ಡ್ರಗ್ ಜಾಲದಲ್ಲಿ ಸದ್ದು ಮಾಡಿತ್ತು ಕರಣ್ ಮನೆಯ ಪಾರ್ಟಿ ವೀಡಿಯೋ

ಪಾರ್ಟಿ ಕಂಟಕದಿಂದ ಕರಣ್ ಸೇಫ್ 

ಡ್ರಗ್ ಮಾಫಿಯಾ ವಿಚಾರದಲ್ಲಿ ಬಾಲಿವುಡ್ ಬಣ್ಣದ ಲೋಕದ ಬಗ್ಗೆ ಇತ್ತೀಚೆಗೆ ಹೆಚ್ಚು ಸುದ್ದಿಗಳು ಹರಿದಾಡಿದ್ವು.. ಬಿಟೌನ್ ನ ನಟ, ನಿರ್ಮಾಪಕ ಕರಣ್ ಜೋಹರ್ ಅವರ ಪಾರ್ಟಿ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿ, ಬಾಲಿವುಡ್ ಚಿತ್ರರಂಗದ ಸಾಕಷ್ಟು ಜನ ಸೆಲೆಬ್ರೆಟಿಗಳಿಗೆ ಕಂಟಕವನ್ನ ತಂದಿತ್ತು.. ಇದೀಗ ಕರಣ್ ಅವರ ಪಾರ್ಟಿ ವೀಡಿಯೋದ ಸಮಸ್ಯೆಗೆ ಅಧಿಕೃತವಾಗಿ ಪರಿಹಾರ ಸಿಕ್ಕಂತಾಗಿದೆ..

ಕರಣ್ ಜೋಹರ್ ಪಾರ್ಟಿ ವೀಡಿಯೋ ವಿವಾದಕ್ಕೆ ಅಧಿಕೃತ ಕ್ಲೀನ್ ಚಿಟ್

ಬಣ್ಣದ ಲೋಕದಲ್ಲಿ ಡ್ರಗ್ ಮಾಫಿಯಾ ಇದೆ ಅನ್ನುವ ವಿಚಾರ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಗೀಡಾಗಿರೋದು ನಿಮಗೆಲ್ಲಾ ಗೊತ್ತೇ ಇದೆ.. ಅದ್ರಲ್ಲೂ ಬಾಲಿವುಡ್ ಸಿನಿ ದುನಿಯಾಗೆ ಅತೀ ಹೆಚ್ಚು ನಶೆಯ ನಂಟಿದೆ ಎಂದು ಸುದ್ದಿಯಾಗಿತ್ತು.. ಬಾಲಿವುಡ್ ಡ್ರಗ್ ಮಾಫಿಯಾ ಅಂತ ಬಂದಾಗ ಹೆಚ್ಚು ಸದ್ದು ಮಾಡಿದ್ದು ಬಿಟೌನ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಮನೆಯಲ್ಲಿ ನಡೆದಿದ್ದ ಪಾರ್ಟಿ ವೀಡಿಯೋಗಳು.. ಈ ವೀಡಿಯೋಗಳು ಬಾಲಿವುಡ್ ನ ಸಾಕಷ್ಟುನ ಜನ ಸೆಲೆಬ್ರೆಟಿಗಳಿಗೆ ಕಂಟಕವಾಗಿತ್ತು.. ಡ್ರಗ್ ಮಾಫೀಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡ್ತಿದ್ದ ಎನ್ ಸಿ ಬಿ ಅಧಿಕಾರಿಗಳು ಕರಣ್ ಜೋಹರ್ ಮನೆಯಲ್ಲಿ ನಡೆದಿದ್ದ ಪಾರ್ಟಿ ವೀಡಿಯೋ ಆಧಾರದಲ್ಲಿ ಕೇಸ್ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ರು.. ಇದೀಗ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ಈ ವೀಡಿಯೋಗೆ ಕ್ಲೀನ್ ಚಿಟ್ ನೀಡಿದೆ..

