ಪೆಟ್ರೋಲ್ ಬೆಲೆ ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಇಳಿಕೆ:

Petrol And Diesel Price: ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು (Bengaluru) ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು ಸ್ಥಿರವಾಗಿವೆ. ಆದಾಗ್ಯೂ ರಾಜ್ಯದ ಇತರೆ ನಗರಗಳಲ್ಲಿ ಕೆಲ ಪೈಸೆಗಳಷ್ಟು ಏರಿಕೆ/ಇಳಿಕೆ ಆಗಿರುವುದನ್ನು ಗಮನಿಸಬಹುದು.
ಆದರೆ, ಇಂದು ಉತ್ತರ ಕನ್ನಡದಲ್ಲಿ (Uttara Kannada) 1 ರೂ. 80 ಪೈಸೆಗಳಷ್ಟು ಇಳಿಕೆಯಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಕಚ್ಚಾ ತೈಲದ ಬೆಲೆಯೂ (Crude Oil Price) ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆ ಏರುವುದು/ಇಳಿಯುವುದೂ ನಿಲ್ಲುತ್ತಿಲ್ಲ. ಕಳೆದ ಹತ್ತು ದಿನಗಳಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹತ್ತು ರೂಪಾಯಿಗಿಂತಲೂ ಹೆಚ್ಚಳವಾಗಿ ಜನರು ಪರದಾಡುವಂತಾಗಿತ್ತು. ಅದಾಗ್ಯೂ, ಕಳೆದ ಕೆಲ ದಿನಗಳಿಂದ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದೂ ಸಹ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.95, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 101.04, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ – ರೂ. 111.59 (3 ಪೈಸೆ ಇಳಿಕೆ)
ಬೆಂಗಳೂರು – ರೂ. 111.09 (00)
ಬೆಂಗಳೂರು ಗ್ರಾಮಾಂತರ – ರೂ. 111.40 (31 ಪೈಸೆ ಏರಿಕೆ)
ಬೆಳಗಾವಿ – ರೂ. 111.57 (10 ಪೈಸೆ ಇಳಿಕೆ)
ಬಳ್ಳಾರಿ – ರೂ. 112.28 (18 ಪೈಸೆ ಇಳಿಕೆ)
ಬೀದರ್ – ರೂ. 111.69 (30 ಪೈಸೆ ಏರಿಕೆ)
ವಿಜಯಪುರ – ರೂ. 111.21 (13 ಪೈಸೆ ಇಳಿಕೆ)
ಚಾಮರಾಜನಗರ – ರೂ. 111.18 (4 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – ರೂ. 110.84 (25 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 112.36 (26 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 113.08 (92 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 110.92 (8 ಪೈಸೆ ಇಳಿಕೆ)
ದಾವಣಗೆರೆ – ರೂ. 112.89 (49 ಪೈಸೆ ಏರಿಕೆ)
ಧಾರವಾಡ – ರೂ. 110.96 (12 ಪೈಸೆ ಏರಿಕೆ)
ಗದಗ – ರೂ. 111.88 (38 ಪೈಸೆ ಏರಿಕೆ)
ಕಲಬುರಗಿ – ರೂ. 110.81 (00)
ಹಾಸನ – ರೂ. 110.92 (39 ಪೈಸೆ ಇಳಿಕೆ)
ಹಾವೇರಿ – ರೂ. 112.09 (56 ಪೈಸೆ ಏರಿಕೆ)
ಕೊಡಗು – ರೂ. 111.85 (52 ಪೈಸೆ ಇಳಿಕೆ)
ಕೋಲಾರ – ರೂ. 110.79 (17 ಪೈಸೆ ಇಳಿಕೆ)
ಕೊಪ್ಪಳ – ರೂ. 111.99 (24 ಪೈಸೆ ಇಳಿಕೆ)
ಮಂಡ್ಯ – ರೂ. 110.85 (34 ಪೈಸೆ ಇಳಿಕೆ)
ಮೈಸೂರು – ರೂ. 110.61 (00)
ರಾಯಚೂರು – ರೂ. 111.86 (95 ಪೈಸೆ ಏರಿಕೆ)
ರಾಮನಗರ – ರೂ. 111.44 (10 ಪೈಸೆ ಇಳಿಕೆ)
ಶಿವಮೊಗ್ಗ – ರೂ. 112.57 (68 ಪೈಸೆ ಏರಿಕೆ)
ತುಮಕೂರು – ರೂ. 111.80 (17 ಪೈಸೆ ಇಳಿಕೆ)
ಉಡುಪಿ – ರೂ. 110.99 (2 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 111.14 (1 ರೂ. 80 ಪೈಸೆ ಇಳಿಕೆ)
ಯಾದಗಿರಿ – ರೂ. 111.54 (1 ಪೈಸೆ ಏರಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ – ರೂ. 95.26
ಬೆಂಗಳೂರು – ರೂ. 94.79
ಬೆಂಗಳೂರು ಗ್ರಾಮಾಂತರ – ರೂ. 95.07
ಬೆಳಗಾವಿ – ರೂ. 95.25
ಬಳ್ಳಾರಿ – ರೂ. 95.90
ಬೀದರ್ – ರೂ. 95.35
ವಿಜಯಪುರ – ರೂ. 94.92
ಚಾಮರಾಜನಗರ – ರೂ. 94.87
ಚಿಕ್ಕಬಳ್ಳಾಪುರ – ರೂ. 94.57
ಚಿಕ್ಕಮಗಳೂರು – ರೂ. 95.91
ಚಿತ್ರದುರ್ಗ – ರೂ. 96.46
ದಕ್ಷಿಣ ಕನ್ನಡ – ರೂ. 94.60
ದಾವಣಗೆರೆ – ರೂ. 96.29
ಧಾರವಾಡ – ರೂ. 94.69
ಗದಗ – ರೂ. 95.52
ಕಲಬುರಗಿ – ರೂ. 94.56
ಹಾಸನ – ರೂ. 94.51
ಹಾವೇರಿ – ರೂ. 95.71
ಕೊಡಗು – ರೂ. 95.44
ಕೋಲಾರ – ರೂ. 94.52
ಕೊಪ್ಪಳ – ರೂ. 95.62
ಮಂಡ್ಯ – ರೂ. 94.57
ಮೈಸೂರು – ರೂ. 94.35
ರಾಯಚೂರು – ರೂ. 95.52
ರಾಮನಗರ – ರೂ. 95.10
ಶಿವಮೊಗ್ಗ – ರೂ. 96.05
ತುಮಕೂರು – ರೂ. 95.43
ಉಡುಪಿ – ರೂ. 94.66
ಉತ್ತರ ಕನ್ನಡ – ರೂ. 94.85
ಯಾದಗಿರಿ – ರೂ. 95.22

