ಪ್ರಭುದೇವ:ಮತ್ತೆ ಸ್ಯಾಂಡಲ್‌ವುಡ್‌ಗೆ ಕಾಲಿಡ್ತಿದ್ದಾರೆ!!;

ಕನ್ನಡದವರೇ ಆದರೂ ತಮಿಳು ಮತ್ತು ಹಿಂದಿಯಲ್ಲಿ ಸ್ಟಾರ್ ನಿರ್ದೇಶಕನಾಗಿ, ಕೊರಿಯೋಗ್ರಫರ್ ಆಗಿ ವಿಜೃಂಭಿಸ್ತಿರೋ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ.

ಈ ವಿಚಾರ ಈ ಹಿಂದೆಯೇ ಬಹಿರಂಗ ವಾಗಿದೆ.

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಈ ತನಕ‌ ನಿರ್ಮಾಣ ಮಾಡಿರುವ ಚಿತ್ರಗಳು ಸಾಕಷ್ಟು ಹೆಸರು‌ ಮಾಡಿದೆ. ಈಗ ಈ‌ ಪ್ರತಿಷ್ಠಿತ ಸಂಸ್ಥೆಯ ಮೂಲಕ ಪ್ಯಾನ್ ಇಂಡಿಯಾ ಸಿನಿಮಾವೊಂದು ನಿರ್ಮಾಣವಾಗಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬರಲಿದೆ.

ಖ್ಯಾತ ಬಹುಭಾಷಾ ನಟ ಹಾಗೂ ತಮ್ಮ ಅಮೋಘ ನೃತ್ಯದ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರುವ ಪ್ರಭುದೇವ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ತಾರಾಬಳಗ ‌ಹಾಗೂ ತಾಂತ್ರಿಕವರ್ಗದ ಮಾಹಿತಿ ನೀಡುವುದಾಗಿ ಸಂದೇಶ್ ನಾಗರಾಜ್ ತಿಳಿಸಿದ್ದಾರೆ. ಹಾಗಿದ್ದರೇ ಪ್ರಭುದೇವ ಮತ್ತು ಕನ್ನಡದ ನಂಟು ಹೇಗಿದೆ ಮುಂದೆ ನೋಡಿ.

ಟೈಟಲ್ ಏನು ಗೊತ್ತಾ ?
ನರ್ತಕ, ನೃತ್ಯ ಸಂಯೋಜಕ, ನಿರ್ದೇಶಕ, ನಿರ್ಮಾಪಕ ಮತ್ತು ನಟ ಪ್ರಭುದೇವ ಅವರು ಸಂದೇಶ್ ನಾಗರಾಜ್ ನಿರ್ಮಾಣದ ಹೊಸ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಮರಳಲು ಸಿದ್ಧರಾಗಿದ್ದರಾಗಿರೋದು ಅಭಿಮಾನಿಗಳಿಗೆ ಖುಷಿ ಯಾಗಿದೆ. ಪ್ರಭುದೇವ ಅವರ ಪಾತ್ರ ಹೇಗಿರಲಿದೆ, ಯಾವ ಮಾದರಿಯಲ್ಲಿ ಸಿನಿಮಾ ಮೂಡಿ ಬರುತ್ತೆ ಅನ್ನುವುದನ್ನು ತುಳಿದುಕೊಳ್ಳಲು ಕಾತುರರಾಗಿದ್ದಾರೆ. ಆದಷ್ಟು ಬೇಗ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಆಗಲಿದ್ದು, ಸೂಕ್ತ ಟೈಟಲ್‌ಗಾಗಿ ಚಿತ್ರತಂಡ ಹುಡುಕಾಟ ನಡೆಸಿದೆ. ಈ ವರ್ಷ ಪ್ರಾರಂಭವಾಗಲಿರುವ ಈ ಹೊಸ ಚಿತ್ರದಲ್ಲಿ ಪೂರ್ಣ ಪ್ರಮಾಣದ ಪಾತ್ರದಲ್ಲಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ.

