ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ !

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ
ಕರಿಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತ
ಇರುಳಾಕೆ ಬಂದಳು ದೀಪ ಹಚ್ಚ
ಬಾನಿನಂಗಳದಲ್ಲಿ ಚುಕ್ಕಿ ಹೊಳೆ ಬೆಸೆವಂತೆ
ನನ್ನ ಮನದಂಗಳದೀ ದೀಪ ಹಚ್ಚ
ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ಹಳೆ ಬಾಳು ಸತ್ತಿತ್ತು ಕೊಳೆ ಬಾಳು ಸುಟ್ಟಿತ್ತು
ಹೊಸ ಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಣ್ಣಾರತಿ ದೀಪ ಹಚ್ಚ
ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ವಿಷ್ಣುಮೋಹಿತ ಚರಣ ವಿವಿಧ ವಿಶ್ವಾಭರಣ
ಆನಂದದ ಕಿರಣ ದೀಪ ಹಚ್ಚ
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೋತ ಉಲಿ ಏಳಲಿ ದೀಪ ಹಚ್ಚ
ನನ್ನಂತರಂಗದಿ ನಂದದೆ ನಿಂದೀಪ
ನಂದಾದೀಪವಾಗಿರಲಿ ದೀಪ ಹಚ್ಚ
ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ನಲ್ಲೆ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SKIN CARE:ಗ್ಲೋಯಿಂಗ್ ಸ್ಕಿನ್ ಪಡೆಯಲು 5 ಹಣ್ಣುಗಳು;

Wed Feb 16 , 2022
ನಿಮ್ಮ ತ್ವಚೆಯ ಆರೈಕೆಗಾಗಿ ನೀವು ವಿವಿಧ ವಿಧಾನಗಳ ಬಗ್ಗೆ ಯೋಚಿಸುತ್ತಿದ್ದರೆ, ನಂತರ ಪಟ್ಟಿಗೆ ಹಣ್ಣುಗಳನ್ನು ಸೇರಿಸಿ. ಹಣ್ಣುಗಳು ವಿವಿಧ ಪೋಷಕಾಂಶಗಳು ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿವೆ. ಅವು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವೂ ಆಗಿರಬಹುದು. ಹಣ್ಣಿನಲ್ಲಿರುವ ವಿವಿಧ ಪೋಷಕಾಂಶಗಳು ಹೊಳೆಯುವ ಚರ್ಮವನ್ನು ಹೊಂದಲು, ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು, ಯಾವುದೇ ರೀತಿಯ ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಚರ್ಮದ ಅಂಗಾಂಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಹತ್ತಿರದ ಮಾರುಕಟ್ಟೆಗಳಲ್ಲಿ ನೀವು ಸುಲಭವಾಗಿ […]

Advertisement

Wordpress Social Share Plugin powered by Ultimatelysocial