ಪಂಡಿತ ದೀನದಯಾಳ ಉಪಾಧ್ಯಾಯರು ವಿದ್ವಾಂಸರು.

 

ಪಂಡಿತ ದೀನದಯಾಳ ಉಪಾಧ್ಯಾಯರು 1916ರ ಸೆಪ್ಟೆಂಬರ್ 25ರಂದು ಮಥುರಾ ಜಿಲ್ಲೆಯ ನಾಗ್ಲಾ ಚಂದ್ರಬಾನ್ ಎಂಬ ಹಳ್ಳಿಯಲ್ಲಿ ಜನಿಸಿದರು. ಮೂರು ವರ್ಷದವರಾಗಿದ್ದಾಗ ತಮ್ಮ ತಂದೆಯನ್ನೂ ಎಂಟನೆಯ ವಯಸ್ಸಿನಲ್ಲಿ ತಾಯಿಯನ್ನೂ, ಹತ್ತನೆಯ ವಯಸ್ಸಿನಲ್ಲಿ ತಾತನನ್ನೂ ಕಳೆದುಕೊಂಡ ದೀನ ದಯಾಳರು ತಮ್ಮ ಸೋದರ ಮಾವನ ಮನೆಯಲ್ಲಿ ಬದುಕು ಸಾಗಿಸಿದರು. ಸೋದರ ಮಾವನ ಪತ್ನಿ ದೀನ ದಯಾಳರಿಗೂ ಮತ್ತು ಅವರ ಕಿರು ಸಹೋದರನಿಗೂ ತನ್ನ ಮಕ್ಕಳಂತೆಯೇ ಮಾತೃ ವಾತ್ಸಲ್ಯ ನೀಡಿದರು. ಮುಂದಿನ ಕೆಲವು ವರ್ಷಗಳಲ್ಲೇ ಅವರ ತಮ್ಮನೂ ಈ ಲೋಕವನ್ನಗಲಿದ.ದೀನ ದಯಾಳರು ಸಿಕಾರ್ ಎಂಬಲ್ಲಿ ಶಾಲೆಗೆ ಹೋಗಲು ತೊಡಗಿದರು. ಅಲ್ಲಿನ ಮಹಾರಾಜರು ದೀನದಯಾಳರಿಗೆ ಚಿನ್ನದ ಪದಕ, 250ರೂಪಾಯಿಗಳ ಪುಸ್ತಕ ಮತ್ತು ಹತ್ತು ರೂಪಾಯಿಗಳ ವಿದಾರ್ಥಿ ವೇತನವನ್ನು ನೀಡಿದರು. ಮುಂದೆ ಅವರು ಪಿಲಾನಿಯಲ್ಲಿ ಇಂಟರ್ ಮೀಡಿಯೆಟ್ ಪರೀಕ್ಷೆಯನ್ನು ಉತ್ಕೃಷ್ಟ ದರ್ಜೆಯಲ್ಲಿ ಮುಗಿಸಿ, ಸನಾತನ ಧರ್ಮ ಕಾಲೇಜಿನಲ್ಲಿ ಬಿ.ಎ ಪದವಿಗಾಗಿ ಸೇರಿದರು. ಓದಿನ ದಿನಗಳಲ್ಲೇ ತಮ್ಮ ಸ್ನೇಹಿತ ಬಲವಂತ ಮಹಾಶಬ್ಧೆ ಅವರಿಂದ ಪ್ರೇರಿತರಾಗಿ 1937ರ ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿದರು. 1937ರಲ್ಲಿ ಉನ್ನತ ದರ್ಜೆಯಲ್ಲಿ ಬಿ.ಎ ಪದವಿ ಪಡೆದು ಆಗ್ರಾದಲ್ಲಿ ಎಂ.ಎ ಪದವಿಗೆ ಸೇರಿದರು. ಈ ದಿನಗಳಲ್ಲಿ ಅವರು ನಾನಾಜಿ ದೇಶ್ ಮುಖ್ ಮತ್ತು ಭಾವ್ ಜುಗಾದೆ ಅವರೊಂದಿಗೆ ಆರ್ ಎಸ್ ಎಸ್ ಚಟುವಟಿಕೆಗಳಲ್ಲಿ ಮತ್ತಷ್ಟು ಸಕ್ರಿಯರಾದರು. ಈ ಮಧ್ಯೆ ಅವರ ಸಂಬಂಧಿ ಸೋದರಿ ರಮಾ ದೇವಿ ನಿಧನರಾದಾಗ, ಅದರಿಂದ ದುಃಖಿತರಾದ ದೀನ ದಯಾಳರು ಎಂ. ಎ ಪದವಿ ಪರೀಕ್ಷೆಗೆ ಕುಳಿತುಕೊಳ್ಳಲಾಗಲಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಸಿಕಾರ್ ಮಹಾರಾಜರಿಂದ ದೊರಕುತ್ತಿದ್ದ ವಿದ್ಯಾರ್ಥಿ ವೇತನ ಸೌಲಭ್ಯಗಳು ನಿಂತು ಹೋದವು.