ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ್ ಯುವ ಸೈನ್ಯದ ವತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆಭಾರತದ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸುಖಿ ರಾಜ್ಯದ ಪರಿಕಲ್ಪನೆಯು ನಮ್ಮ ಸಂವಿಧಾನದ ಆಶಯವಾಗಿದೆ .ಭಾರತದಲ್ಲಿ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿ ಸಂವಿಧಾನದ ಆಶಯಗಳನ್ನು ಈಡೇರಿಸಿಕೊಂಡು ಬದುಕು ಕಟ್ಟಿಕೊಂಡು ಜೀವನ ಸಾಗಿಸುವಂತ ಪರಿಸ್ಥಿತಿಯಲ್ಲಿ ಸುಮಾರು ಎರಡು ವರ್ಷಗಳಿಂದ ದೇಶದಲ್ಲಿ ಜನರು ನರಕದ ಜೀವನ ನೇಡೆಸುವಂತ ಪರಿಸ್ಥಿತಿಯನ್ನು ಕೆಂದ್ರಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಜೀವನದ ಜೋತೆ ಚೆಲ್ಲಾಟವಾಡುತ್ತಿದೆ.

ಒಂದೆಡೆ ದೇಶದಲ್ಲಿ ಕೋರೋನಾ ಮಹಾ ಮಾರಿಯಿಂದ ಜನರ ಬದುಕು ನರಕವಾಗಿದೆ ಮತ್ತೊಂದೆಡೆ ಲಾಖ್ ಡೌನ್ ನಿಂದ ಉದ್ಯೋಗದ ಆಭಾವ ಇನ್ನೊಂದೆಡೆ ಆಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ .ಇವೆಲ್ಲದರ ನಡುವೆ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಆಗದೆ ಪರಿತಪಿಸುವ ಸ್ಥಿತಿಯಲ್ಲಿ ಪ್ರಾಣವನ್ನೆ ತೆತ್ತಂತಹ ಉದಾಹರಣೆ ನಮ್ಮಗಳ ಕಣ್ಮುಂದೆ ಕಾಣಬಹುದು ಇಂತಹ ಸಂದರ್ಭದಲ್ಲಿ ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದು ಖಂಡನಿಯ.ದೇಶದ ಜನತೆ ತಮ್ಮ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.ರೈತರು ದಿನನಿತ್ಯ ಬೀದಿಗಳಲ್ಲಿ ಹೋರಾಟ ಮಾಡುತ್ತಿದ್ದರು ರೈತ ಪರವಾಗಿ ಯಾವುದೇ ಯೋಜನೆಗಳು ಜಾರಿಯಾಗುತ್ತಿಲ್ಲ.ಕೆಂದ್ರ ಸರ್ಕಾರ ದೇಶದ ಅಲಾವಾರು ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಲು ಮುಂದಾಗಿರುವುದು ಈ ದೇಶದ ಜನರ ದೌರ್ಭಾಗ್ಯವೇ ಸರಿ.

ದೇಶದಲ್ಲಿ ಪ್ರಾವಾಹ ಪರಿಸ್ಥಿತಿ .ಕೋರೋನಾ ಪರಿಸ್ಥಿತಿ ಅಕಾಲಿಕ ಮಳೆಯಿಂದಾಗಿ ಬೆಳೆಹಾನಿ ಸಂದರ್ಭದಲ್ಲಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಈ ರೀತಿಯ ಪರಿಸ್ಥಿತಿಯಲ್ಲಿ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೂಡಲೇ ಕಡಿಮೆ ಮಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯು ನೆಮ್ಮದಿ ಬದುಕು ಬದುಕಲು ಅವಕಾಶ ಕಲ್ಪಿಸಿಕೂಡಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಸರಕಾರಿ ಜಾಗ ಉಳಿವಿಗೆ ರೈತ ಸಂಘ, ಹಸಿರು ಸೇನೆ, ಪ್ರಜಾವಿಮೋಚಾನಾ ಚಳುವಳಿ ಸಂಘಟನೆ ಪ್ರತಿಭಟನೆ

Sat Dec 18 , 2021
ದೇವನಹಳ್ಳಿ ತಾಲೂಕಿನ ಚಿಕ್ಕೋಬದೇನಹಳ್ಳಿ ಗ್ರಾಮದ ಗ್ರಾಮ ಠಾಣಾ ೮ ಎಕರೆ ೪ ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ಖಾತೆಗಳನ್ನು ಸೃಷ್ಠಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಆವರಣದ ಮುಂಭಾಗದಲ್ಲಿ ರೈತ ಸಂಘ, ಹಸಿರು ಸೇನೆ, ಪ್ರಜಾವಿಮೋಚಾನಾ ಚಳುವಳಿ ಸಂಘಟನೆ ವತಿಯಿಂದ ಗ್ರಾಮಸ್ಥರೊಡನೆ ಪ್ರತಿಭಟನೆ ನಡೆಸಿದರು. ಇತ್ತೀಚೆಗೆ ಭೂಗಳ್ಳರ ಆವಳಿ ಹೆಚ್ಚಾಗುತ್ತಿದ್ದು, ನಕಲಿ ದಾಖಲೆಗಳ ಸೃಷ್ಠಿಕೋರರು ಸಹ ಹೆಚ್ಚಾಗುತ್ತಿದ್ದಾರೆ. ಸರಕಾರದಡಿಯಲ್ಲಿ ಸೇವೆ ಸಲ್ಲಿಸುವ […]

Advertisement

Wordpress Social Share Plugin powered by Ultimatelysocial