ಚಾಮರಾಜನಗರಕ್ಕೆ ಹೊಸ ಎಸ್ಪಿ -ದಿವ್ಯಾ ಸಾರಾ ಥಾಮಸ್ ಅಧಿಕಾರ ಸ್ವೀಕಾರ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದಿವ್ಯಾ ಸಾರಾ ಥಾಮಸ್ ಅವರು ಅಧಿಕಾರ ಸ್ವೀಕರಿಸಿದರು. ದಿವ್ಯಾ ಅವರು ಜಿಲ್ಲೆಯ ಮೊದಲ ಮಹಿಳಾ ಎಸ್ಪಿಯಾಗಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಚ್.ಡಿ. ಆನಂದಕುಮಾರ್ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಇದುವರೆಗೂ ಮೂವ್‌ಮೆಂಟ್ ಆರ್ಡರ್ ನೀಡಿರಲಿಲ್ಲ. ಪೊಲೀಸ್ ಮಹಾ ನಿರ್ದೇಶಕರು ಹೊರಡಿಸಿರುವ ಆದೇಶದಲ್ಲಿ ದಿವ್ಯಾ ಸಾರಾ ಥಾಮಸ್ ಹಾಗೂ ಆನಂದ್‌ಕುಮಾರ್ ಅವರಿಗೆ ಸೂಚಿಸಿರುವ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳುವಂತೆ ಮೂವ್‌ಮೆಂಟ್ ಆರ್ಡರ್ ಹೊರಡಿಸಿದ್ದರು.ಹಾಗಾಗಿ ದಿವ್ಯಾ ಸಾರಾ ಥಾಮಸ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡರು.

 

ದಿವ್ಯಾ ಅವರು ಇದುವರೆಗೆ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಚೀನಾ ವಿರುದ್ಧದ ನಿಲುವು ಹೆಮ್ಮೆಯ ಸಂಗತಿ- ಮೋದಿಯನ್ನ ಕೊಂಡಾಡಿದ ಜಾನ್ ಕೆನಡಿ

Fri Jul 10 , 2020
ಲಡಾಖ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾದ ವಿರುದ್ಧ ಅತ್ಯಂತ ಗಟ್ಟಿಯ ನಿಲುವು ತೆಳೆದರು ಇದು ಹೆಮ್ಮೆಯ ಸಂಗತಿ ಎಂದು ಅಮೆರಿಕದ ಸಂಸತ್ ಸದಸ್ಯ ಜಾನ್ ಕೆನಡಿ ಹೇಳಿದ್ದಾರೆ.ಲಡಾಖ್ನಲ್ಲಿ ಬಿಕ್ಕಟ್ಟು ಉಂಟಾಗಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಜೂ.೧೫ರಂದು ರಕ್ತಸಿಕ್ತ ಘರ್ಷಣೆ ನಡೆದು ಭಾರತದ ೨೦ ಯೋಧರು ಹುತಾತ್ಮರಾದ ಹಲವು ದಿನಗಳ ಬಳಿಕ ಕೆನಡಿ ಈ ಹೇಳಿಕೆ ನೀಡಿದ್ದಾರೆ. ಜತೆಗೆ ಚೀನಾ ವಿರುದ್ಧದ […]

Advertisement

Wordpress Social Share Plugin powered by Ultimatelysocial