ಚಿಕ್ಕಮ್ಮನ ಒತ್ತಾಸೆಯ ಮೇರೆಗೆ ಅವರು ಸರ್ಕಾರವು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡರು. ಪಂಚೆ, ಜುಬ್ಬಾ, ತಲೆಗೊಂದು ಟೋಪಿ ಹಾಕಿಕೊಂಡು ಪರೀಕ್ಷೆಗೆ ಇವರು ಹೋದಾಗ ಪಾಶ್ಚಿಮಾತ್ಯ ಉಡುಪು ಧರಿಸಿದ್ದ ಅಲ್ಲಿದ್ದವರೆಲ್ಲಾ ಇವರನ್ನು ಅಪಹಾಸ್ಯಗೈದು ಇಲ್ಲಿ ನೋಡಿ ಒಬ್ಬ ಪಂಡಿತ್ಜಿ ಬಂದ ಎಂದರು. ಆ ಅಪಹಾಸ್ಯಗೈದವರಿಗೆ ಈತನೇ ಈ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಾನೆಂದು ಗೊತ್ತಿರಲಿಲ್ಲ. ಅವರಿಗೆ ತಿಳಿಯದ ಮತ್ತೊಂದು ಮಹತ್ವದ ವಿಷಯವೂ ಇತ್ತು. ಯಾವ ವ್ಯಕ್ತಿಯನ್ನು ಅವರು ಅಪಹಾಸ್ಯಕ್ಕೆಂದು ಪಂಡಿತ್ಜೀ ಎಂದು ಸಂಬೋಧಿಸಿದ್ದರೋ, ಆ ವ್ಯಕ್ತಿ ಮುಂದೆ ಇಡೀ ಜನಸ್ತೋಮದ ಹೃನ್ಮನಗಳಲ್ಲಿ ಗೌರವಾನ್ವಿತವಾಗಿ ‘ಪಂಡಿತ್ಜೀ’ ಎಂದೇ ಸಂಸ್ಥಾಪಿತರಾದರು.ತಮ್ಮ ಚಿಕ್ಕಪ್ಪನವರ ಅನುಮತಿ ಪಡೆದು ಬಿ.ಟಿ ಓದಲು ಪ್ರಯಾಗಕ್ಕೆ ತೆರಳಿದ ದೀನ ದಯಾಳರು ಅಲ್ಲಿ ತಮ್ಮ ಆರ್ ಎಸ್ ಎಸ್ ಚಟುವಟಿಕೆಗಳನ್ನು ಮುಂದುವರೆಸಿದರು. ಬಿ. ಟಿ. ಪದವಿ ಪಡೆದ ನಂತರದಲ್ಲಿ ಆರ್ ಎಸ್ ಎಸ್ ನ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯಲಾರಂಭಿಸಿದ ದೀನ ದಯಾಳರು ಉತ್ತರ ಪ್ರದೇಶದ ಲಕಿಂಪುರ ಜಿಲ್ಲೆಯಲ್ಲಿ ವ್ಯವಸ್ಥಾಪಕರಾಗಿಯೂ, 1955ರ ವರ್ಷದಿಂದ ಉತ್ತರ ಪ್ರದೇಶದ ಆರ್ ಎಸ್ ಎಸ್ ವ್ಯವಸ್ಥಾಪಕರಾಗಿಯೂ ತಮ್ಮ ಕಾರ್ಯ ಚಟುವಟಿಕೆಗಳಿಗೆ ವಿಸ್ತಾರವನ್ನು ಕಂಡುಕೊಂಡರು.