ಪಾಕಿಸ್ತಾನದಲ್ಲಿ ವಿವಾದಾತ್ಮಕ ಹೇಳಿಕೆ ‘ಇಲ್ಲೇ ಹೆದರಿಲ್ಲ, ಅಲ್ಯಾಕೆ ಭಯ ಬೀಳಲಿ.

 

ಪಾಕಿಸ್ತಾನದ  ನೆಲದಲ್ಲಿಯೇ ನಿಂತು 26/11 ದಾಳಿಕೋರ ಉಗ್ರರ ಬಗ್ಗೆ ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ಮತ್ತು ಕವಿ ಜಾವೇದ್ ಅಖ್ತರ್  ಆಡಿದ್ದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜಾವೇದ್ ಅಖ್ತರ್‌ ಅವರನ್ನ ಪಾಕಿಸ್ತಾನದ ಸೆಲೆಬ್ರಿಟಿಗಳು ಟೀಕೆ ಮಾಡುತ್ತಿದ್ದರೆ, ಭಾರತೀಯರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗಲೇ, ತಮ್ಮ ಮನಸ್ಸಿನ ಮಾತನ್ನ ಹೇಳಲು ಪಾಕಿಸ್ತಾನದ ನೆಲದಲ್ಲಿ ಏನಾದರೂ ಹೆದರಿಕೆ ಕಾಡಿತ್ತಾ ಎಂಬ ಪ್ರಶ್ನೆಗೂ ಜಾವೇದ್ ಅಖ್ತರ್ ಇದೀಗ ಉತ್ತರಿಸಿದ್ದಾರೆ. ‘’ನಾನು ಇಲ್ಲೇ ಹೆದರಿಲ್ಲ. ಅಲ್ಯಾಕೆ ಭಯ ಬೀಳಲಿ?’’ ಎಂದಿದ್ದಾರೆ ಜಾವೇದ್ ಅಖ್ತರ್.ಉರ್ದು ಕವಿ ಫಯಾಜ್ ಅಹ್ಮದ್ ಫೈಜ್ ಅವರ ಸ್ಮರಣಾರ್ಥ ಲಾಹೋರ್‌ನಲ್ಲಿ ಸಾಹಿತ್ಯ ಉತ್ಸವ ಆಯೋಜಿಸಲಾಗಿತ್ತು. ಇದೇ ಉತ್ಸವದಲ್ಲಿ ಜಾವೇದ್ ಅಖ್ತರ್ ಪಾಲ್ಗೊಂಡಿದ್ದರು. ಈ ವೇಳೆ ತೂರಿಬಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಾವೇದ್ ಅಖ್ತರ್, ‘’ನಾವು ಆರೋಪ – ಪ್ರತ್ಯಾರೋಪ ಮಾಡಬಾರದು. ಇದರಿಂದ ಯಾವುದೂ ಬಗೆಹರಿಯುವುದಿಲ್ಲ. ನಾವು ಮುಂಬೈಯಿಂದ ಬಂದವರು. ಮುಂಬೈ ಮೇಲೆ ನಡೆದ ದಾಳಿಯನ್ನ ನಾವು ನೋಡಿದ್ದೇವೆ. 26/11 ದಾಳಿಕೋರರು ಈಗಲೂ ನಿಮ್ಮ ದೇಶದಲ್ಲಿ ಓಡಾಡಿಕೊಂಡಿದ್ದಾರೆ. ಭಾರತೀಯರ ಹೃದಯದಲ್ಲಿ ಆಕ್ರೋಶ ಕುದಿಯುತ್ತಿದೆ. ಅದರ ವಿರುದ್ಧ ನೀವು ದೂರುವುದು ಸಾಧ್ಯವಿಲ್ಲ’’ ಎಂದಿದ್ದರು.ಜಾವೇದ್ ಅಖ್ತರ್ ಅವರ ಈ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಾವೇದ್‌ ಅಖ್ತರ್‌ ಅವರ ಹೇಳಿಕೆಗೆ ಭಾರತೀಯ ಸೆಲೆಬ್ರಿಟಿಗಳು, ತಾರೆಯರು ಹಾಗೂ ರಾಜಕಾರಣಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಅಕ್ಷರಶಃ ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದು ಅನೇಕರು ಕಾಮೆಂಟ್ ಮಾಡಿದ್ದರು. ಜಾವೇದ್ ಅಖ್ತರ್ ಅವರನ್ನ ಕಂಗನಾ ರನೌತ್ ಕೂಡ ಕೊಂಡಾಡಿದ್ದರು.‘’ನನಗೆ ವೀಸಾ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ಜನರನ್ನು ಪ್ರಶ್ನಿಸಲಾಗುತ್ತಿದೆ ಎಂಬ ಸಂದೇಶಗಳು ನನಗೆ ಬರುತ್ತಿವೆ’’ ಎಂದು ಸಂದರ್ಶನವೊಂದರಲ್ಲಿ ಜಾವೇದ್ ಅಖ್ತರ್ ಹೇಳಿದಾಗ, ‘’ಅಲ್ಲಿ ನಿಮ್ಮ ಮನಸ್ಸಿನ ಮಾತನ್ನ ಹೇಳಲು ನಿಮಗೆ ಭಯವಾಯಿತೇ?’’ ಎಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ, ಉತ್ತರಿಸಿದ ಜಾವೇದ್ ಅಖ್ತರ್, ‘’ನಾನು ಹುಟ್ಟಿ, ಬೆಳೆದು, ಸಾಯುವ ದೇಶದಲ್ಲೇ ಇಂತಹ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡುತ್ತೇನೆ. ಇನ್ನೂ ಎರಡು ದಿನಗಳ ಮಟ್ಟಕ್ಕೆ ಭೇಟಿ ಕೊಟ್ಟಿರುವ ದೇಶದಲ್ಲಿ ನಾನ್ಯಾಕೆ ಹೆದರಿಕೊಳ್ಳಲಿ? ನಾನು ಇಲ್ಲೇ ಹೆದರುವುದಿಲ್ಲ. ಇನ್ನೂ ಅಲ್ಲಿ ಯಾಕೆ ಭಯ ಬೀಳಲಿ?’’ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ 5 ಪೆನ್ನಿ ಷೇರುಗಳು.

