ಪಠಾಣ್ ಒಂದು ಅದ್ಭುತ!!

ಠಾಣ್ ಒಂದು ಅದ್ಭುತ!! ಒಂದಷ್ಟು ವಿವಾದಗಳಿಂದ ಸುದ್ದಿಯಾಗಿದ್ದ ಶಾರೂಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರವು ಜನವರಿ 25 ರಂದು ತೆರೆಕಂಡು, ಯಶಸ್ವಿ ಪ್ರದರ್ಶನ ಕಾಣ್ತಿದೆ. ಬಾಯ್​​ಕಾಟ್​​ ನಂತಹ ಆತಂಕಗಳನ್ನೂ ಮೆಟ್ಟಿ ನಿಂತು ಚಿತ್ರಮಂದಿರಗಳಿಗೆ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅದೇ ಕಾರಣಕ್ಕೆ ಶಾರೂಖ್ ಅಭಿಮಾನಿಗಳು ಪಠಾಣ್ ಒಂದು ಅದ್ಭುತ!! ಎನ್ನುತ್ತಿದ್ದಾರೆ.

ಬರೋಬ್ಬರಿ 4 ವರ್ಷಗಳ ಬಳಿಕ ದೊಡ್ಡ ಸ್ಕ್ರೀನ್​ಗಳಲ್ಲಿ ಕಿಂಗ್​ ಖಾನ್ ಕಣ್ತುಂಬಿಕೊಂಡ ಅಭಿಮಾನಿಗಳು, ಥಿಯೇಟರ್​ಗಳಲ್ಲಿ ಹುಚ್ಚೆದ್ದು ಕುಣಿದು ಕುಪ್ಪಳಿಸ್ತಿದ್ದಾರೆ, ಪಟಾಕಿಗಳನ್ನು ಸಿಡಿಸಿ, ಕೇಕ್​ಗಳನ್ನು ಕತ್ತರಿಸಿ ಸಂಭ್ರಮಿಸುತ್ತಿದ್ದಾರೆ. ಮಾತ್ರವಲ್ಲ, ಗಳಿಕೆಯಲ್ಲೂ ಕಿಂಗ್ ಖಾನ್ ಚಿತ್ರವು ಮೊದಲ ದಿನವೇ ಹೊಸ ಮೈಲಿಗಲ್ಲು ಊರಿದೆ. ಎರಡನೇ ದಿನ ಅಂದರೆ ನಿನ್ನೆ ಭಾರತ ಒಂದರಲ್ಲೇ ಬರೋಬ್ಬರಿ 70 ಕೋಟಿ ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ರಿಲೀಸ್ ಆಗಿ ಎರಡನೇ ದಿನಕ್ಕೆ ವಿಶ್ವದಾದ್ಯಂತ ಬರೋಬ್ಬರಿ 235 ಕೋಟಿ ರೂಪಾಯಿ ಹಣವನ್ನು ಗಳಿಸಿದೆ ಎಂದು ವರದಿಯಾಗಿದೆ.

ಮೊದಲ ದಿನ ಬರೋಬ್ಬರಿ 100 ಕೋಟಿ ಹಣ ಗಳಿಸಿದೆ. ತಮಿಳು ಹಾಗೂ ತೆಲುಗು ಭಾಷೆಗೆ ಚಿತ್ರವು ಡಬ್ ಆಗಿದ್ದು, ಮೊದಲ ದಿನ ಎರಡರಿಂದ ಮೂರು ಕೋಟಿ ಹಣವನ್ನು ಗಳಿಸಿದೆ. ಥಿಯೇಟರ್​ಗಳಲ್ಲಿ ಶೇಕಡಾ 65ರಷ್ಟು ಅಕ್ಯುಪೆನ್ಸಿ ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಲವ್.

Fri Jan 27 , 2023
      ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಲವ್, ಮ್ಯಾರೇಜ್ ಸ್ಟೋರಿ ಬಗ್ಗೆ ಕಾಲಿವುಡ್‌ನಲ್ಲಿ ಗುಸುಗುಸು ಶುರುವಾಗಿದೆ. ಒಬ್ಬ ಉದ್ಯಮಿಯನ್ನು ಕೀರ್ತಿ 13 ವರ್ಷಗಳಿಂದ ಲವ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಇದೇ ವಿಚಾರ ಈಗ ತಮಿಳು ಚಿತ್ರರಂಗದಲ್ಲಿ ಚರ್ಚೆ ಹುಟ್ಟಾಕಿದೆ. ತಮಿಳು ನಟ ದಳಪತಿ ವಿಜಯ್ ಹಾಗೂ ಕೀರ್ತಿ ಪ್ರೀತಿಸುತ್ತಿದ್ದಾರೆ, ವಿಜಯ್ ಶೀಘ್ರದಲ್ಲೇ ಪತ್ನಿ ಸಂಗೀತಾಗೆ ಡಿವೋರ್ಸ್ ಕೊಡ್ತಾರೆ ಎನ್ನುವ ವದಂತಿ ನಡುವೆ ಹೊಸ ಕಥೆ ಶುರುವಾಗಿದೆ. ಕೀರ್ತಿ ಸುರೇಶ್ […]

Advertisement

Wordpress Social Share Plugin powered by Ultimatelysocial