕ್ ತೆಗೆದುಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸುತ್ತಿದೆ.ಆದರೆ ಈ ಸಮಯದಲ್ಲಿಯೂ ಕೂಡ ವಿದ್ಯಾರ್ಥಿಗಳು ನಕಲು ಮಾಡಿ ಪರೀಕ್ಷೆಯನ್ನು ಬರೆಯುತ್ತಿದ್ದರು.ಹೀಗಾಗಿ  ಈ  ಮೂರು ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಿದ ಘಟನೆ ಗದಗ ನಗರದಲ್ಲಿ ನಡೆದಿದೆ. ಗದಗದ ಮುನ್ಸಿಪಲ್‌ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ಇಂದು ಗಣಿತ ವಿಷಯದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆಯಲ್ಲಿ ದಿಢೀರ್ ಭೇಟಿ ನೀಡಿದ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ […]

ಜಾರ್ಖಂಡ್ ನಲ್ಲಿ  ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್ ಡೌನ್ ಅನ್ನು ಜುಲೈ 31ರವರೆಗೂ ಮುಂದುಡಲಾಗಿದೆ.ಈಗಾಗಲೇ ಜಾರ್ಖಂಡ್ ನಲ್ಲಿ ಹೇರಲಾಗಿರುವ ಲಾಕ್ ಡೌನ್ ಅವಧಿ ಜೂನ್ ೨೮ ಕ್ಕೆ ಮುಗಿಯಲಿದೆ. ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಜಾರ್ಖಂಡ್‌ ರಾಜ್ಯದಲ್ಲಿ ಜುಲೈ 31ರ ತನಕ ಲಾಕ್ ಡೌನ್ ಜಾರಿಗೆ ಬರಲಿದೆ. ಹಿಂದಿನ ನಿಯಮಗಳು ಹಾಗೆ ಮುಂದುವರಿಯಲಿವೆ ಎಂದು ತಿಳಿದು ಬಂದಿದೆ.  

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಾಡಪ್ರಭು ಕೆಂಪೇಗೌಡರಿಗೆ ಗೌರವ ನಮನ ಸಲ್ಲಿಸಿದ್ದಾರೆ.ಕೆಂಪೇ ಗೌಡರು ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸಿ, ಕೋಟೆ- ಪೇಟೆಗಳನ್ನು ನಿರ್ಮಿಸಿ,ಕೆರೆಕಟ್ಟೆಗಳನ್ನು ಕಟ್ಟಿಸಿ, ನಾಡಿನ ಜನರಮಾನಸಿನಲ್ಲಿ ಸದಾ ಅಚ್ಚಳಿಯದೆ ಉಳಿದಿರುವ ಬೆಂಗಳೂರಿನ ನಿರ್ಮಾತೃ ಸಮರ ವೀರ ನಾಡಪ್ರಭು ಕೆಂಪೇಗೌಡರ ಜಯಂತಿಯಾದ ಇಂದು ಅವರಿಗೆ ನನ್ನ ಗೌರವ ನಮನವನ್ನು ಸಲ್ಲಿಸುತ್ತೇನೆ ಎಂದು ಗೌಡರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರು ಕೂಡ ನಾಡಪ್ರಭು […]

ಕೊರೊನಾ ವೈರಸ್ ಹಿನ್ನಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಅತ್ತಿಬೆಲೆ ಬಾರ್ಡರ್ ನಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ  ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಎಲ್ಲಾ ವಾಹನಗಳಿಗೆ ಅನುಮತಿ ನೀಡುವುದಿಲ್ಲ ಹಾಗೂ ಕರ್ನಾಟಕದಿಂದ ತಮಿಳುನಾಡಿಗೆ ಹೋಗುವ ವಾಹನಗಳಿಗೆ ಇ-ಪಾಸ್ ಇದ್ರೆ ಮಾತ್ರ ಅನುಮತಿ ನೀಡಲಾಗುವುದು ಮತ್ತು ತುರ್ತು ಸಂಧರ್ಭಗಳಿಗೆ ಅನುಮತಿ ನೀಡಲಾಗುತ್ತದೆ. ಇನ್ನೂ ತರಕಾರಿ ವಾಹನಗಳಿಗೆ ಕಂಪನಿ ವರ್ಕರ್ಸ್ ಗಳಿಗೆ ಐಡಿ ಕಾರ್ಡ್ ಗಳು ಇದ್ದಾರೆ ಮಾತ್ರ ಅನುಮತಿ […]

ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ನಕಲು ಮಾಡಿದ ಚೀಟಿ ಕೊಡಲು ಹೋಗಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ಜರುಗಿದೆ. ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಯುವಕನನ್ನು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ಸಾಗರ ಚಲವಾದಿ ಎಂದು ಗುರುತಿಸಲಾಗಿದೆ. ಹೂವಿನಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ನುಗ್ಗಿ ನಕಲು ಮಾಡಿದ ಕಾಪಿ ಚೀಟಿ ಕೊಡುವ ವೇಳೆ ಪೊಲೀಸರು ಯುವಕನನ್ನು ಬೆನ್ನಟ್ಟಿ ಹಿಡಿದು, ಲಾಠಿ ರುಚಿ ತೋರಿಸಿದ್ದಾರೆ. ಈ ಹಂತದಲ್ಲಿ […]

ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ಸಾಲ ಪಡೆದ ನಂತರ ಅದನ್ನು ಮರುಪಾವತಿಸದೆ 787 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಿಕೊಂಡ ಆರೋಪವನ್ನು  ಎದುರಿಸುತ್ತಿದ್ದಾರೆ. ಹೌದು 787 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಸಿಬಿಐ. ಮೋಸರ್ ಬಾಗಿರ್ ಸೋಲಾರ್ ಲಿಮಿಟೆಡ್ ಸಂಸ್ಥೆಗೆ ಸೇರಿದ 7 ಸ್ಥಳಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಸ್ಥೆಯ ಸಂಸ್ಥಾಪಕ ಮತ್ತು ಉದ್ಯಮಿ ರತುಲ್ ಪುರಿ […]

ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 5 ಲಕ್ಷ ಗಡಿ ದಾಟುತ್ತಿದೆ.ಈ ಕುರಿತು ಕೇಂದ್ರ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೌದು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಯುವ ಯಾವುದೇ ಯೋಜನೆ ಕೇಂದ್ರ ಸರ್ಕಾರಕ್ಕೆ ಇಲ್ಲ.  ದೇಶದ ಹೊಸ ಭಾಗಗಳಿಗೂ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದು, ಪ್ರಧಾನಿ ಮೋದಿ ಮೌನವಾಗಿದ್ದಾರೆ. ಅದರ ವಿರುದ್ಧ ಹೋರಾಟವನ್ನು ನಿರಾಕರಿಸಿ ಶರಣಾಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.    

ಸತತ 21ನೇ ದಿನವೂ ತೈಲ ಬೆಲೆ ಏರಿಕೆ ಕಂಡಿದ್ದು, ಪ್ರತೀ ಲೀಟರ್  ಪೆಟ್ರೋಲ್ ಬೆಲೆಯಲ್ಲಿ 0.25 ಪೈಸೆ ಹಾಗೂ ಪ್ರತೀ ಲೀಟರ್ ಡೀಸೆಲ್ ದರದಲ್ಲಿ 0.21 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ಮೂರು ವಾರಗಳಲ್ಲಿ ಡೀಸೆಲ್ ಪ್ರತೀ ಲೀಟರ್ ಮೇಲೆ ರೂ.11.03, ಪೆಟ್ರೋಲ್ ಪ್ರತಿ ಲೀಟರ್ ಮೇಲೆ ರೂ.9.12 ಹೆಚ್ಚಳವಾದಂತಾಗಿದೆ. ಹಾಗೆಯೇ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.80.38ಕ್ಕೆ ತಲುಪಿದ್ದು, ಡೀಸೆಲ್ ಲೀಟರ್’ಗೆ 80.40ಕ್ಕೆ ತಲುಪಿದೆ. ಇನ್ನು ಇಂದು ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ […]

Advertisement

Wordpress Social Share Plugin powered by Ultimatelysocial