ಡ್ರಗ್ ಜಾಲದಲ್ಲಿ ಭಾರೀ ಸದ್ದು ಮಾಡಿತ್ತು ಕರಣ್ ಮನೆಯ ಪಾರ್ಟಿ ವೀಡಿಯೋ
ಪಾರ್ಟಿಯಲ್ಲಿ ಡ್ರಗ್ ಬಳಕೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದ ನಿರ್ಮಾಪಕ ಕರಣ್

ಕಳೆದ ವರ್ಷ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ರು.. ಈ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಶಾಹಿದ್ ಕಪೂರ್ ವಿಕ್ಕಿ ಕೌಶಲ್, ರಣಬೀರ್ ಕಪೂರ್, ವರುಣ್ ಧವನ್ ಜೋಯಾ ಅಖ್ತರ್ ಸೇರಿದಂತೆ ಬಾಲಿವುಡ್ ನ ಸಾಕಷ್ಟು ಜನ ಸ್ಟಾರ್ ಸೆಲೆಬ್ರೆಟಿಗಳು ಭಾಗಿಯಾಗಿದ್ರು.. ಈ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿದೆ ಅನ್ನುವ ಆರೋಪ ಕೇಳಿಬಂದಿತ್ತು.. ಈ ವೀಡಿಯೋದಲ್ಲಿ ಎಲ್ರೂ ಮತ್ತಿನಲ್ಲಿರುವಂತೆ ಕಾಣಿಸಿಕೊಂಡಿದ್ರು, ಸೆಲೆಬ್ರೆಟಿಗಳು ಡ್ರಗ್ ಸೇವಿಸಿದ್ರು ಅನ್ನುವ ಅನುಮಾನ ಕೂಡ ಬಲವಾಗಿ ಕಾಡಿತ್ತು.. ಆದ್ರೆ ಈ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ಈ ಹಿಂದೆಯೇ ಸ್ಪಷ್ಟನೆ ನೀಡಿದ್ರು.. ೨೦೧೯ರಲ್ಲಿ ಕರಣ್ ಜೋಹರ್ ಆಯೋಜಿಸಿದ್ದ ಪಾರ್ಟಿಯಲ್ಲಿ ಡ್ರಗ್ ಬಳಕೆಯಾಗಿತ್ತು ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.. ಇದು ಸುಳ್ಳು ಸುದ್ದಿ.. ಆಧಾರ ರಹಿತವಾದ ಆರೋಪವಾಗಿದೆ.. ಪಾರ್ಟಿಯಲ್ಲಿ ಯಾವುದೇ ಡ್ರಗ್ಸ್ ಬಳಕೆಯಾಗಿಲ್ಲ, ಡ್ರಗ್ಸ್ ಬಗ್ಗೆ ಪ್ರಚಾರವನ್ನೂ ಮಾಡಿಲ್ಲ, ಡ್ರಗ್ಸ್ ತೆಗೆದುಕೊಳ್ಳುವಂತೆ ಪ್ರಚೋದನೆಯನ್ನೂ ಮಾಡಿಲ್ಲ ಎಂದು ಅಧಿಕೃತವಾಧ ಹೇಳಿಕೆಯನ್ನು ಬಿಡುಗಡೆ ಮಾಡಿದ್ರು..

