ಬಡತನವನ್ನು ತೊಡೆದುಹಾಕಲು ಶಿಕ್ಷಣ ನೆರವು.

ಶಿಕ್ಷಣವು ನಮ್ಮ ಸಮಾಜದಿಂದ ಬಡತನವನ್ನು ತೊಡೆದುಹಾಕಲು ಹಾಗೂ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವಲ್ಲಿ ಸಹಾಯ ಮಾಡುತ್ತದೆ. ಒಬ್ಬ ವಿದ್ಯಾವಂತ ವ್ಯಕ್ತಿಯು ಉತ್ತಮ ಉದ್ಯೋಗವನ್ನು ಪಡೆಯಬಹುದು ಮತ್ತು ತನ್ನ ಕುಟುಂಬದ ಎಲ್ಲಾ ಮೂಲಭೂತ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ನೋಡಿಕೊಳ್ಳಬಹುದಾಗಿದೆ ಎಂದು ಪುರಸಭಾಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ತಿಳಿಸಿದರು.ಅವರು ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ರೂಬಿ ಆಂಗ್ಲ ಪ್ರೌಢಶಾಲೆಯ ೨೭ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಕೂಟಗಳನ್ನು ಪಾರಿವಾಳ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.ರೂಬಿ ಆಂಗ್ಲ ಪ್ರೌಢಶಾಲೆಯ ಕಾರ್ಯದರ್ಶಿ ಸೈಯದ್ ರಫೀಕ್ ಮಾತನಾಡಿ,ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಮಾಜಿಕ ಜೀವನ ಕ್ರಮಗಳನ್ನು ಹೇಳಿಕೊಡುತ್ತಿದ್ದು, ಸುಶಿಕ್ಷಿತ ವ್ಯಕ್ತಿಯನ್ನು ಸುಲಭವಾಗಿ ವಂಚಿಸಲು ಅಥವಾ ಯಾವುದೇ ಅಪರಾಧಕ್ಕೆ ಬಲಿಯಾಗಲು ಸಾಧ್ಯವಿಲ್ಲ. ಅನ್ಯಾಯದ ವಿರುದ್ಧ ನಿಲ್ಲುವ ಸಾಮರ್ಥ್ಯವನ್ನು ಅವರು ಬೆಳೆಸಿಕೊಳ್ಳಬಹುದು ಎಂದರು.ಮುಖ್ಯೋಪಾಧ್ಯಾಯಣಿ ನಿಕತ್ ಸಲ್ಮಾ ಮಾತನಾಡಿ,ಶಿಕ್ಷಣ ಎಲ್ಲರನ್ನೂ ಸಬಲಗೊಳಿಸುತ್ತದೆ. ಇದು ಆಧುನಿಕ ಮತ್ತು ಕೈಗಾರಿಕೀಕರಣಗೊಂಡ ಜಗತ್ತನ್ನು ರೂಪಿಸುವ ಪ್ರಮುಖ ಅಂಶವಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಗತಿಯನ್ನು ನಿಭಾಯಿಸಲು ಜನರಿಗೆ ಶಿಕ್ಷಣದ ಅಗತ್ಯವಿದೆ ಎಂದರು.ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Why Older Men and Younger Females Are Going out with

Wed Feb 1 , 2023
Many people are sometimes https://sugardaddyaustralia.org/established-men/ baffled as to why a mature man and younger girl are seeing. While there are a lot of several reasons behind this kind of, one of the most prevalent is that they want to locate someone who may bring them a feeling of youth and […]

Advertisement

Wordpress Social Share Plugin powered by Ultimatelysocial