ಕರುನಾಡಲ್ಲಿ ಪ್ರಧಾನಿ ಮೋದಿ.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ಕರ್ನಾಟಕ್ಕೆ ಆಗಮಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ಹೊರಟಿದ್ದ ಮೋದಿ 11 ಗಂಟೆ ಸುಮಾರಿಗೆ ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ರಾಜ್ಯದ ನಾಯಕರು ಅದ್ದೂರಿಯಾಗಿ ಸ್ವಾಗತಿಸಿದರು.

ನಂತರ ವಿಶೇಷ ಸೇನಾ ಹೆಲಿಕಾಪ್ಟರ್​ಗಳ ಮೂಲಕ ಕೊಡೇಕಲ್​ನತ್ತ ಪ್ರಯಾಣಿಸಿದ್ದಾರೆ. ಯಾದಗಿರಿಗೆ ಬರ್ತಿರೋ ಮೋದಿ, ಜಲಧಾರೆ ಮಿಷನ್ ಯೋಜನೆಯಡಿ, ಬಸವಸಾಗರ ಡ್ಯಾಂನ ಸ್ಕಾಡಾ ಕಾಲುವೆ ಉದ್ಘಾಟಿಸಲಿದ್ದಾರೆ. ಇದು ಒಂದು ಸಾವಿರ 4 ಕೋಟಿ ರೂಪಾಯಿಯ ಯೋಜನೆ ಆಗಿದೆ.

ಇದೇ ವೇಳೆ, 2 ಸಾವಿರದ 54 ಕೋಟಿ ಮೊತ್ತದ ಬಹುಗ್ರಾಮ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ವಿಶೇಷವೆಂದ್ರೆ, ಈ ಯೋಜನೆಯಡಿ 713 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗ್ತಿದೆ. ಈ ಮೂಲಕ ಯಾದಗಿರಿಯಲ್ಲೇ ಸುಮಾರು 4 ಸಾವಿರದ 234 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೈಕಮಾಂಡ್ ಕೈಸೇರಿದ RSSನ ಮತ್ತೊಂದು ಸಮೀಕ್ಷಾ ವರದಿ.

Thu Jan 19 , 2023
2023ರ ಚುನಾವಣೆ ಗೆಲ್ಲಲು ಆರ್​​ಎಸ್​​ಎಸ್​ನಿಂದ ಮತ್ತೊಂದು ಸಮೀಕ್ಷಾ ವರದಿ ಬಿಜೆಪಿ ಹೈಕಮಾಂಡ್​​ಗೆ ತಲುಪಿದೆ. ಬಿಜೆಪಿಗೆ ಸ್ಪಷ್ಟ ಬಹುಮತಕ್ಕೆ ರಾಜ್ಯದಲ್ಲಿ ಹಲವು ಬದಲಾವಣೆ ಅಗತ್ಯ ಅಂತ ರಿಪೋರ್ಟ್​​ನಲ್ಲಿ ಉಲ್ಲೇಖ ಆಗಿದೆ ಅಂತ ತಿಳಿದುಬಂದಿದೆ. ರಾಜ್ಯದ ಚುನಾವಣೆಗೆ ಪಶ್ಚಿಮ ಬಂಗಾಳ, ಗುಜರಾತ್​ ಮಾದರಿಯನ್ನ ತೆರೆದಿಟ್ಟಿದೆ. ಅಲ್ಲದೇ ಶೇ.45ರಷ್ಟು ಹೊಸ ಮುಖಕ್ಕೆ ಟಿಕೆಟ್​ ನೀಡುವ ಕುರಿತು ವರದಿಯಲ್ಲಿ ಸಲಹೆ ಕೊಟ್ಟಿದೆ ಎನ್ನಲಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಗಳು ಸಮೀಪಿಸುತ್ತಿವೆ. ರಾಜಕೀಯ ಪಕ್ಷಗಳ ಚಟುವಟಿಕೆಗಳು ಕೂಡ […]

Advertisement

Wordpress Social Share Plugin powered by Ultimatelysocial