*ನಟ ಪುನೀತ್ ರಾಜ್ ಕುಮಾರ್ ಗೆ ಗೌರವ ಡಾಕ್ಟರೇಟ್

ಅಭಿಮಾನಿಗಳ ಆರಾಧ್ಯ ದೈವ, ಪವರ್ ಸ್ಟಾರ್ ದಿ.ಪುನೀತ್ ರಾಜ್‌ಕುಮಾರ್ ಸೇರಿದಂತೆ ಮೂವರಿಗೆ ಮೈಸೂರು ವಿಶ್ವವಿದ್ಯಾಲಯ ಈ ಬಾರಿಯ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದೆ.

ನಗರದ ಕ್ರಾರ್ಡ್ ಹಾಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮೈವಿವಿ ಕುಲಪತಿ ಪ್ರೊಘಿ.ಜಿ.ಹೇಮಂತ್ ಕುಮಾರ್, ಇತ್ತೀಚಿಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಇವರೊಂದಿಗೆ ಜಾನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಹಾಗೂ ಹಿರಿಯ ವಿಜ್ಞಾನಿ ಹಾಗೂ ಡಿಆರ್‌ಡಿಒ (ಡಿೆನ್ಸ್ ರಿಸರ್ಜ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್) ಮಾಜಿ ಡೈರೆಕ್ಟರ್ ಜನರಲ್ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರಿಗೂ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ. ಈ ಹಿಂದೆ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು 46 ವರ್ಷಗಳ ಹಿಂದೆ ಮೈಸೂರು ವಿವಿ ನೀಡಿತ್ತು ಎಂಬುದು ಸ್ಮರಣೀಯ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ 102 ನೇ ಘಟಿಕೋತ್ಸವ ಮಾ.22ಂದು ನಡೆಯಲಿದ್ದುಘಿ, ಈ ಕಾರ‌್ಯಕ್ರಮದಲ್ಲಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ಸರಕಾರಕ್ಕೆ 12 ಹೆಸರನ್ನು ಕಳುಹಿಸಿದ್ದೆವು. ಉನ್ನತ ಮಟ್ಟದ ಸಮಿತಿ ಮೂವರ ಹೆಸರನ್ನು ಶಿಾರಸು ಮಾಡಿತು. ಸರಕಾರಕ್ಕೆ ಇದಕ್ಕೆ ಒಪ್ಪಿಗೆ ಸೂಚಿಸಿದೆ. ದಿ. ಪುನೀತ್ ಪತ್ನಿ ಅಶ್ವಿನಿ ಅವರನ್ನು ಭೇಟಿಯಾಗಿ ಕಾರ‌್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿದೆ. ಅವರು ಘಟಿಕೋತ್ಸವಕ್ಕೆ ಬರಲು ಒಪ್ಪಿದ್ದಾರೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಗೂಬಾಯಿ ಕಥಿಯಾವಾಡಿಯ ನಂತರ, ಆಲಿಯಾ ಭಟ್ ಏಕೆ ಬಾಲಿವುಡ್ನ ಹೊಸ ನಿರ್ವಿವಾದ ರಾಣಿ!

Sun Mar 13 , 2022
ಚಿತ್ರಮಂದಿರಗಳಲ್ಲಿ ಎರಡು ವಾರಗಳ ಓಟದ ನಂತರ ಗಂಗೂಬಾಯಿ ಕಥಿಯಾವಾಡಿ 100 ಕೋಟಿ ರೂಪಾಯಿಗಳ ಗಡಿಯನ್ನು ತಲುಪುತ್ತಿದ್ದಂತೆ, ಆಲಿಯಾ ಭಟ್ ಬಾಲಿವುಡ್‌ನಲ್ಲಿ ಎರಡು ಮಹಿಳಾ ಚಾಲಿತ ಚಲನಚಿತ್ರಗಳು ಅಸ್ಕರ್ ‘100 ಕೋಟಿ ಕ್ಲಬ್’ ಅನ್ನು ಪ್ರವೇಶಿಸಿದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದೀಪಿಕಾ ಪಡುಕೋಣೆ ಅಥವಾ ಕಂಗನಾ ರಣಾವತ್ ಕೂಡ ಅಂತಹ ಸಾಧನೆಯ ಬಗ್ಗೆ ಹೆಮ್ಮೆಪಡುವಂತಿಲ್ಲ. ಇಬ್ಬರು ಹಣ-ಸ್ಪಿನ್ನರ್‌ಗಳಲ್ಲಿ, ರಾಝಿ (ರೂ. 122 ಕೋಟಿ) ಇನ್ನೂ ಆಲಿಯಾ ಅವರ ಅತ್ಯಂತ […]

Advertisement

Wordpress Social Share Plugin powered by Ultimatelysocial