ಬಣ್ಣ ಬಣ್ಣದ ಗಾಳಿಪಟಗಳಿಗೆ ಬಾಗಲಕೋಟೆ ಜನ ಫಿದಾ

ಈವತ್ತು ಬಿಸಿಲು ನಾಡಿನ ಬಾನಿನಲ್ಲಿ ದಿ.ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಂಗೊಳಿಸ್ತಾ ಇದ್ರು,ನಡೆದಾಡುವ ದೇವರು ಇತ್ತೀಚಿಗಷ್ಟೇ ನಿಧನರಾದ ಪೂಜ್ಯ ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ಬಾನಂಗಳದಲ್ಲಿ ರಾರಾಜಿಸ್ತಾ ಇತ್ತು.ಅಲ್ಲೊಂದು ಕಡ ಗಾಳಿಪಟಗಳ ಕಲರವದಿಂದಾಗಿ ಬಾನಂಗಳ ಕಲರ್ ಪುಲ್ ಆಗಿತ್ತು.
ಚಿಣ್ಣರು ಸೇರಿದಂತೆ ವಯಸ್ಸಿನ ಬೇಧ ಮರೆತು ಜನರು ಗಾಳಿಪಟ ಸಂಭ್ರಮದಲ್ಲಿ ಭಾಗಿಯಾದ್ರು.ಹಾಗಾದ್ರೆ ಎಲ್ಲಿ ನಡೀತು ಈ ಗಾಳಿಪಟ ಉತ್ಸವ ಅಂತೀರಾ ಈ ಸ್ಟೋರಿ ನೋಡಿ.

ಗ್ರಾಫಿಕ್ಸ್…

ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಗಾಳಿಪಟಗಳು

ಆಧುನಿಕತೆಯ ಭರಾಟೆಯ ನಡುವೆ ಗ್ರಾಮೀಣ ಕ್ರೀಡೆಗಳ ಕಲರವ

ಬಣ್ಣ ಬಣ್ಣದ ಗಾಳಿಪಟಗಳಿಗೆ ಬಾಗಲಕೋಟೆ ಜನ ಫಿದಾ

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಾಳಿಪಟ ಉತ್ಸವ

ಗಾಳಿಪಟ ಉತ್ಸವದಲ್ಲಿ ಸಂಭ್ರಮಿಸಿದ ಬಾಗಲಕೋಟೆ ಜನತೆ

ವೈ.ಓ೧)::ಬಿಸಿಲು ನಾಡಿನ ಬಾನಂಗಳದಲ್ಲಿ ಬಣ್ಣದ ಚಿತ್ತಾರ, ಎಲ್ಲಿ ನೋಡಿದರೂ ಬಣ್ಣದ ಗಾಳಿಪಟಗಳ ಕಲರವ. ವಯಸ್ಸಿನ ಭೇದ ಮರೆತು ಕೋಟೆ ನಾಡಿನ ಜನರ ಸಂಭ್ರಮ.ಬಣ್ಣ ಬಣ್ಣದ ಗಾಳಿಪಟ ವೀಕ್ಷಿಸಲು ನೆರೆದ ಜನಸ್ತೋಮ.ಹೌದು ಈ ಎಲ್ಲಾ ದೃಶ್ಯಾವಳಿಗಳಿಗೆ ಸಾಕ್ಷಿಯಾಗಿದ್ದು ಮುಳಗಡೆ ನಗರವೆಂದೇ ಖ್ಯಾತಿಪಡೆದ ಬಾಗಲಕೋಟೆ ನಗರ.ಹೌದು ನಗರದ ಕೋಟೆನಾಡಿನ ಬಳಗದ ವತಿಯಿಂದ ಗಾಳಿಪಟ ಉತ್ಸವ-2023 ಆಯೋಜಿಸಲಾಗಿದೆ.ಫೆ.10 ಹಾಗೂ‌ ಫೆ.11ರಂದು ಎರಡು ದಿನಗಳ ಕಾನ ನಡೆಯುವ ಗಾಳಿಪಟ ಉತ್ಸವದಲ್ಲಿ ಬಣ್ಣ ಬಣ್ಣಣ ಪಟಗಳು ಎಲ್ಲರ ಗಮನ ಸೆಳದವು.ವಿಶೇಷವಾಗಿ ದಿ.ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಇತ್ತೀಚಿಗಷ್ಟೇ ನಿಧನರಾದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳ ಭಾವಚಿತ್ರವಿರುವ ಗಾಳಿಪಟಗಳು ಎಲ್ಲರ ಗಮನ ಸೆಳೆದವು.ಮೊಸಳೆ,ಛತ್ರಿ,ಹುಲಿ ಸೇರಿದಂತೆ ಬಗೆಬಗೆ ಪ್ರಾಣಿ ಪಕ್ಷಿಗಳ ಆಕೃತಿಗಳ ಗಾಳಿಪಟಗಳು ಎಲ್ಲರ ಮನಸೂರೆಗೊಳಿಸಿದವು.ಇದೇವೇಳೆ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್ ಆಧುನಿಕತೆಯ ಭರಾಟೆಯ ನಡುವೆ ಗ್ರಾಮೀಣ ಕ್ರೀಡೆಗಳು ಉಳಿಯಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.

