ಪ್ರೇಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗಣನೀಯವಾಗಿ ಯಶಸ್ವಿಯಾದ ನಟಿ.

 

ಜನವರಿ 6 ಪ್ರೇಮ ಅವರ ಹುಟ್ಟಿದ ಹಬ್ಬ. ಬೆಂಗಳೂರಿನಲ್ಲಿ ವ್ಯಾಸಂಗ ನಡೆಸಿದ ಕೊಡಗಿನ ಕುವರಿ ಪ್ರೇಮ ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ಪ್ರತಿಭೆಯಿಂದ ಕನ್ನಡದ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
‘ಸವ್ಯಸಾಚಿ’ ಎಂಬ ಚಿತ್ರದ ಮೂಲಕ 1996ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ಪ್ರೇಮ ಮುಂದೆ ‘ಓಂ’, ‘ನಮ್ಮೂರ ಮಂದಾರ ಹೂವೆ’, ‘ಉಪೇಂದ್ರ’, ‘ಚಂದ್ರಮುಖಿ ಪ್ರಾಣ ಸಖಿ’, ‘ಯಜಮಾನ’, ‘ಕನಸುಗಾರ’, ‘ಆಪ್ತಮಿತ್ರ’ ಮುಂತಾದ ಪ್ರಮುಖ ಚಿತ್ರಗಳಲ್ಲಿ ಕನ್ನಡಿಗರ ಮನ ಗೆದ್ದವರು.
ಪ್ರೇಮ ಅವರು ದಕ್ಷಿಣ ಭಾರತದ ಇತರ ಚಿತ್ರರಂಗಗಳಾದ ಮಲಯಾಳಂ, ತೆಲುಗು ಚಿತ್ರರಂಗಗಳಲ್ಲಿ ಕೂಡ ಸಾಕಷ್ಟು ಯಶಸ್ಸು ಕಂಡವರು.
‘ಓಂ’ ಚಿತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ, ‘ಕನಸುಗಾರ’ ಚಿತ್ರದ ಅಭಿನಯಕ್ಕೆ ಫಿಲಂ ಫೇರ್ ಪ್ರಶಸ್ತಿ ಮುಂತಾದವುಗಳಿಗೆ ಭಾಗಿಯಾಗಿರುವ ಪ್ರೇಮ ಅವರು ಚಿತ್ರರಂಗದಲ್ಲಿ ಕನ್ನಡದವರೇ ಕಡಿಮೆ ಆಗಿದ್ದ ಕಾಲದಲ್ಲಿ ಒಂದಷ್ಟು ಕನ್ನಡತನ ತೋರಿದವರು. ಅವರಿಗೆ ಬದುಕಿನಲ್ಲಿ ಎಲ್ಲ ರೀತಿಯಲ್ಲಿ ಶುಭವಾಗಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಜಿಎಫ್ ಬಾಬು ಹೇಳಿಕೆ.

Fri Jan 6 , 2023
ನಾನು ಚಿಕ್ಕಪೇಟೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಪ್ರತಿ ಮನೆಗೆ ತಲಾ ಐದು ಸಾವಿರ ಕೊಟ್ಟಿದ್ದೇನೆ ಇದಕ್ಕಾಗಿ ೩೦ ಕೋಟಿ ಹಣ ಖರ್ಚು ಮಾಡಿದ್ದೇನೆ ಇದನ್ನ ಯಾರೂ ಧೈರ್ಯವಾಗಿ ಹೇಳೋದಿಲ್ಲ ಕಾಂಗ್ರೆಸ್ ಕಾರ್ಯಕರ್ತರು ನನಗೆ ಸಾಥ್ ನೀಡಲಿಲ್ಲ ನಾನು ಮೂರು ಸಾವಿರ ಮನೆ ಕಟ್ಟಿಕೊಡುತ್ತಿದ್ದೇನೆ ಬಡವರು ಬಡವರಾಗಿಯೇ ಇರಬೇಕಾ ? ೧೮೦ ಕೋಟಿ ಹಣ ಖರ್ಚು ಮಾಡ್ತಿದ್ದೇನೆ ಆರ್.ವಿ.ದೇವರಾಜ್ ಸಾಹೇಬ್ರು ಸ್ಲಂ ಬೋರ್ಡ್ ನಲ್ಲಿ ಡಿಪಾಸಿಟ್ ಮಾಡ್ಬೇಕು ಅಂತಿದ್ದಾರೆ ಅವರು ಕಲಾಸಿಪಾಳ್ಯದಲ್ಲಿ ದೂರು […]

Advertisement

Wordpress Social Share Plugin powered by Ultimatelysocial