Parliament Special Session: ಮಹಿಳಾ ಮೀಸಲಾತಿಗೆ ಮೀನಾಮೇಷ: ರಾಜ್ಯಸಭೆಯತ್ತ ಎಲ್ಲರ ಚಿತ್ತ

ದೆಹಲಿ ಸೆಪ್ಟೆಂಬರ್ 21: ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಬುಧವಾರ ಸಂಸತ್ತಿನ ಕೆಳಮನೆಯಲ್ಲಿ ಅನುಮೋದನೆ ನೀಡಲಾಗಿದೆ. ಇಂದು ರಾಜ್ಯಸಭೆಯಲ್ಲಿ ಈ ಮಸೂದೆ ಮಂಡನೆಯಾಗಲಿದ್ದು ಎಲ್ಲರ ಚಿತ್ತ ರಾಜ್ಯಸಭೆಯತ್ತ ನೆಟ್ಟಿದೆ. ಲೋಕಸಭೆಯು ಸಂವಿಧಾನ (128 ನೇ ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ.

454 ಸದಸ್ಯರು ಪರವಾಗಿ ಮತ ಚಲಾಯಿಸಿದ್ದಾರೆ.

ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸಿದ್ದಪಡಿಸಲಾಗಿದ್ದ, ಐತಿಹಾಸಿಕ ” ನಾರಿ ಶಕ್ತಿ ವಂದನಾ ಅಧಿನಿಯಮ 2023” (ಮಹಿಳಾ ಮೀಸಲಾತಿ ಮಸೂದೆ)ಯು ಲೋಸಭೆಯಲ್ಲಿ ಬುಧವಾರ ಅಂಗೀಕಾರವಾಗಿದೆ. ಬುಧವಾರ ಬೆಳಗ್ಗೆಯಿಂದ ಲೋಕಸಭೆಯಲ್ಲಿ ಮಹಿಲಾ ಮೀಸಲಾತಿ ಮಸೂದೆಯ ಮೇಲೆ ಸುದೂರ್ಘ ಚರ್ಚೆ ನಡೆಯಿತು.

60 ಸದಸ್ಯರು ಭಾಗವಹಿಸಿ ಎಂಟು ಗಂಟೆಗಳ ಚರ್ಚೆಯ ನಂತರ ಕೇವಲ ಇಬ್ಬರು ಮಾತ್ರ ಅದರ ವಿರುದ್ಧ ಮತ ಚಲಾಯಿಸಿದರು. ನೂತನ ಸಂಸತ್ ಭವನದಲ್ಲಿ ಅಂಗೀಕಾರವಾದ ಮೊದಲ ಮಸೂದೆಯ ಮತದಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು.

ಪಕ್ಷಗಳ ನಡುವೆ ಒಮ್ಮತದ ಕೊರತೆಯಿಂದಾಗಿ 27 ವರ್ಷಗಳಿಂದ ಬಾಕಿ ಉಳಿದಿರುವ ಮಸೂದೆಯನ್ನು ಪುನರುಜ್ಜೀವನಗೊಳಿಸಲಾಗಿದ್ದು ರಾಜ್ಯಸಭೆಯಲ್ಲಿ ಅಂಗೀಕಾರಕ್ಕಾಗಿ ಒತ್ತಾಯಿಸಲ್ಪಟ್ಟಿದೆ. ಕೆಳಮನೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ.

ಇತರ ಹಿಂದುಳಿದ ವರ್ಗಗಳ (ಒಬಿಸಿ) ಮಹಿಳೆಯರಿಗೆ ಇದೇ ರೀತಿಯ ಪ್ರಯೋಜನಗಳನ್ನು ವಿಸ್ತರಿಸಲು ಮತ್ತು 2024ರ ಸಾರ್ವತ್ರಿಕ ಚುನಾವಣೆಯ ಮೊದಲು ಕ್ರಮವನ್ನು ತಕ್ಷಣವೇ ಜಾರಿಗೆ ತರಲು ಪ್ರತಿಪಕ್ಷಗಳ ಬೇಡಿಕೆಗಳ ನಡುವೆ ಕೆಳಮನೆಯಲ್ಲಿ ಮಸೂದೆಯನ್ನು ಬುಧವಾರ ಸುಗಮವಾಗಿ ಅಂಗೀಕರಿಸಲಾಯಿತು.

ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ತೆರೆದುಕೊಂಡ ಸಂಗತಿಗಳು ಇಲ್ಲಿದೆ:

*ಕಳೆದ ದಿನ ನಡೆದ ಅಧಿವೇಶನದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲು ಬಲವಾಗಿ ಒತ್ತಾಯಿಸಿದರು. ಮೀಸಲಾತಿಯನ್ನು ಜಾರಿಗೆ ತರುವಲ್ಲಿ ಮಾಡುತ್ತಿರುವ ವಿಳಂಬ ಮಹಿಳೆಯರಿಗೆ ಮಾಡುತ್ತಿರುವ ಅನ್ಯಾಯ ಎಂದು ಪ್ರತಿಪಾದಿಸಿದರು.

*ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸರ್ಕಾರ ತಲೆಕೆಡಿಸಿಕೊಂಡಿದೆ. ಇದು ಸರ್ಕಾರದ ಗಿಮಿಕ್ ಎಂದು ಹಲವಾರು ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿವೆ.

