POWER STAR:ಪುನೀತ್​ ರಾಜ್​ ಕುಮಾರ್ ಜೇಮ್ಸ್​ ಟೀಸರ್​ ರಿಲೀಸ್​ಗೆ ಡೇಟ್​ ಫಿಕ್ಸ್​;

ಬೆಂಗಳೂರು: ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಟನೆಯ ಕೊನೇ ಸಿನಿಮಾ ಮೇಲೆ ಈಗ ನಿರೀಕ್ಷೆಗಳು ಉತ್ತುಂಗದಲ್ಲಿದ್ದು, ಆ ಸಿನಿಮಾದ ಪ್ರತಿಯೊಂದು ಅಪ್ಡೇಟ್​ಗಾಗಿ ಅಭಿಮಾನಿಗಳು ಕಾತಯುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಪುನೀತ್​ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್​ ಒಂದನ್ನ ಬಿಡುಗಡೆ ಮಾಡಿದ್ದ ಚಿತ್ರ ತಂಡ ಈಗ ಸಿನಿಮಾ ಟೀಸರ್​ ಬಿಡುಗಡೆಗೆ ದಿನಾಂಕ ಫಿಕ್ಸ್​ ಮಾಡಿದೆ.

ಫೆಬ್ರವರಿ 11 ರಂದು ಸರಿಯಾಗಿ 11 ಗಂಟೆ 11 ನಿಮಿಷಕ್ಕೆ ಜೇಮ್ಸ್​ ಸಿನಿಮಾದ ಟೀಸರ್​ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನೂ ಜೇಮ್ಸ್​ ಸಿನಿಮಾದಲ್ಲಿ ಪ್ರಿಯಾ ಆನಂದ್​ ಹಿರೋಯಿನ್​ ಆಗಿ ನಟಿಸಿದ್ದು, ತೆಲುಗು ನಟ ಶ್ರೀಕಾಂತ್​, ಶರತ್​ ಕುಮಾರ್​ ರಾಘವೇಂದ್ರ ರಾಜ್​ಕುಮಾರ್​, ಮುಂತಾದ ಕಲಾವಿದರು ನಟಿಸಿದ್ದಾರೆ. ಮಾರ್ಚ್​ 25 ಕ್ಕೆ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿದ್ದು, ಇತ್ತೀಚೆಗೆ ಡಬ್ಬಿಂಗ್​ ಕಾರ್ಯವನ್ನ ಮುಗಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್‌ನಲ್ಲಿ 'ಸಮಾನತೆಯ ಪ್ರತಿಮೆ'ಯನ್ನು ಉದ್ಘಾಟಿಸಿದರು

Sat Feb 5 , 2022
  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೈದರಾಬಾದ್‌ನಲ್ಲಿ 11 ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ “ಸಮಾನತೆಯ ಪ್ರತಿಮೆ” ಯನ್ನು ಉದ್ಘಾಟಿಸಿದರು. ಸಂತ ಶ್ರೀ ರಾಮಾನುಜಾಚಾರ್ಯರು ನಂಬಿಕೆ, ಜಾತಿ ಮತ್ತು ಪಂಥ ಸೇರಿದಂತೆ ಜೀವನದ ಎಲ್ಲಾ ಅಂಶಗಳಲ್ಲಿ ಸಮಾನತೆಯ ಕಲ್ಪನೆಯನ್ನು ಉತ್ತೇಜಿಸಲು ಹೆಸರುವಾಸಿಯಾಗಿದ್ದಾರೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವು ಎಂಬ ಐದು ಲೋಹಗಳ ಸಂಯೋಜನೆಯಾದ `ಪಂಚಲೋಹ~ದಿಂದ ಈ ಪ್ರತಿಮೆಯನ್ನು […]

Advertisement

Wordpress Social Share Plugin powered by Ultimatelysocial