Omicron:ಪರೀಕ್ಷೆ ದಿನಾಂಕ ಪ್ರಕಟ ಮಾಡದ ಶಿಕ್ಷಣ ಇಲಾಖೆ.. SSLC ಪರೀಕ್ಷೆಗೆ ಒಮಿಕ್ರಾನ್ ‌ಕಂಟಕವಾಗುತ್ತಾ?

ಬೆಂಗಳೂರು: 2021-22 ನೇ ಸಾಲಿನ SSLC ಪರೀಕ್ಷೆಯಾ ದಿನಾಂಕ ಇನ್ನು ಪ್ರಕಟವಾಗಿಲ್ಲ. SSLC ಅರ್ಧವಾರ್ಷಿಕ ಪರೀಕ್ಷೆ ಕೂಡ ನಡೆಸಿಲ್ಲ. ಇದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ CBSE ಹಾಗೂ ICSE ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ಮುಗಿದಿದೆ.

ಆದ್ರೆ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿಲ್ಲ.

ಈಗಾಗಲೇ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಆಗ್ತಿದೆ. ಆದ್ರೆ ಇದು ಶೈಕ್ಷಣಿಕ ಚಟುವಟಿಕೆ ಮೇಲೆ ಒಮಿಕ್ರಾನ್ ಕರಿನೆರಳು ಬೀರುತ್ತಾ ಅನ್ನೋ ಅನುಮಾನಕ್ಕೆ ಕಾರಣವಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಒಮಿಕ್ರಾನ್ ಕೇಸ್ ಗಳ ಸಂಖ್ಯೆ ಲಕ್ಷ ಗಡಿ ದಾಟಲಿದೆ ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಿದ್ರೂ ಶಿಕ್ಷಣ ಇಲಾಖೆ ಮಕ್ಕಳ ಪರೀಕ್ಷೆ ನಡೆಸುವ ಕುರಿತು ಚಿಂತನೆ ‌ನಡೆಸಿಲ್ಲ.

ಪರೀಕ್ಷೆ ನಡೆಸಬೇಕಾದ್ರೆ ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಪರೀಕ್ಷಾ ದಿನಾಂಕ ಪ್ರಕಟ ಮಾಡಬೇಕು. ಆದ್ರೆ ಇದುವರೆಗೂ ಶಿಕ್ಷಣ ‌ಇಲಾಖೆ SSLC ಪರೀಕ್ಷಾ ದಿನಾಂಕ ಪ್ರಕಟಿಸಿಲ್ಲ.

ಈ ಬಗ್ಗೆ ಮಾತನಾಡಿರುವ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, “ಇಲಾಖೆಗೆ ಮಕ್ಕಳ ಭವಿಷ್ಯದ ಚಿಂತೆ ಇಲ್ಲ. ಅಧಿಕಾರಿಗಳಿಗೆ ಹಣ ಮಾಡಿಕೊಳ್ಳುವ ಚಿಂತೆ. ಶಾಲೆಗಳ ಮಾನ್ಯತೆ ನವೀಕರಣ ಮಾಡುವ ವಿಚಾರದಲ್ಲಿ ಅಧಿಕಾರಿಗಳು ಮಗ್ನರಾಗಿದ್ದಾರೆ. ಹೀಗಾಗಿ ಇಲಾಖೆ ಇದುವರೆಗೂ SSLC ಪರೀಕ್ಷಾ ದಿನಾಂಕ ಪ್ರಕಟಿಸಿಲ್ಲ. ಕೂಡಲೇ ಶಿಕ್ಷಣ ಇಲಾಖೆ SSLC ಪರೀಕ್ಷೆ ಕುರಿತು ದಿನಾಂಕ ಪ್ರಕಟಿಸಬೇಕು. ಮಕ್ಕಳ ಭವಿಷ್ಯದ ಚಿಂತನೆ ಕಡೆ ಇಲಾಖೆ ಗಮನ ಕೊಡಲಿ” ಎಂದು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಟಿ ರಮ್ಯ:ತೇಜಸ್ವಿ ಸೂರ್ಯನ ಬುರುಡೆಯಲ್ಲಿ ಮೆದುಳೇ ಇಲ್ಲ ;

Tue Dec 28 , 2021
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯನ ಬುರುಡೆಯಲ್ಲಿ ಮೆದುಳೇ ಇಲ್ಲ ಅಂತ ನಟಿ, ಮಾಜಿ ಸಂಸದೆ, ರಮ್ಯಾ ವಾಗ್ದಾಳಿ ನಡೆಸಿದ್ದಾರೆ. ಇನ್ ಸ್ಟಾ ಸ್ಟೋರಿಯಲ್ಲಿ ವಿವಾದಾತ್ಮಕ ಹೇಳಿಕೆಯ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ರಮ್ಯಾ, ಈ ಮನುಷ್ಯನ ಬುರುಡೆಯಲ್ಲಿ ಮೆದುಳು ಇಲ್ಲ ಎಂದು ಬರೆದುಕೊಂಡಿದ್ದಾರೆ. ಘಟನೆ ಹಿನ್ನೆಲೆ : ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಹಿಂದೂ ಪುನರುತ್ಥಾನ’ ಎಂಬ ವಿಷಯದ ಕುರಿತು ಮಾತನಾಡುತ್ತ ಅವರು ಮುಸ್ಲಿಂರು […]

Advertisement

Wordpress Social Share Plugin powered by Ultimatelysocial