ಡ್ಯಾನ್ಸ್ ಮೂಲಕ ಮೋಡಿ ಮಾಡಿದ ಪ್ರಭುದೇವ

ಡಾರ್ಲಿಂಗ್ ಕೃಷ್ಣ ನಟನೆಯ ಲಕ್ಕಿ ಮ್ಯಾನ್‌ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ಪ್ರಭುದೇವ ಕೂಡ ಹೆಜ್ಜೆ ಹಾಕಿದ್ದಾರೆ.ಈ ಚಿತ್ರದಲ್ಲು ಪುನೀತ್ ಅವರದ್ದು ಚಿಕ್ಕ ಪಾತ್ರವೇ ಆಗಿದ್ದರೂ ಪುನೀತ್ ರಾಜಕುಮಾರ್‌ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಇಬ್ಬರೂ ಡಾ.ರಾಜ್ ಕುಮಾರ್ ಅವರ ಮೇಲೆ ರಚಿಸಲಾದ ಹಾಡೊಂದರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಇದೇ ಮೊದಲಬಾರಿಗೆ ಇವರಿಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆ ನಾಯಕಿಯಾಗಿ ಸಂಗೀತ ಶೃಂಗೇರಿ ಅವರು ಕಾಣಿಸಿಕೊಂಡಿದ್ದು, ರೋಶನಿ ಪ್ರಕಾಶ್ ದ್ವಿತೀಯ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

ಉಪೇಂದ್ರ ಜೊತೆ ತೆರೆಹಂಚಿಕೊಂಡು ಕಮಾಲ್ ಮಾಡಿದ್ದ ಪ್ರಭುದೇವ

ಪ್ರಭುದೇವ ಮೊದಲ ಬಾರಿಗೆ ನಟನಾಗಿ ಎಂಟ್ರಿಯಾಗಿದ್ದು ಕನ್ನಡದ ‘ಎಚ್‌2ಓ’ ಚಿತ್ರದಿಂದ. ಉಪೇಂದ್ರ ಹೀರೋ ಆಗಿದ್ದ ಈ ಸಿನಿಮಾದಲ್ಲಿ ಪ್ರಭು, ಮತ್ತೋರ್ವ ಹೀರೋ. ಅವರಿಲ್ಲಿ ತಮಿಳು ಪ್ರಾಂತ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿನ ‘ಓಕೆ ಓಕೆ..’ ಸಾಂಗ್‌ನಲ್ಲಿ ಭರ್ಜರಿಯಾಗಿ ಸ್ಟೆಪ್‌ ಹಾಕಿದ್ದರು. ಉಪೇಂದ್ರ ಅವರ ಕಥೆ-ಚಿತ್ರಕಥೆ ಬರೆದಿದ್ದ ಈ ಸಿನಿಮಾಗೆ ಲೋಕನಾಥ್‌-ರಾಜಾರಾಮ್‌ ನಿರ್ದೇಶನ ಮಾಡಿದ್ದರು. ಒಂದಷ್ಟು ವಿವಾದಗಳಿಗೂ ‘ಎಚ್‌2ಓ’ ಸಾಕ್ಷಿಯಾಗಿತ್ತು. ಕಾವೇರಿ ನೀರಿನ ಸಮಸ್ಯೆಯನ್ನೇ ವಿಭಿನ್ನ ರೀತಿಯಲ್ಲಿ ಈ ಸಿನಿಮಾದ ಮೂಲಕ ಹೇಳುವ ಪ್ರಯತ್ನವನ್ನು ಉಪೇಂದ್ರ ಮಾಡಿದ್ದರು. ಪ್ರಿಯಾಂಕಾ ಉಪೇಂದ್ರ ಈ ಸಿನಿಮಾದಲ್ಲಿ ನಾಯಕಿಯಾಗಿದ್ದರು.

ನಾಗೇಂದ್ರ ಪ್ರಸಾದ್ ಕೂಡ ನಟಿಸಿದ್ದ ಚಿತ್ರ ‘123’