Wed Mar 1 , 2023
    ಕಳೆದ ರಾತ್ರಿಯ ವಹಿವಾಟಿನಲ್ಲಿ ವಾಲ್ ಸ್ಟ್ರೀಟ್ ಸೂಚ್ಯಂಕಗಳು ಕುಸಿತ ಕಂಡಿದ್ದರೂ ಏಷ್ಯಾದ ಎಲ್ಲಾ ಪ್ರಮುಖ ಸೂಚ್ಯಂಕಗಳು ಬುಧವಾರ ಏರುಗತಿಯಲ್ಲಿವೆ. ಲೋಹಗಳು, ಕಮಾಡಿಟಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿನ ಬಲವಾದ ಗಳಿಕೆಯಿಂದ ಹಾಗೂ ಏಷ್ಯಾದ ಮಾರುಕಟ್ಟೆಗಳಲ್ಲಿನ ಬಲದಿಂದ ಉತ್ತೇಜನಗೊಂಡು ಭಾರತೀಯ ಮುಖ್ಯಾಂಶ ಸೂಚ್ಯಂಕಗಳು ದೃಢವಾದ ಲಾಭದೊಂದಿಗೆ ಬುಧವಾರದ ವಹಿವಾಟನ್ನು ಆರಂಭಿಸಿದವು. ಕಳೆದ ವಹಿವಾಟು ಅವಧಿಯಲ್ಲಿ ಅತ್ಯಂತ ಕಳಪೆ ಕಾರ್ಯನಿರ್ವಹಣೆಯ ವಲಯವಾಗಿದ್ದ ಬಿಎಸ್‌ಇ ಮೆಟಲ್ಸ್, ಎಪಿಎಲ್‌ ಅಪೋಲೋ ಟ್ಯೂಬ್ಸ್ ಲಿಮಿಟೆಡ್‌ […]

Advertisement

Wordpress Social Share Plugin powered by Ultimatelysocial