ಸೂಪರ್ ಸ್ಟಾರ್ ಪತ್ನಿ ವಿರುದ್ಧ ಸಮನ್ಸ್ ನೀಡುವಂತೆ ಅರ್ಜಿ

ಆಂಕರ್ – ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ಅವರ ಮೇಲಿನ ಹಳೆಯ ಆರೋಪ ಇದೀಗ ಮತ್ತೆ ಸದ್ದು ಮಾಡ್ತಿದೆ.. 2014ರಲ್ಲಿ ರಜಿನಿಕಾಂತ್ ನಟಿಸಿದ್ದ ಕೊಚ್ಚಾಡಿಯನ್ ಸಿನಿಮಾ ರಿಲೀಸ್ ಆಗಿತ್ತು.. ಈ ಚಿತ್ರದ ನಿರ್ಮಾಣಕ್ಕೆ ಆಡ್ ಬ್ಯೂರೋ ಜಾಹಿರಾತು ಕಂಪನಿಯೊಂದು ಬಂಡವಾಳ ಹೂಡಿತ್ತು.. ಸಿನಿಮಾ ಬಿಡುಗಡೆ ಬಳಿಕ ಬಾಕಿ ೬.೨೫ ಕೋಟಿ ಹಣವನ್ನ ನೀಡದೆ ವಂಚಿಸಿರುವ ಆರೋಪ ಲತಾ ರಜನಿಕಾಂತ್ ಅವರ ವಿರುದ್ಧ ಕೇಳಿಬಂದಿತ್ತು.. ಈ ಸಂಬಂಭ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಲತಾ ರಜನಿಕಾಂತ್ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿತ್ತು.. ಬಳಿಕ ರಜನಿಕಾಂತ್ ಪತ್ನಿ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನ ನೀಡುವ ಮೂಲಕ ತಮ್ಮ ಮೇಲಿನ ಎಫ್ ಐ ಆರ್ ಕ್ವಾಷ್ ಗೆ ಮುಂದಾಗಿದ್ರು.. ಹೀಗಾಗಿ ಎಫ್ ಐ ಆರ್ ಕ್ವಾಷ್ ಗೆ ಮುಂದಾಗಿದ್ದಾರೆ ಅನ್ನೋ ಆರೋಪವೂ ಅವರ ವಿರುದ್ಧ ಕೇಳಿ ಬಂದಿತ್ತು..

ಆಗ ಆಡ್ ಬ್ಯೂರೋ ಜಾಹಿರಾತು ಕಂಪನಿ ಸುಪ್ರಿಂ ಕೋರ್ಟ್ ನಲ್ಲಿ ಲತಾ ರಜನಿಕಾಂತ್ ಅವರ ವಿರುದ್ಧದ ಆರೋಪವನ್ನ ಮುಂದಿಟ್ಟು, ಚಾಲೆಂಜ್ ಮಾಡಿತ್ತು.. ಆ ಕೇಸ್ ಇನ್ನೂ ಬಗೆಹರಿಯದ ಕಾರಣ ಇದೀಗ ನಕಲಿ ದಾಖಲೆ ನೀಡಿದ ಆರೋಪ ಜೊತೆಗೆ ಬಾಕಿ ಹಣ ನೀಡದೆ ವಂಚಿಸಿರುವ ಆರೋಪದ ಅಡಿ, ಲತಾ ಅವರಿಗೆ ಸಮನ್ಸ್ ನೀಡಿ ಟ್ರಯಲ್ ಗೆ ಹಾಜರಾಗಲು ಸೂಚಿಸುವಂತೆ ಮನವಿ ಮಾಡಿ ಆಡ್ ಬ್ಯೂರೋ ಜಾಹಿರಾತು ಕಂಪನಿ ಪರವಾಗಿ ಖ್ಯಾತ ವಕೀಲರಾದ ಬಾಲನ್ ಹಾಗೂ ಕುಮಾರ್ ಗೌಡ ಅವರು ಅರ್ಜಿ ಹಾಕಿದ್ದಾರೆ..

 

 

Please follow and like us:

Leave a Reply

Your email address will not be published. Required fields are marked *

Next Post

ಇಂಡೋ-ಆಸೀಸ್ ಸರಣಿಗೆ ಮುಹೂರ್ತ ಫಿಕ್ಸ್

Wed Oct 28 , 2020
ಆಸ್ಟ್ರೇಲಿಯಾ ಬೋರ್ಡ್ ನಿಂದ ವೇಳಾಪಟ್ಟಿ ಪ್ರಕಟ ನವೆಂಬರ್ 27 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿ  ನಡೆಯಲಿದೆ. ಇಂಡೋ-ಆಸೀಸ್ ಸರಣಿಯ ವೇಳಾಪಟ್ಟಿಯನ್ನು  ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಇಂದು ಪ್ರಕಟಿಸಿದೆ. ಭಾರತವು ಆಸ್ಟ್ರೇಲಿಯಾ ವಿರುದ್ಧ  3 ಏಕದಿನ 3 ಟಿ20 ಮತ್ತು 4 ಟೆಸ್ಟ್ ಪಂದ್ಯಗಳಾಡಲಿದೆ. ನವೆಂಬರ್ 27, 29 ಹಾಗೂ ಡಿಸೆಂಬರ್ 2 ರಂದು ಕ್ರಮವಾಗಿ ಮೂರು ಏಕದಿನ ಪಂದ್ಯ ನಡೆಯಲಿದ್ದು ತಂಡದ ನಾಯಕ ಪಟ್ಟವನ್ನು […]

Advertisement

Wordpress Social Share Plugin powered by Ultimatelysocial