*ಮಸೂದೆ ಕುರಿತು ಮಾತನಾಡಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರಾದ ಮಹುವಾ ಮೊಯಿತ್ರಾ, “ಮಹಿಳಾ ಮೀಸಲಾತಿ ಚುನಾವಣಾ ಗಿಮಿಕ್ ಇರಬಹುದು. 2024 ಅನ್ನು ಮರೆತುಬಿಡಿ, 2029 ರಲ್ಲಿ ಇದು ಸಾಧ್ಯವಾಗದಿರಬಹುದು.” ಎಂದು ಮಸೂದೆ ಅಂಗೀಕಾರಕ್ಕಾಗಿ ನಡೆಯುತ್ತಿರುವ ವಾದ ಪ್ರತಿವಾದಗಳ ಬಗ್ಗೆ ಹೇಳಿಕೆ ನೀಡಿದರು.

*ಈ ನಡುವೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಸದಸ್ಯೆ ಸುಪ್ರಿಯಾ ಸುಳೆ ಶಾಸನವನ್ನು ಮಸೂದೆ ಅನುಷ್ಠಾನದ ದಿನಾಂಕ ಮತ್ತು ಸಮಯವನ್ನು ಸರ್ಕಾರವು ವಿವರಿಸಬೇಕೆಂದು ಒತ್ತಾಯಿಸಿದರು.

*ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಗೃಹ ಸಚಿವ ಅಮಿತ್ ಶಾ, ಮಸೂದೆ ಅನುಷ್ಠಾನದಲ್ಲಿನ ವಿಳಂಬದ ಆತಂಕವನ್ನು ತಳ್ಳಿಹಾಕಿದರು. ಮುಂದಿನ ಸರ್ಕಾರವು ಚುನಾವಣೆಯ ನಂತರ ಜನಗಣತಿಯನ್ನು ನಡೆಸಲಿದೆ ಎಂದು ಪ್ರತಿಪಾದಿಸಿದರು. 2029ರ ನಂತರ ಮಹಿಳಾ ಮೀಸಲಾತಿ ಸಾಕಾರಗೊಳ್ಳಲಿದೆ ಎಂದು ಶಾ ಹೇಳಿದ್ದಾರೆ.

* ಇನ್ನೂ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮಸೂದೆಗೆ ವಿರೋಧದ ಏಕೈಕ ಧ್ವನಿಯಾಗಿದ್ದರು. ಯಾಕೆಂದರೆ ಈ ಕ್ರಮ “ಸವರ್ಣ ಮಹಿಳೆಯರಿಗೆ” ಮಾತ್ರ ಮೀಸಲಾತಿಯನ್ನು ಒದಗಿಸುತ್ತದೆ ಮತ್ತು ಸಂಸತ್ತಿನಲ್ಲಿ ಕಡಿಮೆ ಪ್ರಾತಿನಿಧ್ಯವನ್ನು ಹೊಂದಿರುವ OBC ಮತ್ತು ಮುಸ್ಲಿಂ ಮಹಿಳೆಯರನ್ನು ಹೊರತುಪಡಿಸುತ್ತದೆ ಎಂದು ಪ್ರತಿಪಾದಿಸಿದರು. ಎಐಎಂಐಎಂ ಲೋಕಸಭೆಯಲ್ಲಿ ಇಬ್ಬರು ಸದಸ್ಯರನ್ನು ಹೊಂದಿದೆ.

*ರಾಜ್ಯಸಭೆಯಲ್ಲಿ ವಿಧೇಯಕದ ಚರ್ಚೆ ನಡೆದಾಗ ಬಿಜೆಪಿಯ 14 ಮಹಿಳಾ ಸಂಸದರು ಮತ್ತು ಸಚಿವರು ಮಾತನಾಡಲಿದ್ದಾರೆ. ಪ್ರಸ್ತುತ ಲೋಕಸಭೆಯಲ್ಲಿ ಒಟ್ಟು 543 ಸದಸ್ಯರ ಪೈಕಿ 82 ಮಹಿಳಾ ಸದಸ್ಯರಿದ್ದಾರೆ. ಇಂದು ಸಂಸತ್ತಿನ ನಾಲ್ಕನೇ ದಿನದ ವಿಶೇಷ ಅಧಿವೇಶನ ನಡೆಯಲಿದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

BIGG NEWS : ಅಪಘಾತ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಿದ ಭಾರತೀಯ ರೈಲ್ವೆ ಇಲಾಖೆ!

Thu Sep 21 , 2023
    ನವದೆಹಲಿ : ರೈಲು ಅಪಘಾತದಲ್ಲಿ ಯಾರಾದ್ರೂ ಮೃತಪಟ್ಟರೆ ಅಥವಾ ಗಾಯಗೊಂಡರೆ ನೀಡಲಾಗುವ ಪರಿಹಾರ ಮೊತ್ತವನ್ನು ಭಾರತೀಯ ರೈಲ್ವೆ ಇಲಾಖೆ 10 ಪಟ್ಟು ಹೆಚ್ಚಿಸಿದೆ. 2012 ಮತ್ತು 2013ರಲ್ಲಿ ಪರಿಹಾರ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ‘ರೈಲು ಅಪಘಾತಗಳು ಮತ್ತು ಅಹಿತಕರ ಘಟನೆಗಳಲ್ಲಿ ಭಾಗಿಯಾಗಿರುವ ಮೃತ ಮತ್ತು ಗಾಯಗೊಂಡ ಪ್ರಯಾಣಿಕರ ಅವಲಂಬಿತರಿಗೆ ಪಾವತಿಸಬೇಕಾದ ಪರಿಹಾರದ    ಮೊತ್ತವನ್ನು    ಪರಿಷ್ಕರಿಸಲು ಈಗ ನಿರ್ಧರಿಸಲಾಗಿದ   ಕೇಂದ್ರ ರೈಲ್ವೆ ಸಚಿವಾಲಯವು ರೈಲು ಅಪಘಾತಗಳು […]

Advertisement

Wordpress Social Share Plugin powered by Ultimatelysocial