ಲಕ್ನೋದಲ್ಲಿ ‘ರಾಷ್ಟ್ರಧರ್ಮ ಪ್ರಕಾಶನ’ ಎಂಬ ಪ್ರಕಟಣಾ ಸಂಸ್ಥೆಯನ್ನು ಪ್ರಾರಂಭಿಸಿದ ಪಂಡಿತ ದೀನ ದಯಾಳ ಉಪಾಧ್ಯಾಯರು ‘ರಾಷ್ಟ್ರ ಧರ್ಮ’ ಎಂಬ ಮಾಸಿಕವನ್ನು ಹುಟ್ಟು ಹಾಕಿದರು. ಮುಂದೆ ‘ಪಾಂಚಜನ್ಯ’ ಎಂಬ ಸಾಪ್ತಾಹಿಕವನ್ನೂ, ‘ಸ್ವದೇಶ್’ ಎಂಬ ದಿನಪತ್ರಿಕೆಯನ್ನೂ ಪ್ರಾರಂಭಿಸಿದರು. 1950ರ ವರ್ಷದಲ್ಲಿ ನೆಹರೂ ಅವರ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಡಾ. ಶಾಮಪ್ರಸಾದ ಮುಖರ್ಜಿ ಅವರು ನೆಹರೂ-ಲಿಯಾಕತ್ ಪ್ರಸ್ತಾಪವನ್ನು ವಿರೋಧಿಸಿ ಮಂತ್ರಿ ಪದವಿಯನ್ನು ತ್ಯಜಿಸಿ ಪ್ರಜಾಪ್ರಭುತ್ವವಾದಿ ವಿರೋಧ ಪಕ್ಷಗಳ ಒಕ್ಕೂಟ ನಿರ್ಮಿಸಲು ಪ್ರಯತ್ನ ಪ್ರಾರಂಭಿಸಿದರು. ತಮ್ಮ ಈ ಮಹತ್ವ ಉದ್ದೇಶ ಸಾಧನೆಗಾಗಿ ಅವರು ಪಂಡಿತ್ ದೀನ ದಯಾಳ ಉಪಾಧ್ಯಾಯರನ್ನು ಭೇಟಿಮಾಡಿ ಯುವ ಪ್ರತಿಭೆಗಳನ್ನು ಪ್ರೇರೇಪಿಸಲು ಕೋರಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

500 ರೂ.ಗೆ LPG ಸಿಲಿಂಡರ್, ರೈತರ ಸಾಲ ಮನ್ನಾ, ಉಚಿತ ವಿದ್ಯುತ್:

Sat Feb 11 , 2023
ಜೈಪುರ್: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಭರಪೂರ ಭರವಸೆ ನೀಡಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ 2023 -24 ನೇ ಸಾಲಿನ ಬಜೆಟ್ ಮಂಡಿಸಿದ್ದು, ರೈತರಿಗೆ 2000 ಯೂನಿಟ್ ವರೆಗೆ ಸಂಪೂರ್ಣ ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದ್ದಾರೆ. 11 ಲಕ್ಷ ರೈತರಿಗೆ 2000 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ಪೂರೈಕೆ ಮಾಡಲಾಗುವುದು. ಎಲ್ಲರಿಗೂ 100 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಇದುವರೆಗೆ ರಾಜ್ಯದಲ್ಲಿ 50 ಯೂನಿಟ್ ಉಚಿತವಾಗಿ ವಿದ್ಯುತ್ ನೀಡುತ್ತಿದ್ದು, ಅದನ್ನು […]

Advertisement

Wordpress Social Share Plugin powered by Ultimatelysocial