ಬೈಟ್೧):ವೀಣಾ.ವಿಜಯಾನಂದ,ಕಾಶಪ್ಪನವರ್, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ

ವೈ.ಓ೨):ನವನಗರದ ಜಿಲ್ಲಾಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗಾಳಿಪಟ ಉತ್ಸವದಲ್ಲಿ ರಾಜಕೀಯ ನಾಯಕರು ಪಕ್ಷ ಬೇಧ ಮರೆತು ಭಾಗಿಯಾಗಿದ್ದು ವಿಶೇಷವಾಗಿತ್ತು.ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಾಳಿಪ ಉತ್ಸವಕ್ಕೆ ಚಾಲನೆ ನೀಡಿ,ವೀಕ್ಷಿಸಿದರು.ಮಾಜಿ‌ಸಚಿವ ಎಸ್.ಆರ್.ಪಾಟೀಲ್,ವೀಣಾ ಕಾಶಪ್ಪನವರ್,ಮಾಜಿ ಎಂ.ಎಲ್.ಸಿ ನಾರಾಯಣಸಾ ಭಾಂಡಗೆ,ಎಂಮೆಲ್.ಸಿ‌ಪಿ.ಹೆಚ್.ಪೂಜಾರ್,ಮಲ್ಲಿಕಾರ್ಜುನ ಚರಂತಿಮಠ ಸೇರಿದಂತೆ ಜಿಲ್ಲೆಯ ವಿವಿಧ ಪಕ್ಷಗಳ ರಾಜಕೀಯ ನಾಯಕರು ಭಾಗಿಯಾದ್ರು.ಗಾಳಿ ಪಟಗಳನ್ನ ಹಾರಿವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.ಶಾಲಾಕ್ಕಳು ಉತ್ಸವದಲ್ಲಿ ಭಾಗಿಯಾಗಿ ಗಾಳಿಪಟ ಉತ್ಸವ ವೀಕ್ಷಣೆ ಮಾಡಿದ್ರು,ವಯಸ್ಸಿನ ಬೇಧ ಮರೆತು ಕೋಟೆ ನಾಡಿನ ಜನರು ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿ ಬಣ್ಣಬಣ್ಣದ ಗಾಳಿಪಟಗಳನ್ನ ಕಣ್ತುಂಬಿ ಕೊಂಡರು.ಮಹಾರಾಷ್ಟ್ರ,ಗುಜರಾತ,ಕರ್ನಾಟಕದ ದೊಡ್ಡ ಬಳ್ಳಾಪುರದ ಗಾಳಿಪಟ ಕ್ರೀಡಾಪಟುಗಳು ಬಣ್ಣ ಬಣ್ಣದ ಗಾಳಿಪಟಗಳನ್ನ ಪ್ರದರ್ಶನ ಮಾಡಿದ್ರು.ಉತ್ಸವ ವೀಕ್ಷಿಸಿದ ಶಾಲಾ-ಕಾಲೇಜು ವಿದ್ಯಾರ್ಥಿಗಳು,ಸ್ಥಳೀಯರು ಸಂಭ್ರಮ ವ್ಯಕ್ತಪಡಿಸಿದ್ದು ಹೀಗೆ.

ಬೈಟ್೨-ಭಾರತಿ(ಸ್ಥಳೀಯರು)
ಬೈಟ್೩): ಸೌಮ್ಯ(ಸ್ಥಳೀಯ ವಿದ್ಯಾರ್ಥಿನಿ)

ವೈ.ಓ೩): ಒಟ್ಟಾರೆ ಬಾಗಲಕೋಟೆ ನಗರದಲ್ಲಿ ನಡೆದ ಗಾಳಿಪಟ ಉತ್ಸವ ಮನಸೂರೆಗೊಳಿಸಿದ್ದು,ಆಧುನಿಕ ಭರಾಟೆಯ ನಡುವೆ ಜಾನಪದರ ಗ್ರಾಮೀಣ ಕ್ರೀಡೆಗಳು ಉಳಿಯಲಿ ಎನ್ನೋದು ಎಲ್ಲರ ಆಶಯ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಂದೇ ಭಾರತ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು

Sat Feb 11 , 2023
  ಹೈದರಾಬಾದ್: ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಮತ್ತೊಂದು ಘಟನೆ ತೆಲಂಗಾಣದ ಮಹಬೂಬಾಬಾದ್ ನಲ್ಲಿ ಶುಕ್ರವಾರ ( ಫೆ.10 ರಂದು) ಸಂಜೆ ನಡೆದಿದೆ. ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ಕಿಟಕಿಯೊಂದಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ವೈಜಾಗ್‌ ತಲುಪಿದ ಬಳಿಕ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಸಿಪಿಆರ್‌ಒ […]

Advertisement

Wordpress Social Share Plugin powered by Ultimatelysocial