ಪಾರ್ಲೆ- ಜಿ ಪ್ಯಾಕೆಟ್​ನಲ್ಲಿರುವ ಪ್ಯಾಕೆಟ್​ನಲ್ಲಿ ಕಾಣುವ ಮಗು ಯಾರು..?

ಜೀವನದಲ್ಲಿ ಒಮ್ಮೆಯಾದರೂ ನೀವು ಪಾರ್ಲೆ ಜಿ ಬಿಸ್ಕತ್ತನ್ನು ತಿಂದೇ ಇರ್ತೀರಾ..! ಆದರೆ ಈ ಬಿಸ್ಕತ್ತಿಗೆ ಪಾರ್ಲೆ ಜಿ ಎಂಬ ಹೆಸರು ಹೇಗೆ ಬಂತು ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ..?‌ ಈ ಬಿಸ್ಕತ್ತು ತಯಾರಿಕೆಯ ಕಾರ್ಯವನ್ನು ಮುಂಬೈನ ವಿಲೇ ಪಾರ್ಲೆಯಲ್ಲಿ ಆರಂಭಿಸಲಾಯ್ತು.

ಇದೇ ಕಾರಣಕ್ಕೆ ಪಾರ್ಲೆ ಎಂಬ ಪದವನ್ನು ಬಳಕೆ ಮಾಡಲಾಯ್ತು. ಆದರೆ ಪಾರ್ಲೆ ಜಿ ಯಲ್ಲಿರುವ ‘ಜಿ’ ಅಂದರೆ ಏನು..? ಆ ಪ್ಯಾಕೆಟ್​ನಲ್ಲಿರುವ ಮಗು ಯಾರು..? ಎಂಬ ಪ್ರಶ್ನೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಪಾರ್ಲೆ ಉತ್ಪನ್ನಗಳು 1929ರಿಂದ ಆರಂಭವಾದವು. ಮೊದಲು ಈ ಕಾರ್ಖಾನೆಯಲ್ಲಿ ಕೆಲಸ ಮಾಡ್ತಾ ಇದ್ದದ್ದು ಕೇವಲ 12 ಮಂದಿ ಮಾತ್ರ. ಆಗ ಈ ಬಿಸ್ಕತ್ತಿನ ಹೆಸರು ಪಾರ್ಲೆ – ಗ್ಲುಕೋ ಎಂದಾಗಿತ್ತು. 80 ದಶಕದ ಆರಂಭದವರೆಗೂ ಅದೇ ಹೆಸರನ್ನು ಮುಂದುವರಿಸಲಾಗಿತ್ತು. ಆದರೆ 1981ರಲ್ಲಿ ಕಂಪನಿಯು ಗ್ಲುಕೋ ಎಂಬ ಪದವನ್ನು ಶಾರ್ಟ್ ಮಾಡಿ ಪಾರ್ಲೆ ಜಿ ಎಂದು ಬದಲಾಯಿಸಿದೆ. 80 ದಶಕದಲ್ಲಿ ಈ ಬಿಸ್ಕತ್ತು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರ ಫೇವರಿಟ್​ ಆಗಿ ಬದಲಾಗಿತ್ತು. ಮಕ್ಕಳಿಗೆ ಈ ಬಿಸ್ಕತ್ತು ಇಷ್ಟವಾದ ಬಳಿಕ ಪಾರ್ಲೆ ಜಿ ಯಲ್ಲಿದ್ದ ಜಿಯನ್ನು ಜೀನಿಯಸ್​ ಎಂದು ಬದಲಾಯಿಸಲಾಯ್ತು. ಆದರೂ ಪ್ಯಾಕೆಟ್​ ಮೇಲೆ ಜಿ ಎಂದೇ ಬರೆಯಲಾಗಿತ್ತು.

ಪಾರ್ಲೆ ಜಿ ಬಿಸ್ಕತ್ತಿನ ಪ್ಯಾಕೆಟ್​ನಲ್ಲಿರುವ ಮಗು ಯಾರು..?

ಪಾರ್ಲೆ ಜಿ ಬಿಸ್ಕತ್ತಿನ ಪ್ಯಾಕೆಟ್​ನಲ್ಲಿರುವ ಮಗು ಯಾರು ಎಂಬದು ಒಂದು ಮಿಲಿಯನ್​ ಡಾಲರ್ ಪ್ರಶ್ನೆಯಾಗಿದೆ. ಹಲವು ದಶಕಗಳೇ ಕಳೆದರೂ ಸಹ ಈ ಮಗು ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.

