ಈಗಾಗಲೇ ಯುವಜನತೆ ಮದ್ಯಪಾನ, ಧೂಮಪಾನ ಅಂತಾ ಕೆಟ್ಟ ಕೆಟ್ಟ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ.

ಬೆಂಗಳೂರು: ಈಗಾಗಲೇ ಯುವಜನತೆ ಮದ್ಯಪಾನ, ಧೂಮಪಾನ ಅಂತಾ ಕೆಟ್ಟ ಕೆಟ್ಟ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಈ ಮಧ್ಯೆ ಕರ್ನಾಟಕ ಸರ್ಕಾರವೂ ಮದ್ಯ ಖರೀದಿಸುವ   ವಯಸ್ಸಿನ ನಿರ್ಬಂಧವನ್ನು ಸಡಿಲಿಸಲು ನಿರ್ಧರಿಸಿದೆ. ಮದ್ಯ ಉದ್ಯಮದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವು  ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ ಕನಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 18 ಕ್ಕೆ ಇಳಿಸಲು ಮುಂದಾಗಿದ್ದು, ‘ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತು) ನಿಯಮಗಳು-1967’ಕ್ಕೆ ತಿದ್ದುಪಡಿ ತರಲು ಅಬಕಾರಿ ಇಲಾಖೆಯು ಕರಡು ಪ್ರಸ್ತಾವನೆಯನ್ನು ಪ್ರಕಟಿಸಿದೆ.
ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) (ತಿದ್ದುಪಡಿ) ನಿಯಮಗಳು-2023 ಎಂಬ ಶೀರ್ಷಿಕೆಯ ಕರಡು ಅಧಿಸೂಚನೆಯನ್ನು ಸರ್ಕಾರವು ಸೋಮವಾರ ಪ್ರಕಟಿಸಿದೆ. ಸರ್ಕಾರವು ಈ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪ/ಸಲಹೆ ನೀಲು 30 ದಿನಗಳ ಕಾಲಾವಕಾಶ ನೀಡಿದೆ.

ಹೊಸ ತಿದ್ದುಪಡಿ ಏನು?
ಈ ಹಿಂದೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಕಾನೂನಿತ್ತು. ಆದರೆ ಈಗ ಮದ್ಯ ಕೊಳ್ಳುವ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18 ವರ್ಷಕ್ಕಿಳಿಸಲು ಸರ್ಕಾರ ಸಜ್ಜಾಗಿದೆ.

ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ಸೆಕ್ಷನ್‌ 10(1)(ಇ) ಅಡಿಯಲ್ಲಿದ್ದ ಮದ್ಯ ಖರೀದಿದಾರನ ವಯಸ್ಸಿನ ಮಿತಿಯನ್ನು 21 ರಿಂದ ಇಳಿಸಿ ಹೊಸ ಪ್ರಸ್ತಾಪದಂತೆ ಆ ವಯಸ್ಸಿನ ಮಿತಿಯನ್ನು 18 ಕ್ಕೆ ಬದಲಾಯಿಸಲು ತಿದ್ದುಪಡಿ ಉದ್ದೇಶಿಸಿದೆ. ಅಂದರೆ ಸೆಕ್ಷನ್‌ 10(1)(ಇ) ನಿಯಮವನ್ನು ತಿದ್ದುಪಡಿ ಮಾಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಹೊಸ ತಿದ್ದುಪಡಿ ಹೇಳುತ್ತದೆ.

“ಇದು ಮದ್ಯದ ಉದ್ಯಮದ ದೀರ್ಘಕಾಲದ ಬೇಡಿಕೆ”
ಈ ಬಗ್ಗೆ ಸ್ಪಷ್ಟಪಡಿಸಿದ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು “ವಯಸ್ಸಿನ ಮಿತಿಯನ್ನು 18 ಕ್ಕೆ ಇಳಿಸುವುದು ಮದ್ಯದ ಉದ್ಯಮದಿಂದ ಬಹುಕಾಲದಿಂದ ಬಾಕಿ ಉಳಿದಿರುವ ಬೇಡಿಕೆಗಳಲ್ಲಿ ಒಂದಾಗಿದೆ” ಎಂದು ಹೊಸ ಪ್ರಸ್ತಾವನೆ ಬಗ್ಗೆ ಹೇಳಿದರು.

ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತುಗಳು) ನಿಯಮಗಳು 1965 ರ ಪ್ರಕಾರ, ಕನಿಷ್ಠ ಕಾನೂನು ವಯಸ್ಸು 21 ಆಗಿದೆ. ಈ ಗೊಂದಲವನ್ನು ಯುವಕರಿಗೆ ಮತದಾನದ ವಯಸ್ಸಿಗೆ ಅನುಗುಣವಾಗಿ ಮಾಡುವುದರ ಜೊತೆಗೆ ಇಲಾಖೆಯು ಈ ಗೊಂದಲವನ್ನು ಪರಿಹರಿಸಲು ಬಯಸಿದೆ” ಎಂದು ಅಧಿಕಾರಿ ಹೇಳಿದರು.

ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ ವಯಸ್ಸನ್ನು ಮಾತ್ರ ಇಳಿಸಲಾಗಿದೆ ಆದರೆ ಮದ್ಯದ ವ್ಯಾಪಾರ ಆರಂಭಿಸಲು ಸರ್ಕಾರ ಕನಿಷ್ಠ ವಯೋಮಿತಿಯಲ್ಲಿ ಬದಲಾವಣೆ ಮಾಡಿಲ್ಲ, ಆ ವಯಸ್ಸಿನ ಮಿತಿ 21ಕ್ಕೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಸರ್ಕಾರದ ಬೊಕ್ಕಸ ತುಂಬಲು ಸಹಕಾರಿ”
ವಯೋಮಿತಿಯನ್ನು ಕಡಿತಗೊಳಿಸುವಂತೆ ಮದ್ಯ ಉದ್ಯಮವು ಒತ್ತಾಯಿಸುತ್ತಿದ್ದು, ಇದು ಗ್ರಾಹಕರ ನೆಲೆಯನ್ನು ವಿಸ್ತರಿಸುತ್ತದೆ ಮತ್ತು ಸರ್ಕಾರಕ್ಕೆ ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಸರ್ಕಾರಕ್ಕೆ ಬಂದ ಆದಾಯ ಎಷ್ಟು?
ಮದ್ಯ ಉದ್ಯಮದಿಂದ 2019 – 20ರಲ್ಲಿ 21,583 ಕೋಟಿ ರೂ ಆದಾಯ ಸರ್ಕಾರದ ಬೊಕ್ಕಸ ಸೇರಿದ್ದರೆ 2021-22ರಲ್ಲಿ 26,377 ಕೋಟಿ ರೂ. ಆದಾಯ ಬಂದಿದೆ.

ಬೇರೆ ರಾಜ್ಯಗಳಲ್ಲಿ ವಯಸ್ಸಿನ ಮಿತಿ ಎಷ್ಟಿದೆ?
ಗೋವಾ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಪುದುಚೇರಿ ಸೇರಿ ಕೆಲವು ರಾಜ್ಯಗಳು ವಯಸ್ಸಿನ ಮಿತಿಯನ್ನು ಈಗಾಗಲೇ 18 ಕ್ಕೆ ಇಳಿಸಿವೆ.

ನವದೆಹಲಿಯ ಎಎಪಿ ಸರ್ಕಾರವು ಕೆಲವು ತಿಂಗಳ ಹಿಂದೆ ಕಾನೂನುಬದ್ಧ ಕನಿಷ್ಠ ವಯಸ್ಸನ್ನು 25 ರಿಂದ 21 ಕ್ಕೆ ಇಳಿಸಿದೆ. ಉತ್ತರ ಪ್ರದೇಶದಂತಹ ಇತರ ರಾಜ್ಯಗಳಲ್ಲೂ ಇದೇ ವಯೋಮಿತಿ ಇದೆ. ಆದರೆ ಕೇರಳ ಮಾತ್ರ ಈ ವಿದ್ಯಾಮಾನಕ್ಕೆ ವಿರುದ್ಧವಾಗಿ ಆಲ್ಕೊಹಾಲ್ ಸೇವನೆಯ ಕಾನೂನುಬದ್ಧ ಕನಿಷ್ಠ ವಯಸ್ಸನ್ನು 21 ರಿಂದ 23 ಕ್ಕೆ ಹೆಚ್ಚಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೇಕರಿ ಮಾಲೀಕನ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ ಪುಂಡರ ಗ್ಯಾಂಗ್.

Tue Jan 17 , 2023
ಬೇಕರಿ ಮಾಲೀಕನ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ ಪುಂಡರ ಗ್ಯಾಂಗ್ ಪುಟ್ಟೇನಹಳ್ಳಿಯಲ್ಲಿ‌ ಮಂಜುನಾಥ್ ಶೆಟ್ಟಿ ಎಂಬಾತನ ಮೇಲೆ ಹಲ್ಲೆ ಏಕಾಏಕಿ ಸಿಗರೇಟ್ ಬಂಡಲಿಗೆ ಕೈ ಹಾಕಿದ್ದ ಕಿಡಿಗೇಡಿಗಳು ಇದನ್ನ ಪ್ರಶ್ನಿಸಿದ್ದ ಬೇಕರಿ ಮಾಲೀಕ ಮಂಜುನಾಥ್ ‌ಶೆಟ್ಟಿ ಮಂಜುನಾಥ್ ‌ಶೆಟ್ಟಿಯನ್ನ ರೋಡಿಗೆ ಎಳೆದು ತಂದು ಹಲ್ಲೆ ರಾಡಿನಿಂದ ‌ಹಲ್ಲೆ ನಡೆಸಿ ಎಸ್ಕೇಪ್ ಆಗಿರುವ ಕಿಡಿಗೇಡಿಗಳು ಪುಂಡರ ಗ್ಯಾಂಗ್ ಹಲ್ಲೆ‌ನಡೆಸುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆ ಸಿಸಿ ಕ್ಯಾಮಾರ ದೃಶ್ಯಾವಳಿ ಬಿಟಿವಿಗೆ […]

Advertisement

Wordpress Social Share Plugin powered by Ultimatelysocial