ಮಾಜಿ ಸಿಎಂ ಸಿದ್ದು ಕ್ಷೇತ್ರ ಗೊಂದಲಕ್ಕೆ ತೆರೆ ಎಳೆದ ಮನೆ ದೇವರು.

ಮಂಡ್ಯ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಕಳೆದ ಚುನಾವಣೆಯಲ್ಲಿ ಸ್ವ ಜಿಲ್ಲೆಯಲ್ಲೇ ಸಿದ್ದುಗೆ ಹೀನಾಯ ಸೋಲಾಗಿತ್ತು. ಆ ಸೋಲಿಂದ ಕಂಗೆಟ್ಟ ಸಿದ್ದರಾಮಯ್ಯ, ಈ ಬಾರಿಯೂ ಎರಡು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳೀತಾರಾ?

ಅಥವಾ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸ್ತಾರಾ? ಸಿದ್ದುಗೆ ಸೇಫ್​ ಝೋನ್​ ಯಾವುದು? ಎಂಬಿತ್ಯಾದಿ ಪ್ರಶ್ನೆಗೆ ಪಕ್ಷದ ಕಾರ್ಯಕರ್ತರು ಮಾತ್ರವಲ್ಲ, ಕುಟುಂಬಸ್ಥರಲ್ಲೂ ಎದ್ದಿದೆ. ಈ ಕುರಿತು ಸಿದ್ದರಾಮಯ್ಯರ ಕುಟುಂಬದ ಮೂಲ ದೇವತೆ ಭವಿಷ್ಯ ನುಡಿದಿದ್ದು, ಮತ್ತಷ್ಟು ಕುತೂಹಲ ಮೂಡಿದೆ.

‘ಒಂದೇ ಕಡೆ ನಿಂತ್ರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲಬೇಕು’ ಎಂದು ಸಿದ್ದರಾಮಯ್ಯರ ಮನೆ ದೇವರು ಭವಿಷ್ಯ ನುಡಿದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಆದಿನಾಡು ಚಿಕ್ಕಮ್ಮತಾಯಿ ದೇಗುಲಕ್ಕೆ ಭೇಟಿ ನೀಡಿದ್ದ ಸಿದ್ದು ಮಗ ಡಾ.ಯತೀಂದ್ರಗೆ ದೇವಿಯು ಈ ಸೂಚನೆ ನೀಡಿದೆ. ‘ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ‌ ಚಾಚಿದ್ರೆ ಆಗಲ್ಲ. ಅರ್ಥ ಆಯ್ತೇನಪ್ಪ. ಬಾಹುಬಲ ಎರಡೂ ಕಡೆ ಚಾಚಬೇಕು. ಒಂದು ಕಡೆ ಚಾಚಿದ್ರೆ ತಪ್ಪಾಗುತ್ತೆ, ಅರ್ಥ ಮಾಡ್ಕೊಳ್ಳಿ. ಎರಡು ಕಡೆ ಚಾಚಿದ್ರೆ ನಾನು ಗೆಲ್ಲಿಸಿಕೊಂಡು ಬರ್ತೀನಿ. ನಾನು ನಿಮ್ಮ ಮನೆ ದೇವತೆ ಗೊತ್ತಾ? ನಾನು ಮೂಲದೇವರು. ಅವಕಾಶ ಸಿಕ್ಕಾಗೆಲ್ಲಾ ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು’ ಎಂದು ಹೇಳಿದೆ.

ಡಾ.ಯತೀಂದ್ರ ಅವರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವ ವೇಳೆ ದೇವಾಲಯದ ಅರ್ಚಕ ಡಾ.ಲಿಂಗಣ್ಣ ಅವರ ಮೈಮೇಲೆ ಬಂದ ಶಕ್ತಿ ದೇವತೆಯು ಸಿದ್ದರಾಮಯ್ಯರ ರಾಜಕೀಯ ಭವಿಷ್ಯದ ಬಗ್ಗೆ ಈ ರೀತಿ ನುಡಿದಿದೆ. ದೇವರ ಸೂಚನೆಯಂತೆ ಎರಡು‌ ಕ್ಷೇತ್ರದಲ್ಲಿ ಸಿದ್ದು ನಿಲ್ತಾರಾ? ಚುನಾವಣೆಗೂ ಮೊದಲು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸ್ತಾರಾ ಸಿದ್ದು? ಎಂಬಿತ್ಯಾದಿ ವಿಚಾರಗಳು ಚರ್ಚೆಯಾಗುತ್ತಿದೆ. ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಜೊತೆ ಡಾ.ಯತೀಂದ್ರ ಇತ್ತೀಚಿಗೆ ದೇಗುಲಕ್ಕೆ ಭೇಟಿ ನೀಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಕೆಂಪು ಅಕ್ಕಿಯಿಂದ ಸಿಗುವ 'ಆರೋಗ್ಯ' ಪ್ರಯೋಜನಗಳು.

Fri Jan 13 , 2023
ಹೆಚ್ಚಾಗಿ ಎಲ್ಲರ ಮನೆಯಲ್ಲೂ ಅಕ್ಕಿಯನ್ನು ಅನ್ನ ಮಾಡಲು ಮಾತ್ರ ಬಳಸುತ್ತಾರೆ. ಆದರೆ ಈ ಅಕ್ಕಿಯಿಂದಲೂ ಕೂಡ ಕೆಲವು ರೋಗಗಳನ್ನು ದೂರಮಾಡಬಹುದು. ಹೇಗೆ ಅಂತೀರಾ. * ಫುಡ್ ಪಾಯಿಸನ್ ಸಮಸ್ಯೆ ಅಥವಾ ಅಜೀರ್ಣ ಸಮಸ್ಯೆಗಳಿಂದ ಭೇದಿ ಉಂಟಾಗಿ ಸುಸ್ತಾಗಿದ್ದಾಗ ಅಕ್ಕಿ ತರಿಗಂಜಿ ಮಾಡಿ ಉಪ್ಪು ಬೆರಸಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ. * ಮೊಸರು ಬೆರೆಸಿದ ಕೆಂಪಕ್ಕಿಯ ಅನ್ನವನ್ನು ನಿತ್ಯವೂ ಸೂರ್ಯೋದಯಕ್ಕೆ ಮೊದಲು ಸೇವಿಸಿದರೆ ಅರೆತಲೆ ನೋವು ಕಡಿಮೆಯಾಗುತ್ತದೆ. * ಚಿಕ್ಕ ಮಕ್ಕಳಿಗೆ […]

Advertisement

Wordpress Social Share Plugin powered by Ultimatelysocial