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆಯಲ್ಲೇ ಫೇಸಿಯಲ್‌ ಹೇರ್‌ ರಿಮೂವ್‌ ಮಾಡುವ ಸುಲಭ ವಿಧಾನ

Mon May 2 , 2022
ಪುರುಷರು ತಮ್ಮ ಮುಖದಲ್ಲಿ ಕೂದಲು ಅಥವಾ ಗಡ್ಡ-ಮೀಸೆಯನ್ನು ಹೊಂದಿರುವುದು ಸಾಮಾನ್ಯವಾಗಿದೆ. ಆದರೆ ಮಹಿಳೆ ಎಂದಿಗೂ ತನ್ನ ಮುಖದ ಮೇಲೆ ಅನಗತ್ಯ ಕೂದಲನ್ನು ನೋಡಲು ಬಯಸುವುದಿಲ್ಲ. ಅದನ್ನು ತೆಗೆದುಹಾಕಲು ಬ್ಯೂಟಿ ಪಾರ್ಲರ್‌ನಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಆದರೆ ಇನ್ಮುಂದೆ ನೀವು ಮನೆಯಲ್ಲೇ ಫೇಸಿಯಲ್‌ ಹೇರ್‌ ರಿಮೂವ್‌ ಮಾಡಬಹುದು. ನೈಸರ್ಗಿಕವಾಗಿ ಮುಖದ ಮೇಲಿನ ಅನಗತ್ಯ ಕೂದಲುಗಳನ್ನು ತೆಗೆಯುವ ಸುಲಭ ವಿಧಾನದ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಮುಖದ ಮೇಲಿನ ಅನಗತ್ಯ […]

Advertisement

Wordpress Social Share Plugin powered by Ultimatelysocial