ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಂಬಾನಿ ಹಾಗೂ ಅದಾನಿಗಳಂತಹ ಕೈಗಾರಿಕೋದ್ಯಮಿಗಳನ್ನ “ಪೂಜಿಸಬೇಕು’ ಎಂದಿದ್ದಾರೆ.

ಗುರುವಾರ ರಾಜ್ಯಸಭೆಯಲ್ಲಿ ನಿರುದ್ಯೋಗ ಮತ್ತು ಕೇಂದ್ರ ಬಜೆಟ್ ಬಗ್ಗೆ ಚರ್ಚೆ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಕೆ.ಜೆ. ಅಲ್ಫೋನ್ಸ್, ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಂಬಾನಿ ಹಾಗೂ ಅದಾನಿಗಳಂತಹ ಕೈಗಾರಿಕೋದ್ಯಮಿಗಳನ್ನ “ಪೂಜಿಸಬೇಕು’ ಎಂದಿದ್ದಾರೆ.ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.ನೀವು ನನ್ನನ್ನು ಬಂಡವಾಳಶಾಹಿಗಳ ಪರವಾದ ಮುಖವಾಣಿ ಎಂದು ಆರೋಪಿಸಬಹುದು. ಈ ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ ಜನರ ಹೆಸರನ್ನು ನಾನು ಹೇಳುವೆ. ಏಕೆಂದರೆ ನೀವುಗಳು ಅವರ ಬಗ್ಗೆ ಮಾತನಾಡುತ್ತಿರುತ್ತೀರಾ. ರಿಲಯನ್ಸ್ ಇರಲಿ, ಅಂಬಾನಿ ಇರಲಿ, ಅದಾನಿ ಇರಲಿ, ಯಾರೇ ಇರಲಿ, ಅವರನ್ನು ಪೂಜಿಸಬೇಕು. ಏಕೆಂದರೆ ಅವರು ಉದ್ಯೋಗಗಳನ್ನು ಒದಗಿಸುತ್ತಿದ್ದಾರೆ. ಅಂಬಾನಿ, ಅದಾನಿ, ಈ ದೇಶದಲ್ಲಿ ಹಣವನ್ನು ಹೂಡಿಕೆ ಮಾಡಿ, ಹಣ ಸಂಪಾದಿಸುವ ಜೊತೆಗೆ ಅವರು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಅವರನ್ನು ಗೌರವಿಸಬೇಕು ಎಂದಿದ್ದಾರೆ.ಸಂಸದರ ಹೇಳಿಕೆಯನ್ನು ಖಂಡಿಸಿದ ವಿರೋಧ ಪಕ್ಷಗಳು, ಸರಕಾರವು “ಮುಖರಹಿತ” ಹಾಗೂ “ನಿರುದ್ಯೋಗ, ಬೆಳವಣಿಗೆಯ ಬಗ್ಗೆ ಮಾತನಾಡುತ್ತಿದೆ, ಸರಕಾರದ ನೀತಿಗಳು ಆದಾಯದ ಅಸಮಾನತೆಯನ್ನು ಹೆಚ್ಚಿಸುತ್ತಿದೆ ಎಂದು ವಾದಿಸಿವೆ.ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ಉತ್ತರ ಕೊಟ್ಟಿರುವ ಮಾಜಿ ಕೇಂದ್ರ ಸಚಿವ ಅಲ್ಫೋನ್ಸ್, “ಜಾಗತಿಕ ಅಸಮಾನತೆಗಳು ಎಂಬುದು, ಒಂದು ಸತ್ಯ” ಆದರೆ ಅಂಬಾನಿ, ಅದಾನಿ‌ ಮಾತ್ರವಲ್ಲ, ಇಲಾನ್ ಮಸ್ಕ್, ಅಮೆಜಾನ್ ಒಡೆಯ ಜೆಫ್ ಬೆಜೋಸ್, ಲ್ಯಾರಿ ಪೇಜ್ ಅವರ ಆಸ್ತಿಯಲ್ಲೂ ಏರಿಕೆಯಾಗಿದೆ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುಎಸ್ನಲ್ಲಿ 'ಫುಲ್ ಬ್ಲೋನ್' ಕೋವಿಡ್ -19 ಸಾಂಕ್ರಾಮಿಕ ಹಂತವು ಬಹುತೇಕ ಮುಗಿದಿದೆ: ಡಾ. ಆಂಥೋನಿ ಫೌಸಿ

Sat Feb 12 , 2022
  ಏತನ್ಮಧ್ಯೆ, ಜಾಗತಿಕ ಕರೋನವೈರಸ್ ಕ್ಯಾಸೆಲೋಡ್ 405,688,274 ತಲುಪಿದೆ, ಆದರೆ ಸಾವುಗಳು 405,688,274 ಕ್ಕೆ ಏರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಯುಎಸ್ ಶೀಘ್ರದಲ್ಲೇ ಕೋವಿಡ್ -19 ರ ಸಂಪೂರ್ಣ ಸಾಂಕ್ರಾಮಿಕ ಹಂತದಿಂದ ಹೊರಬರಲಿದೆ, ಆದರೆ ನಾವು ಈ ವೈರಸ್ ಅನ್ನು ನಿರ್ಮೂಲನೆ ಮಾಡಲು ಯಾವುದೇ ಮಾರ್ಗವಿಲ್ಲ ಎಂದು ಉನ್ನತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ. ಲಸಿಕೆಗಳು, ಚಿಕಿತ್ಸೆಗಳು ಮತ್ತು ಹಿಂದಿನ ಸೋಂಕಿನ ಸಂಯೋಜನೆಯೊಂದಿಗೆ, […]

Advertisement

Wordpress Social Share Plugin powered by Ultimatelysocial