ಮಹಾ ಪ್ರವಾಹದಲ್ಲಿ ಮುಳುಗಿದ ನ್ಯೂಜಿಲೆಂಡ್​.

ನ್ಯೂಜಿಲೆಂಡ್​​ನಲ್ಲಿ ಪ್ರವಾಹ ಸಾಕಷ್ಟು ಸಮಸ್ಯೆ ತಂದಿಟ್ಟಿದೆ. ಕ್ಷಣಕ್ಷಣಕ್ಕೂ ಭೂಕುಸಿತವಾಗ್ತಿದ್ದು, ಮನೆಗಳಿಗೆ ನೀರು ನುಗ್ಗುತ್ತಿದೆ. ವಿದ್ಯುತ್ ಕಡಿತ ಮಾಡಲಾಗಿದೆ. ರಸ್ತೆ ಸಂಪರ್ಕ ಇಲ್ಲದೇ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗಿದೆ. ಗಾಯದ ಮೇಲೆ ಬರೆ ಎಳೆದಂತೆ, ಚಂಡಮಾರುತದ ಜೊತೆಗೆ ಭೂಕಂಪ ಕೂಡ ನ್ಯೂಜಿಲೆಂಡ್​​ನಲ್ಲಿ ಭಯ ಹುಟ್ಟಿಸಿದೆ.

ಗ್ಯಾಬ್ರಿಯೆಲ್ ಚಂಡಮಾರುತಕ್ಕೆ ನ್ಯೂಜಿಲೆಂಡ್​ನಲ್ಲಿ ಹಾನಿ
ಗ್ಯಾಬ್ರಿಯೆಲ್ ಅನ್ನೋ ಚಂಡಮಾರುತ, ನ್ಯೂಜಿಲೆಂಡ್​ ದೇಶವನ್ನ ಸಂಕಷ್ಟಕ್ಕೆ ದೂಡ್ತಿದೆ. ಏಕಾಏಕಿ ನುಗ್ಗಿದ ನೀರು ಎದುರಿಗೆ ಸಿಕ್ಕವರನ್ನ ಎಳೆದೊಯ್ತಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ರೆ, ಹಲವೆಡೆ ಭೂಕುಸಿತ ಸಾಕಷ್ಟು ಅನಾಹುತ ಮಾಡಿದೆ. ಪ್ರವಾಹ ಮತ್ತು ಏಕಾಏಕಿ ಬಂದ ಚಂಡಮಾರುತಕ್ಕೆ 4ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಗ್ಯಾಬ್ರಿಯೆಲ್ ಸೈಕ್ಲೋನ್​ನಿಂದಾಗಿ ಸುಮಾರು 1 ಸಾವಿರದ 440 ಜನ ನಾಪತ್ತೆಯಾಗಿದ್ದಾರೆ ಅಂತ ಅಲ್ಲಿನ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ನಾಪತ್ತೆಯಾದವರಿಗಾಗಿ ರಕ್ಷಣಾ ಪಡೆಗಳ ಕಾರ್ಯಾಚರಣೆ ನಡೆಸ್ತಿವೆ. ಇಸ್ಕಡಾಲೆ ನಗರದಲ್ಲಿ ಪುಟ್ಟ ಮಗುವಿನ ಶವ ಕೂಡ ಪತ್ತೆಯಾಗಿದೆ.

ಈಗಾಗಲೇ ಪ್ರವಾಹದಿಂದಾಗಿ, ನೂರಾರು ಮನೆಗಳು, ರಸ್ತೆಗಳು ಕೊಚ್ಚಿ ಹೋಗಿವೆ. ನೀರಿನ ರಭಸಕ್ಕೆ ಭೂಕುಸಿತವಾಗಿ, ಹತ್ತಾರು ಬ್ರಿಡ್ಜ್​ಗಳು ಕುಸಿಯುತ್ತಿವೆ. ಮತ್ತೊಂದ್ಕಡೆ ದೇಶದಲ್ಲಿ 80 ಸಾವಿರ ಮನೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ. ಇದರ ಜೊತೆಗೆ ನ್ಯೂಜಿಲೆಂಡ್​​ನಲ್ಲಿ ರಕ್ಷಣಾ ಕಾರ್ಯಾಚರಣೆ ಕೂಡ ಭರದಿಂದ ಸಾಗ್ತಿದೆ. ಈಗಾಗಲೇ ಸೈಕ್ಲೋನ್​ನಿಂದ 4-5 ನಗರಗಳಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ ಘೋಷಿಸಲಾಗಿದೆ. ರಸ್ತೆ, ವಿದ್ಯುತ್ ಸಂಪರ್ಕ ಕಡಿತದಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ.

ನ್ಯೂಜಿಲೆಂಡ್​ನ ವೆಲ್ಲಿಂಗ್​ಟನ್​ಲ್ಲಿ ಪ್ರಬಲ ಭೂಕಂಪ

ಮೊದಲೇ ಪ್ರವಾಹ, ಚಂಡಮಾರುತದಿಂದ ತತ್ತಿರಿಸಿರೋ ನ್ಯೂಜಿಲೆಂಡ್​ನಲ್ಲಿ ಪ್ರಬಲ ಭೂಕಂಪ ಕೂಡ ಸಂಭವಿದೆ. ವೆಲ್ಲಿಂಗ್​ಟನ್​ಲ್ಲಿ ಇಂದು 6.1 ತೀವ್ರತೆಗೆ ಭೂಕಂಪನವಾಗಿದೆ. ನಗರದ ಕಟ್ಟಡಗಳು ಅಲುಗಾಡಿನ ಅನುಭವವಾಗಿದೆ. ಒಟ್ಟಾರೆ, ಸೈಕ್ಲೋನ್ ಪೆಟ್ಟಿನ ನಡುವೆ ನ್ಯೂಜಿಲೆಂಡ್​​ಗೆ ಭೂಕಂಪ, ದೊಡ್ಡ ಹೊಡೆತ ನೀಡುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

66 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಟ್ಟದ ಮೇಲಿಂದ ಕಣಿವೆಗೆ ಉರುಳಿದ್ದು

Thu Feb 16 , 2023
66 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಟ್ಟದ ಮೇಲಿಂದ ಕಣಿವೆಗೆ ಉರುಳಿದ್ದು, ಈ ಅಪಘಾತದಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ 20 ಮಂದಿ ಗಾಯಗೊಂಡಿದ್ದಾರೆಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಅಮೆರಿಕದ ಪಶ್ಚಿಮ ಪನಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಕೊಲಂಬಿಯಾದಿಂದ ಪನಾಮಕ್ಕೆ ಡೇರಿಯನ್ ಲೈನ್ ಅನ್ನು ದಾಟಿ ವಲಸಿಗರನ್ನು ಗೌಲಾಕಾ ನಿರಾಶ್ರಿತರ ಶಿಬಿರಕ್ಕೆ ಸಾಗಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಸರ್ಕಾರದ ಪರವಾಗಿ, ಪನಾಮಾ ಅಧ್ಯಕ್ಷ ಲೊರೆಂಜೊ ಕಾರ್ಟಿಜೊ ಅವರು ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ […]

Advertisement

Wordpress Social Share Plugin powered by Ultimatelysocial