ರಾಜಕೀಯ ಬೇರೆ ಸ್ನೇಹ ಬೇರೆ.

ನಾವು ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಜನರಿಂದ ಮತ ಕೇಳುತ್ತೇವೆ, ರಾಜಕೀಯ ಮತ್ತು ಸ್ನೇಹವನ್ನು ಒಂದೇ ತಕ್ಕಡಿಯಲ್ಲಿ ಇಟ್ಟುಕೊಳ್ಳಲ್ಲ. ರಾಜಕೀಯ ವಿಷಯದಲ್ಲಿ ತಮ್ಮದೇ ಹೋರಾಟ ಇರುತ್ತದೆ. ಸ್ನೇಹವನ್ನು ಪರಿಗಣಿಸಲ್ಲ ಎಂದು ಕೆಅರ್ ಪಿಪಿ ಪಕ್ಷದ ವಿರುದ್ದ ಹೋರಾಟದ ಬಗ್ಗೆ ಶ್ರೀರಾಮುಲು ಹೇಳಿದರು.ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ
ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸುವುದು ನನ್ನ ಉದ್ದೇಶ. ಈ ವಿಷಯದಲ್ಲಿ ರಾಜಕೀಯವೇ ಮುಖ್ಯವಾಗಿದೆ. ಯಾವುದೇ ಪಕ್ಷದಲ್ಲಿನ ಸ್ನೇಹವನ್ನು ನಾನು ರಾಜಕೀಯದಿಂದ ದೂರ ಇಡುವೆ. ನಮ್ಮದೇನಿದ್ದರೂ ಬಿಜೆಪಿ ಗೆಲುವಿನ ಯತ್ನ ಎಂದರು.ಸೋಮಶೇಖರ ರೆಡ್ಡಿ ಅವರ ಸ್ಪರ್ಧೆ ಬಗ್ಗೆ ಅನುಮಾನದ ಮಾತುಗಲಕು ಬೇಡ, ಅವರು ಬಳ್ಳಾರಿ ನಗರದಿಂದಲೇ ಸ್ಪರ್ಧೆ ಮಾಡುತ್ತಾರೆ. ಬೇರೆ ಎಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.ಫೆ,೨೩ ರಂದು ಅಮಿತ್ ಷಾ ಅವರು ಸಂಡೂರಿಗೆ ಬರಲಿದ್ದಾರೆ. ಬೆಳಿಗ್ಗೆ ೧೧.೪೫ ಸಂಡೂರು ರೆಸಿಡೆನ್ಸಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ಸಭೆ ನಡೆಸಿದ ನಂತರ ಜಿಂದಾಲ್ ನ ಅಯಾತ್ ಹೊಟೇಲ್ ನಲ್ಲಿ ಕಲ್ಬುರ್ಗಿ ವಿಭಾಗದ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆಂದು ತಿಳಿಸಿದರು ಚುನಾವಣೆ ದಿನಾಂಕ ಘೋಷಣೆ ಮಾಡಿದ ನಂತರ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದರು.
ನಾನು ಬಳ್ಳಾರಿ ಜಿಲ್ಲೆಯ ಬಳ್ಳಾರಿ ಗ್ರಾಮೀಣ ಮತ್ತು ಸಂಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡಬೆರಕು ಎಂದು ಕೊಂಡಿರುವೆ. ಉಳಿದಂತೆ ಪಕ್ಷ ಹೇಳಿದಲ್ಲಿ ಸ್ಪರ್ಧೆ ಮಾಡಬೇಕಾಗುತ್ತದೆಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜೇಶ್ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆಗಳಲ್ಲಿ ಒಬ್ಬರು.

Sun Feb 19 , 2023
  ಕಲ್ಯಾಣ ಕುಮಾರ್ ಅವರ ಕನ್ನಡ ಚಿತ್ರರಂಗದ ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭೆಗಳ ಕಾಲದಲ್ಲಿ ಕೂಡಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಚಿತ್ರಂಗದಲ್ಲಿ ಮೂಡಿಸಿದ್ದವರು. ರಾಜೇಶ್ 1935ರ ಏಪ್ರಿಲ್ 15ರಂದುಬೆಂಗಳೂರಿನಲ್ಲಿ ಜನಿಸಿದರು. ಎಲ್ಲ ಸಾಮಾನ್ಯ ಮಕ್ಕಳಂತೆ ಬಾಲ್ಯವನ್ನು ಕಳೆದ ರಾಜೇಶ್ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೈಸ್ಕೂಲಿನ ದಿನಗಳಿಂದಲೇ ಅವರಿಗೆ ರಂಗಭೂಮಿಯ ಸೆಳೆತ ಅಪಾರವಾಗಿತ್ತು. ಅಂದಿನ ರಂಗಭೂಮಿ ಕಲಾವಿದರಾದ ತ್ಯಾಗರಾಜ ಭಾಗವತರ್, ಟಿ. ಆರ್. ಮಹಾಲಿಂಗಂ ಅಂತಹ […]

Advertisement

Wordpress Social Share Plugin powered by Ultimatelysocial