ಮುಖದಲ್ಲಿ ಮೂಡುವ ನೆರಿಗೆಗೆ ಇಲ್ಲಿದೆ ‘ಮನೆಮದ್ದು’

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚುವುದು ಆಗಿರಬಹುದು.

ಇದನ್ನು ಹೋಗಲಾಡಿಸುವ ಮನೆಮದ್ದುಗಳು ಇಲ್ಲಿವೆ ಕೇಳಿ.

ಒಂದು ತಟ್ಟೆಗೆ ಒಂದು ಚಮಚ ಜೇನು ಹಾಗೂ ಒಂದು ಚಮಚ ಕ್ಯಾರೆಟ್ ರಸ ಬೆರೆಸಿ. ಈ ಮಿಶ್ರಣವನ್ನು ನೆರಿಗೆ ಮೂಡಿರುವ ಭಾಗಕ್ಕೆ ಹಚ್ಚಿ. ಇಪ್ಪತ್ತು ನಿಮಿಷದ ಬಳಿಕ ಮುಖವನ್ನು ತೊಳೆಯಿರಿ.

ಬೆಚ್ಚಗಿನ ನೀರಿಗೆ ಅಡುಗೆ ಸೋಡಾವನ್ನು ಬೆರೆಸಿ. ಕಾಟನ್ ಬಟ್ಟೆಯಿಂದ ಅದನ್ನು ಮುಖಕ್ಕೆ ಲೇಪಿಸಿ. ಐದಾರು ಬಾರಿ ಹೀಗೆ ಮಾಡಿದ ಬಳಿಕ ನಿಮ್ಮ ಮುಖವನ್ನು ಚೆನ್ನಾಗಿ ಒರೆಸಿ ಕ್ಲೀನ್ ಮಾಡಿ. ಇದರಿಂದಲೂ ಮುಖದ ನೆರಿಗೆ ದೂರವಾಗುತ್ತದೆ.

ಜೇನುತುಪ್ಪಕ್ಕೆ ಕಾಲು ಚಮಚ ಗ್ಲಿಸರಿನ್ ಹಾಕಿಯೂ ಇದನ್ನು ಪ್ರಯತ್ನಿಸಬಹುದು. ಈ ಪೇಸ್ಟ್ ಅನ್ನು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಮಲಗಿ ಬೆಳಗ್ಗೆದ್ದು ಮುಖ ತೊಳೆದರೆ ಸಾಕು, ಯಾವುದೇ ನೆರಿಗೆ ಮುಖದಲ್ಲಿ ಮೂಡಲು ಇದು ಬಿಡುವುದಿಲ್ಲ. ಇದನ್ನು ವಾರಕ್ಕೊಮ್ಮೆ ಪ್ರಯತ್ನಿಸಿ ನೋಡಿ. ನಿಮ್ಮ ನೆರಿಗೆ ಸಮಸ್ಯೆ ದೂರವಾಗಿ ಮುಖ ಕಾಂತಿ ಪಡೆದುಕೊಳ್ಳುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಕೋವಿಡ್ ದೃಢ,

Fri Jun 3 , 2022
  ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳಿರುವ ಕಾರಣಕ್ಕೆ ನಾನು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೆ. ಇದೀಗ ವರದಿ ಪಾಸಿಟಿವ್ ಬಂದಿದೆ. ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕವಾಸದಲ್ಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ನನ್ನ ಸಂಪರ್ಕಕ್ಕೆ ಬಂದವರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಪ್ರಿಯಾಂಕಾ ಮನವಿ ಮಾಡಿದ್ದಾರೆ. ಇತ್ತ ಕಾಂಗ್ರೆಸ್‌ […]

Advertisement

Wordpress Social Share Plugin powered by Ultimatelysocial