ಬಾಲಿವುಡ್ ಸೂಪರ್‍ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ನಟಿಸಬೇಕು ಎಂಬುದು ಎಲ್ಲ ಕಲಾವಿದರ ಕನಸು.

ಮುಂಬೈ : ನನ್ನ ಕನಸು ಕೊನೆಗೂ ನೆರವೇರಿತು ಎಂದು ದಕ್ಷಿಣ ಸಿನಿಮಾಗಳ ಬಾಹುಬಲಿ ಪ್ರಭಾಸ್ ಸಂತೋಷ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಸೂಪರ್‍ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ನಟಿಸಬೇಕು ಎಂಬುದು ಎಲ್ಲ ಕಲಾವಿದರ ಕನಸು.ಈ ಕನಸು ರೆಬೆಲ್ ಹುಡುಗ ಪ್ರಭಾಸ್‍ಗೂ ಸಹ ಇತ್ತು ಎಂದು ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬಿಗ್ ಬಿ ಜೊತೆ ಇದೇ ಮೊದಲ ಬಾರಿಗೆ ಪ್ರಭಾಸ್ ‘ಪ್ರಾಜೆಕ್ಟ್ ಕೆ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಗಾಗಿ ಅವರೇ ಬಹಳ ಎಕ್ಸೈಟ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.ಇನ್‍ಸ್ಟಾಗ್ರಾಮ್‍ನಲ್ಲಿ ಬಿಗ್ ಬಿ ಸಿನಿಮಾ ಸ್ಟಿಲ್ ಹಂಚಿಕೊಂಡ ಪ್ರಭಾಸ್, ‘ಕನಸು ನನಸಾಗಿದೆ’. ಲೆಜೆಂಡರಿ ಅಮಿತಾಬಚ್ಚನ್ ಸರ್ ಅವ ರೊಂದಿಗೆ ನನ್ನ ಮೊದಲ ಶಾಟ್. ಪೂರ್ಣಗೊಂಡಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಕುರಿತು ಬಚ್ಚನ್ ಸಹ ಸೋಶಿಯಲ್ ಮೀಡಿಯಾದಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿಮಾದ ತಮ್ಮ ಮೊದಲ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದು ಬಹಿರಂಗಪಡಿಸಿದರು. ಟ್ವೀಟ್‍ನಲ್ಲಿ ಬಿಗ್ ಬಿ, ಮೊದಲ ದಿನ.. ಮೊದಲ ಶಾಟ್.. ‘ಬಾಹುಬಲಿ’ ಪ್ರಭಾಸ್ ಅವರೊಂದಿಗಿನ ಮೊದಲ ಚಿತ್ರ. ಅವರ ಪ್ರತಿಭೆ ಮತ್ತು ನಮ್ರತೆ, ಕಲಿಯಲು ತೊಡಗಿಸಿಕೊಳ್ಳಲು ಅವರಿಗಿರುವ ಕಾತುರತೆ ತುಂಬಾ ಚೆನ್ನಾಗಿದೆ ಎಂದು ಬರೆದು ಟ್ವೀಟ್ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬದಾಯಿ ದೋ ಬಾಕ್ಸ್ ಆಫೀಸ್ ಕಲೆಕ್ಷನ್ ಡೇ 9: ರಾಜ್‌ಕುಮಾರ್, ಭೂಮಿ ಚಿತ್ರ ಥಿಯೇಟರ್‌ಗಳಲ್ಲಿ ಮೊದಲ ವಾರ ಕಡಿಮೆಯಾಗಿದೆ

Sun Feb 20 , 2022
  ರಾಜ್‌ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅವರ ಇತ್ತೀಚಿನ ಚಿತ್ರ ಬಹದಾಯಿ ದೋ ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರತಿಕ್ರಿಯೆಯನ್ನು ಪಡೆಯಿತು. ಇದು ಫೆಬ್ರವರಿ 11 ರಂದು ಆಯ್ದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರವು ನಿಧಾನವಾಗಿ ತೆರೆಕಂಡಾಗ, ಪ್ರೇಮಿಗಳ ದಿನದಂದು ಅದು ವೇಗವನ್ನು ಪಡೆದುಕೊಂಡಿತು. ಆದರೆ, ಈ ವಾರ ದಿನನಿತ್ಯದ ಸಂಗ್ರಹ ಕಡಿಮೆಯಾಗಿದೆ. ವಾರದ ಆರಂಭಿಕ ಬಾಕ್ಸ್ ಆಫೀಸ್ ಪ್ರೊಜೆಕ್ಷನ್‌ಗಳು ರೂ 20 ಕೋಟಿಯಲ್ಲಿ ನಿಂತಿವೆ ಮತ್ತು ಅದು ಸಂಖ್ಯೆಯನ್ನು ತರಲು ವಿಫಲವಾಗಿದೆ. […]

Advertisement

Wordpress Social Share Plugin powered by Ultimatelysocial