ಇದೇ ವರ್ಷ ನಡೆಯಲಿದೆಯಂತೆ ಪ್ರಭಾಸ್ ವಿವಾಹ

ಬಹುನಿರೀಕ್ಷಿತ ‘ರಾಧೆ ಶ್ಯಾಮ್’ ಚಿತ್ರ ಇದೇ ವಾರದಲ್ಲಿ ತೆರೆಕಾಣುತ್ತಿದೆ. ನಟ ಪ್ರಭಾಸ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 42 ವರ್ಷ ಪ್ರಾಯದ, ಭಾರತದ ಅತ್ಯಂತ ಅರ್ಹ ಬ್ಯಾಚುಲರ್‌ ಗಳಲ್ಲಿ ಒಬ್ಬರಾದ ಪ್ರಭಾಸ್ ಅವರ ಮದುವೆಯ ಕುರಿತಾಗಿ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ.ಇದೀಗ ಆಚಾರ್ಯ ವಿನೋದ್ ಕುಮಾರ್ ಎಂಬ ಜ್ಯೋತಿಷಿಯೊಬ್ಬರು ಪ್ರಭಾಸ್ ಮದುವೆ ಯಾವಾಗ ಎಂದು ಭವಿಷ್ಯ ನುಡಿದಿದ್ದಾರೆ. ಒಂದು ವರ್ಷದೊಳಗೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಜ್ಯೋತಿಷಿ ಹೇಳಿಕೊಂಡಿದ್ದಾರೆ.ಇತ್ತೀಚೆಗೆ ಸಂದರ್ಶನದಲ್ಲಿ, ಪ್ರಭಾಸ್ ಅವರು ಬಾಹುಬಲಿ ನಂತರ ಮದುವೆಯಾಗುವುದಾಗಿ ತಮ್ಮ ಕುಟುಂಬಕ್ಕೆ ತಿಳಿಸಿದ್ದರು ಎಂದು ಬಹಿರಂಗಪಡಿಸಿದರು. ಆದರೆ ಬಾಹುಬಲಿ ನಂತರ ಸಾಹೋ, ಇದೀಗ ರಾಧೆ ಶ್ಯಾಮ್ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದರೂ, ಪ್ರಭಾಸ್ ಮದುವೆಯ ಸುದ್ದಿಯಲ್ಲಿಲ್ಲ. ಆದರೆ ಇದೀಗ ಆಚಾರ್ಯ ವಿನೋದ್ ಕುಮಾರ್ ಎಂಬ ಜ್ಯೋತಿಷಿ ಪ್ರಭಾಸ್ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಜ್ಯೋತಿಷಿ, 2022ನೇ ವರ್ಷ ಪ್ರಭಾಸ್ ಗೆ ಅತ್ಯಂತ ವಿಶೇಷ ವರ್ಷವಾಗಿರಲಿದೆ. ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ 2022ರ ಅಕ್ಟೋಬರ್ ನಿಂದ 2023ರ ಅಕ್ಟೋಬರ್ ಒಳಗೆ ಮದುವೆಯಾಗಲಿದ್ದಾರೆ ಎಂದಿದ್ದಾರೆ.ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿದ್ದರು. ಪ್ರೀತಿಯ ಬಗೆಗಿನ ನನ್ನ ಅಂದಾಜು ತಪ್ಪಾಗಿದ್ದೇ ನಾನು ಮದುವೆಯಾಗದಿರಲು ಕಾರಣ. ಬಾಹುಬಲಿ ಚಿತ್ರದ ಬಳಿಕ ನಾನು ಮದುವೆಯಾಗುತ್ತೇನೆ ಎಂದು ಅಮ್ಮನ ಬಳಿ ಹೇಳಿಕೊಂಡಿದೆ. ಈ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತಿರುತ್ತದೆ. ಅದರಲ್ಲಿ ತಪ್ಪೇನಿದೆ. ಈಗ, ನನಗೆ ಆಯ್ಕೆಯಿಲ್ಲ, ನಾನು ಸರಿಯಾದ ಸಮಯದಲ್ಲಿ ಮದುವೆಯಾಗಿ ನೆಲೆಸಲು ಬಯಸುತ್ತೇನೆ ಎಂದು ಹೇಳಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಮಲ್ ಹಾಸನ್ ಅಭಿನಯದ 'ವಿಕ್ರಮ್' ಜೂನ್ 3 ರಂದು ತೆರೆಗೆ ಬರಲಿದೆ!

Mon Mar 14 , 2022
ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಬಹು ನಿರೀಕ್ಷಿತ ಆಕ್ಷನ್ ಥ್ರಿಲ್ಲರ್, ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹದ್ ಫಾಸಿಲ್ ಮುಖ್ಯಭೂಮಿಕೆಯಲ್ಲಿರುವ ‘ವಿಕ್ರಮ್’ ತಂಡವು ಜೂನ್ 3 ರಂದು ತೆರೆಗೆ ಬರಲಿದೆ ಎಂದು ಅದರ ತಯಾರಕರು ಸೋಮವಾರ ಘೋಷಿಸಿದ್ದಾರೆ. ಕಮಲ್ ಹಾಸನ್, ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸುತ್ತಿದೆ, ಬಿಡುಗಡೆ ದಿನಾಂಕದ ಕುರಿತು ಪ್ರಕಟಣೆಯನ್ನು ಮಾಡಲು ಟ್ವಿಟರ್‌ನಲ್ಲಿ ತೆಗೆದುಕೊಂಡರು. ಅವರು ಹೇಳಿದರು: “ನಮ್ಮ […]

Advertisement

Wordpress Social Share Plugin powered by Ultimatelysocial