2002ರಲ್ಲೇ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡರು, ಅದು ‘123’ ಚಿತ್ರದ ಮೂಲಕ. ಈ ಸಿನಿಮಾದಲ್ಲಿ ಪ್ರಭುದೇವ ಅವರ ಸಹೋದರರಾದ ರಾಜು ಸುಂದರಂ, ನಾಗೇಂದ್ರ ಪ್ರಸಾದ್ ಕೂಡ ನಟಿಸಿದ್ದರು. ಇದು ಕನ್ನಡ-ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿತ್ತು. ಪ್ರಭು ಕುರುಡನಾಗಿ ಕಾಣಿಸಿಕೊಂಡರೆ, ರಾಜು ಮೂಗನಾಗಿ, ನಾಗೇಂದ್ರ ಕಿವುಡನಾಗಿ ನಟಿಸಿದ್ದರು. ಕೆ. ಸುಭಾಷ್‌ ನಿರ್ದೇಶನ ಈ ಸಿನಿಮಾದಲ್ಲಿ ಜ್ಯೋತಿಕಾ ನಾಯಕಿಯಾಗಿದ್ದರು. ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಪಡೆಯದಿದ್ದರೂ, ಹಾಡುಗಳು ದೊಡ್ಡ ಹಿಟ್ ಆಗಿದ್ದವು. ದೇವ ಚಿತ್ರಕ್ಕೆ ಸಂಗೀತ ನೀಡಿದ್ದರು. ಇದು ಮರಾಠಿಯ ನಾಟಕವೊಂದರ ಸ್ಫೂರ್ತಿಯಾಗಿ ನಿರ್ಮಾಣಗೊಂಡಿತ್ತು.

ತಂದೆ ಮೂಗೂರು ಸುಂದರಂ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದರು

2002ರಲ್ಲೇ ಪ್ರಭುದೇವ ನಟಿಸಿದ್ದ ಮತ್ತೊಂದು ಸಿನಿಮಾ ‘ಮನಸೆಲ್ಲಾ ನೀನೇ’ ರಿಲೀಸ್ ಆಗಿತ್ತು. ವಿಶೇಷವೆಂದರೆ, ಇದರಲ್ಲಿ ಅವರು ಹೀರೋ ಆಗಿರಲಿಲ್ಲ. ಅವರ ಸಹೋದರ ನಾಗೇಂದ್ರ ಪ್ರಸಾದ್ ಹೀರೋ ಆಗಿದ್ದರೆ, ಅವರ ತಾಯಿ ಮಹಾದೇವಮ್ಮ ಇದರ ನಿರ್ಮಾಣ ಮಾಡಿದ್ದರು. ತಂದೆ ಮೂಗೂರು ಸುಂದರಂ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದರು. ಹೀಗೆ ಒಂದಷ್ಟು ಸಿನಿಮಾಗಳ ಬಳಿಕ ತಮಿಳು ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಪ್ರಭುದೇವ ಇದೀಗ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮತ್ತೆ ಕಂ ಬ್ಯಾಕ್ ಮಾಡುತ್ತಿರುವುದಕ್ಕೆ ಅಭಿಮಾನಿಗಳು ಕಾತುರರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

bollywood:ಲತಾ ಮಂಗೇಶ್ಕರ್ ನಿಧನದಿಂದ ಕಂಗನಾ ರನೌತ್ ದುಃಖವನ್ನು ತಡೆಹಿಡಿಯಲು ಸಾಧ್ಯವಾಗುತ್ತಿಲ್ಲ;

Tue Feb 8 , 2022
ನವದೆಹಲಿ : ಗಾನ ಕೋಗಿಲೆ ಲತಾ ಮಂಗೇಶ್ಕರ ಅವರ ಹಾಡು ಬಾಲಿವುಡ್‍ನಲ್ಲೆ ಚಿರಪರಿಚಿತ. ಅವರ ನಿಧನಕ್ಕೆ ಬಾಲಿವುಡ್‍ನ ಅನೇಕ ನಟ ನಟಿಯರು ಸೇರಿದಂತೆ ಟ್ವೀಟ್ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಕಂಗನಾ ರನೌತ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಲತಾ ಮಂಗೇಶ್ಕರ್ ಅವರ ಫೋಟೋವನ್ನು ಹಂಚಿಕೊಂಡು ಈ ರೀತಿ ಬರೆದಿದ್ದಾರೆ. ಜೀವನದಲ್ಲಿ ಅವರನ್ನು ಎಂದಿಗೂ ಭೇಟಿಯಾಗಲಿಲ್ಲ. ಆದರೆ ಇಂದು ಅವರ ನಿಧನದಿಂದ ನನ್ನ ದುಃಖವನ್ನು ತಡೆಹಿಡಿಯಲು ಸಾಧ್ಯವಾಗುತ್ತಿಲ್ಲ. ನಿಜವಾದ ಕಲಾವಿದನ ಸಾರವೆಂದರೆ ಅವರು ತಮ್ಮ ಕೆಲಸದ […]

Advertisement

Wordpress Social Share Plugin powered by Ultimatelysocial