ಕರಣ್ ಜೋಹರ್ ಮನೆಯ ಪಾರ್ಟಿ ವೀಡಿಯೋ ವಿವಾದದ ಬಗ್ಗೆ ಎನ್ ಸಿ ಬಿ ಅಧಿಕಾರಿಗಳು ಪರಿಶೀಲನೆ ನಡೆದ ಬಳಿಕ ಇದೀಗ ಕರಣ್ ಜೋಹರ್ ಅವರು ಪೋಸ್ಟ್ ಮಾಡಿದ್ದ ವೀಡಿಯೋದಲ್ಲಿ ಡ್ರಗ್ಸ್ ಅಥವಾ ಯಾವುದೇ ಮಾದಕ ವಸ್ತಗಳು ಬಳಕೆಯಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಿಳಿಸಿದೆ.. ಆ ವೀಡಿಯೋದಲ್ಲಿ ಬರುವ ಪ್ರತಿಬಿಂಬ ಬೆಳಕಿನದ್ದು ಎಂದು ಸ್ಪಷ್ಟಪಡಿಸಿದೆ.. ಈ ಮೂಲಕ ಕರಣ್ ಜೋಹರ್ ಮನೆಯಲ್ಲಿ ನಡೆದಿದ್ದ ಪಾರ್ಟಿ ವೀಡಿಯೋ ವಿವಾದಕ್ಕೆ ಅಧಿಕೃತವಾಗಿ ಪರಿಹಾರ ಸಿಕ್ಕಂತಾಗಿದೆ.. ಇದ್ರಿಂದಾಗಿ ಕರಣ್ ಜೋಹರ್ ಗೆ ಬಿಗ್ ರಿಲೀಫ್ ಸಿಕ್ಕಿದೆ..

ಇನ್ನೂ ರಿಯಾ ಚಕ್ರವರ್ತಿಯ ಹೇಳಿಕೆ ಹಿನ್ನೆಲೆ ಬಾಲಿವುಡ್ ನಟಿಯರನ್ನ ಎನ್ ಸಿ ಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ರು.. ಬಿಟೌನ್ ನಟಿಮಣಿಯರಾದಾ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಡ್ರಗ್ಸ್ ಕೇಸ್ ನಲ್ಲಿ ವಿಚಾರಣೆ ಎದುರಿಸಿದ್ರು.. ಸದ್ಯ ಕರಣ್ ಜೋಹರ್ ಮನೆಯ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದಿಂದ್ಲೇ ಪಾರ್ಟಿಯಲ್ಲಿ ಡ್ರಗ್ ಬಳಕೆಯಾಗಿಲ್ಲ ಅನ್ನುವ ಸ್ಪಷ್ಟನೆ ಸಿಕ್ಕಿದ್ದು, ಈ ಬಗ್ಗೆ ಇದ್ದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ..

 

Please follow and like us:

Leave a Reply

Your email address will not be published. Required fields are marked *

Next Post

ಮುದ್ದೇಬಿಹಾಳ ಮಾರುಕಟ್ಟೆಗೆ ಲಗ್ಗೆ ಇಟ್ಟಿದ ನೂತನ ಪುರಸಭೆ ಗಾರ್ಡ್ ತಂಡ

Thu Oct 29 , 2020
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಪುರಸಭೆ ಕಚೇರಿಯ ಸಹಯೋಗದಲ್ಲಿ ನೂತನ ಗಾರ್ಡ ಖಾಖಿ ಪಡೆ ಲಗ್ಗೆ ಯಾವುದೇ ಸಂದರ್ಭದಲ್ಲೂ ನಡೆಯಲ್ಲ ಗದ್ದಲ ಗೊಂದಲ ಮಾರುಕಟ್ಟೆಯಲ್ಲಿ ಆವಾಜ ಹಾಕಿದರೆ ಬಿಳ್ಳುತ್ತೆ ಲಗಾಮ, ರಸ್ತೆಯಲ್ಲಿ ಟ್ರಾಫಿಕ್ ತಡೆಗೆ ಹೊಸ ದಾರಿ , ನಾಳೆಯಿಂದ ಅಂಗಡಿ ಮುಂದೆ ಕಸ ಚೆಲ್ಲಿದರೆ ಸ್ವಚ್ಛತೆ ಬಗ್ಗೆ ತಿಳಿ ಹೇಳುವ ಹೊಸ ಸೈನಿಕ ಪಡೆ ಸಮವಸ್ತ್ರ ದಾರೆಯವರು , ಅಂಗಡಿಕಾರರೇ ಅಂಗಡಿ ಮುಂಗಟ್ಟುಗಳಲ್ಲಿ ಕಸ ಚೆಲ್ಲಿದರೆ ಬಿಳ್ಳಲಿದೆ ಕೆಸ […]

Advertisement

Wordpress Social Share Plugin powered by Ultimatelysocial