ಆದರೆ ಮೂರು ಹೆಸರುಗಳನ್ನು ಸಾಮಾನ್ಯವಾಗಿ ಹೇಳಲಾಗುತ್ತೆ. ನೀರು ದೇಶಪಾಂಡೆ, ಸುಧಾ ಮೂರ್ತಿ ಹಾಗೂ ಗುಂಜನ್​ ಗುಂಡಾನಿಯಾ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಈ ಮೂವರಲ್ಲಿ ಒಬ್ಬರ ಬಾಲ್ಯದ ಪೋಟೋ ಇದು ಎಂದು ಅನೇಕರು ಹೇಳುತ್ತಾರೆ.ಅದರಲ್ಲೂ ನೀರೂ ದೇಶಪಾಂಡೆ ಹೆಸರು ಹೆಚ್ಚಾಗಿ ಕೇಳಲಾಗುತ್ತಿದೆ.

ಹಲವು ಪತ್ರಿಕೆಗಳಲ್ಲಿ ನೀರು ದೇಶಪಾಂಡೆ ಅವರ ಫೋಟೋ ಸಹಿತ ಸುದ್ದಿ ಪ್ರಕಟವಾಗಿತ್ತು. ಈ ಚಿತ್ರವು ನಾಗ್ಪುರದ ನಿವಾಸಿ 65 ವರ್ಷದ ನೀರು ಅವರ ಬಾಲ್ಯದ ಚಿತ್ರ ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿವೆ. ನೀರೂ ಅವರ ಈ ಚಿತ್ರವನ್ನು ಆಕೆ 4 ವರ್ಷದವಳಿದ್ದಾಗ ತೆಗೆದದ್ದು ಎಂದು ಸುದ್ದಿಯಲ್ಲಿ ಹೇಳಲಾಗಿತ್ತು. ಅವರ ತಂದೆ ವೃತ್ತಿಪರ ಛಾಯಾಗ್ರಾಹಕ ಅಲ್ಲ, ಆದ್ದರಿಂದ ಅವರು ಸುಮ್ಮನೇ ಒಂದು ಫೋಟೋ ತೆಗೆದಿದ್ದರು. ಆ ಫೋಟೊ ಎಷ್ಟು ಚೆನ್ನಾಗಿ ಬಂದಿತ್ತು ಅಂದರೆ ಅದೇ ಫೋಟೋವನ್ನು ಪಾರ್ಲೆ ಜಿ ಪ್ಯಾಕಿಂಗ್​​ಗೆ ಆಯ್ಕೆ ಮಾಡಿಕೊಂಡಿತು ಎಂದು ಹೇಳಲಾಗುತ್ತದೆ.

ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಪಾರ್ಲೆ ಪ್ರಾಡಕ್ಟ್​ನಿಂದ ಸ್ಪಷ್ಟನೆ ನೀಡಲಾಗಿದೆ. ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಹಾಕಿದ ಗ್ರೂಪ್​​ನ ಪ್ರಾಡಕ್ಟ್​ ಮ್ಯಾನೇಜರ್​ ಮಯಂಕ್​ ಷಾ, ಪ್ಯಾಕೆಟ್​ನಲ್ಲಿ ಕಂಡುಬರುವ ಮಗು ಒಂದು ಇಲ್ಯೂಸ್ಟ್ರೇಷನ್​ ಆಗಿದೆ. ಇದನ್ನು 60ರ ದಶಕದಲ್ಲಿ ಮಾಡಲಾಗಿದೆ. ಇಲ್ಲಿ ಯಾವುದೇ ಮಗುವಿನ ಫೋಟೋವನ್ನು ಕಂಪನಿ ಬಳಕೆ ಮಾಡಿಲ್ಲ. ಈ ಚಿತ್ರವನ್ನು ಎವರೆಸ್ಟ್​​ ಕ್ರಿಯೇಟಿವ್​ ಏಜೆನ್ಸಿ ಸಿದ್ದಪಡಿಸಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

BREAKING NEWS: ಪ್ರೌಢಶಾಲೆ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ;

Thu Dec 30 , 2021
ದಾವಣಗೆರೆ : ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು ಮತ್ತು ಮುಖ್ಯಶಿಕ್ಷಕರು ಹಾಗೂ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಲಿಖಿತ ಪರೀಕ್ಷೆ ಮೂಲಕ ಭರ್ತಿ ಮಾಡಲು ವೇಳಾಪಟ್ಟಿ ಹಾಗೂ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಲಿಖಿತ ಪರೀಕ್ಷೆಗಳನ್ನು ಹಮ್ಮಿಕೊಂಡಿರುವ ವಿಸ್ತøತವಾದ ವೇಳಾಪಟ್ಟಿ ಹಾಗೂ ಅರ್ಜಿ ಸಲ್ಲಿಸಲು ಮಾರ್ಗಸೂಚಿ ಅಂಶಗಳ ಸಹಿತವಾಗಿ ಈಗಾಗಲೇ ಇಲಾಖಾ ವೆಬ್ ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ. ದಾವಣಗೆರೆ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರಾಢಶಾಲಾ […]

Advertisement

Wordpress Social Share Plugin powered by Ultimatelysocial