‘ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು’ ಎಂಬ ಗಾದೆ ಸಚಿವ ಪ್ರಿಯಾಂಕ್ ಖರ್ಗೆ ಬೇಸರ

ಬೆಂಗಳೂರು: ‘ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು’ ಎಂಬ ಗಾದೆ ಮಾತಿನ‌ ಮೂಲಕ ಪಕ್ಷದ ನಾಯಕರ ಹೇಳಿಕರ ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವ ಪಕ್ಷದ ನಾಯಕರ ಸಿಎಂ ಗಾದಿ ಕಿತ್ತಾಟದ ಬಗ್ಗೆ ಅಸಮಾಧಾನ ಹೊರ ಹಾಕಿದರು.

ಪಕ್ಷವನ್ನ ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಬಹುಮತ ಬಂದಾಗ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಬೇಕು. ಆ ಬಳಿಕ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಲ್‌ಪಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಪಕ್ಷದಲ್ಲಿ ಗೌರವ ಸ್ಥಾನ ಸಿಗಲಿದೆ. ಈಗಲೇ ಸಿಎಂ ವಿಚಾರವಾಗಿ ಮಾತನಾಡುವುದು ಸರಿಯಲ್ಲ ಎಂದರು.

ತನ್ನ ಅಭಿಪ್ರಾಯದಿಂದ ಬೇರೆಯವರಿಗೆ ನೋವಾಗಬಾರದು ಎನ್ನುವುದನ್ನು ಅರಿತು ಕೊಳ್ಳಬೇಕು. ತಮ್ಮ ಅಭಿಪ್ರಾಯವನ್ನು ಎಲ್ಲಿ ವ್ಯಕ್ತಪಡಿಸಬೇಕೋ ಅಲ್ಲಿ ಹೇಳಬೇಕು. ಹೈಕಮಾಂಡ್, ಸಿಎಲ್‌ಪಿ ಸಭೆಯಲ್ಲಿ ವ್ಯಕ್ತಪಡಿಸಲಿ. ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ಸಾರ್ವಜನಿಕವಾಗಿ ಅಭಿಪ್ರಾಯ ಹೊರ ಹಾಕಬಾರದು ಎಂದರು.

ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಅವಕಾಶವಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ಗೋವಿಂದ ಕಾರಜೋಳರನ್ನು ಡಿಸಿಎಂ ಸ್ಥಾನದಿಂದ ಇಳಿಸಿದರು. ಎಂಎಲ್ಸಿ ಕೈಯಲ್ಲಿ ಚಡ್ಡಿ ಹೊರಿಸಿದ್ದಾರೆ ಎಂದು ಆರೋಪಿಸಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಣಬೀರ್ ಕಪೂರ್ ಅವರ ಶಂಶೇರಾ ಟ್ಯಾಂಕ್ಸ್, ಬಾಲಿವುಡ್ ಅನ್ನು ಫಿಕ್ಸ್‌ನಲ್ಲಿ ಬಿಡುತ್ತದೆ

Mon Jul 25 , 2022
150 ಕೋಟಿ ಬಜೆಟ್‌ನಲ್ಲಿ ಬಾಲಿವುಡ್ ಸ್ಟೇಬಲ್‌ನಿಂದ ಹೊರಬರುತ್ತಿರುವ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾದ ಶಂಶೇರಾ ಭಾರಿ ನಷ್ಟದತ್ತ ನೋಡುತ್ತಿದೆ. ಜುಲೈ 22 ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ಎರಡು ದಿನಗಳಲ್ಲಿ 20.75 ಕೋಟಿ ರೂಪಾಯಿಗಳ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಸಾಕ್ಷಿಯಾಗಿದೆ ಮತ್ತು ವರದಿಗಳ ಪ್ರಕಾರ, ಭಾನುವಾರದಂದು ಮತ್ತೊಂದು 10.5-11 ಕೋಟಿ ರೂ. ಇದರ ಅತ್ಯಂತ ಆಶಾದಾಯಕ ಸನ್ನಿವೇಶವು ಅದರ ನಾಟಕೀಯ ಪ್ರದರ್ಶನದ ಕೊನೆಯಲ್ಲಿ 65-70 ಕೋಟಿ ರೂ. ರಣಬೀರ್ […]

Advertisement

Wordpress Social Share Plugin powered by Ultimatelysocial