ಮೇಘಾಲಯ, ಮಣಿಪುರ, ತ್ರಿಪುರ ‘ರಾಜ್ಯ ಸ್ಥಾಪನಾ ದಿನ’: ಮೋದಿ ಶುಭಾಶಯ.

ವದೆಹಲಿ: ಮೇಘಾಲಯ, ಮಣಿಪುರ ಹಾಗೂ ತ್ರಿಪುರ ‘ರಾಜ್ಯ ಸ್ಥಾಪನಾ ದಿನ’ದ ಅಂಗವಾಗಿ ಈ ರಾಜ್ಯಗಳ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

ಈಶಾನ್ಯ ಪ್ರದೇಶ ಕಾಯ್ದೆ-1971ರ ಅಡಿಯಲ್ಲಿ ಈ ಮೂರೂ ರಾಜ್ಯಗಳು 1972ರ ಜನವರಿ 21 ರಂದು ರಚನೆಯಾಗಿದ್ದವು.

ಕಳೆದ ಕೆಲವು ವರ್ಷಗಳಲ್ಲಿ ಮಣಿಪುರ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಭಾರತದ ಆರ್ಥಿಕತೆಗೆ ಮಣಿಪುರ ಬಲವನ್ನು ತುಂಬಲಿ ಹಾಗೂ ಜನರ ಆಕಾಂಕ್ಷೆಗಳು ನೆರವೇರಲಿ ಎಂದು ಮೋದಿ ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ತ್ರಿಪುರಾ ರಾಜ್ಯಸ ಅಭಿವೃದ್ಧಿಯ ದಾರಿ ಗಮನಾರ್ಹವಾಗಿವೆ. ಕೃಷಿಯಿಂದ ಕೈಗಾರಿಕೆ, ಶಿಕ್ಷಣದಿಂದ ಆರೋಗ್ಯದವರೆಗೂ ರಾಜ್ಯ ದೊಡ್ಡ ಪರಿವರ್ತನೆ ಕಂಡಿದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಸಂಸ್ಕೃತಿ, ಸಂಗೀತ, ಕಲೆ, ಕ್ರೀಡೆ ಸೇರಿದಂತೆ ಮೇಘಾಲಯ ಜನರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮೇಘಾಲಯದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಕೂಡ ಮೂರು ರಾಜ್ಯಗಳ ಜನರಿಗೆ ಶುಭಾಶಯ ಕೋರಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಟಿಎಂಸಿ ಯುವ ನಾಯಕನ ಬಂಧನ.

Sat Jan 21 , 2023
ಕೋಲ್ಕತ್ತಾ,ಜ.21- ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಯುವ ಮುಖಂಡ ಕುಂತಲ್ ಘೋಷ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಚಿನಾರ್ ಪಾರ್ಕ್ ಅಪಾಟ್ರ್ಮೆಂಟ್‍ನಲ್ಲಿ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಘೋಷ್‍ರನ್ನು ಬಂಧಿಸಿದ್ದಾರೆ. ಶಿಕ್ಷಕರ ನೇಮಕಾತಿ ಹಗರಣದ ತನಿಖೆಗೆ ಸಹಕರಿಸದಿದ್ದಕ್ಕಾಗಿ ಕುಂತಲ್ ಘೋಷ್ ಅವರನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ. ಇಂದು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ […]

Advertisement

Wordpress Social Share Plugin powered by Ultimatelysocial