ಮನುಷ್ಯನ ಮೌಢ್ಯತೆಗೆ ಕಡಿವಾಣ ಹಾಕಿದ ಕೀರ್ತಿ ಚೌಡಯ್ಯನವರದಾಗಿದೆ.

ಮನುಷ್ಯನಲ್ಲಿರುವ ಅಂಧಕಾರವನ್ನಳಿಸಿ, ಮೌಢ್ಯತೆಯಿಂದ ಹೊರ ಬರುವಂತೆ ಪೇರೇಪಿಸಿದ ಕೀರ್ತಿ ನಿಜಶರಣ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ ಎಂದು ಶಾಸಕ ಡಾ. ಅವಿನಾಶ ಜಾಧವ ತಿಳಿಸಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿರುವ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಅಂಗವಾಗಿ ಶರಣನ ಭಾವಚಿತ್ರಕ್ಕೆ ಪೂಜಿಸಿ, ಪುಷ್ಪ ನಮನ ಗೈದು ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

12ನೇ ಶತಮಾನದ ಮಹಾನ್ ಸಂತರಲೊಬ್ಬರಾಗಿರುವ ಚೌಡಯ್ಯನವರು, ಸಮಾಜದಲ್ಲಿರುವ ತಾರತಮ್ಮ ನೀತಿಗಳ ವಿರುದ್ಧ ಹೋರಾಡಿ, ಸೈದಾಂತಿಕ ನೆಲೆಗಟ್ಟನ್ನು ಭದ್ರ ಗೊಳಿಸಿದರು. ಮನುಷ್ಯನಿಗೆ ಪರಿಶುದ್ಧ ಮಾನವನಾಗಿ ಜೀವಿಸುವ ಬದುಕನ್ನು ತಿಳಿಸಿಕೊಟ್ಟಿದ್ದಾರೆ ಎಂದರು.

ನಿಜಶರಣ ಅಂಬಿಗರ ಚೌಡಯ್ಯನವರಂತ ಮಹಾನ್ ಶಕ್ತಿಶಾಲಿ ಸಂತರ ಆಚಾರ್ಯ ವಿಚಾರಗಳನ್ನು ಪ್ರಸ್ತುತಪಡಿಸುವಲ್ಲಿ ಬಿಜೆಪಿ ಸರ್ಕಾರ ಕಂಕಣಬದ್ಧವಾಗಿ ನಿಂತಿದೆ ಎಂದ ಅವರು, ಇಂತಹ ನಿಜಶರಣರ ವಿಚಾರಗಳನ್ನು ಪ್ರಸರಣಗೊಳಿಸುವ ನಿಟ್ಟಿನಲ್ಲಿ ಹಾಗೂ ಕೋಲಿ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸತತ ಪ್ರಯತ್ನ ಪಡುತ್ತಿದ್ದಾರೆ ಎಂದರು. ಚೌಡಯ್ಯನವರಂತಹ ಭಕ್ತಿ ಭಾವ ನಾವು ಕೂಡ ಮೈಗೂಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.

ಚಿಂಚೋಳಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಚೇಂಗಟ, ಕಾಳಗಿ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ ಕದಂ, ಶಿವಶರಣಪ್ಪ ಗುತ್ತೇದಾರ, ಶಿವರಾಯ ಕೋಯಿ, ಕೇಶು ಚವ್ಹಾಣ, ಸಂತೋಷ ಜಾಧವ, ದೇವಿಂದ್ರ ಕದಂ, ಮಂಜುನಾಥ ಹೆಬ್ಬಾಳ, ಜಗದೀಶ ಪಾಟೀಲ, ಬಾಬು ಹೀರಾಪುರ ಗಣೇಶ ಸಿಂಗಶೆಟ್ಟಿ, ಬಲರಾಮ ವಲ್ಲ್ಯಾಪುರ, ಸುನೀಲ ರಾಜಾಪುರ, ರತ್ನಮ್ಮ ಡೊಣ್ಣೂರ, ಅಮೃತ ಪಾಟೀಲ, ಕಾಶಿನಾಥ ರಾಜಾಪುರ ಸೇರಿದಂತೆ ಅನೇಕರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಸಿದ್ಧ ಗುರುವಾಯುರ್ ​​ಶ್ರೀಕೃಷ್ಣ ದೇವಾಲಯದಲ್ಲಿರುವ ಚಿನ್ನವೆಷ್ಟು ಗೊತ್ತೇ?

Sun Jan 22 , 2023
ತಿರುವನಂತಪುರಂ: ಕೇರಳದ ಪ್ರಸಿದ್ಧ ಗುರುವಾಯುರ್ ​​ಶ್ರೀಕೃಷ್ಣ ದೇವಾಲಯವು ಇತ್ತೀಚೆಗೆ 1,700 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಠೇವಣಿಗಳ ವಿವರಗಳನ್ನು ಬಹಿರಂಗಪಡಿಸಿದೆ, ಇದು 260 ಕೆಜಿಗೂ ಹೆಚ್ಚು ಚಿನ್ನವನ್ನು ಹೊಂದಿದೆ ಎಂದು ಘೋಷಿಸಿದೆ. ಆರ್‌ಟಿಐ ಉತ್ತರದಲ್ಲಿ, ದೇವಾಲಯದ ಅಧಿಕಾರಿಗಳು ಅಮೂಲ್ಯವಾದ ಕಲ್ಲುಗಳು ಮತ್ತು ನಾಣ್ಯಗಳನ್ನು ಒಳಗೊಂಡಿರುವ 263.637 ಕೆಜಿ ಚಿನ್ನ ಮತ್ತು ಸುಮಾರು 20,000 ಚಿನ್ನದ ಲಾಕೆಟ್‌ಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಭದ್ರತಾ ಕಾರಣಗಳಿಂದಾಗಿ ದೇಗುಲದ ಆಡಳಿತ ಮಂಡಳಿ ಈ ಹಿಂದೆ ವಿವರ […]

Advertisement

Wordpress Social Share Plugin powered by Ultimatelysocial