ಪುನೀತ್​ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಅಪ್ಪು ಸಾವಿನ ವಾರ್ತೆ..!

ಅಕ್ಟೋಬರ್​ 29, 2021 – ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಪವರ್​ ಸ್ಟಾರ್​​ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳ ಎದುರು ಭಯಾನಕ ವಾರ್ತೆಯೊಂದು ಬರ ಸಿಡಿಲಿನಂತೆ ಬಂದೆರಗಿತ್ತು. ಕೇವಲ 46 ವರ್ಷ ಪ್ರಾಯದಲ್ಲಿ ಪುನೀತ್​ ರಾಜ್​ ಕುಮಾರ್​ ಎಲ್ಲರನ್ನೂ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದರು.

ಪುನೀತ್​ ಸಾವಿನ ವಾರ್ತೆಯನ್ನು ಕೇಳಿ ಅನೇಕರು ಹೃದಯಾಘಾತದಿಂದ ಮೃತಪಟ್ಟಿದ್ದರೆ ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಪುನೀತ್​​ ನಮ್ಮನಗಲಿ ಇಷ್ಟೊಂದು ಸಮಯ ಕಳೆದಿದ್ದರೂ ಸಹ ಅವರ ಸೋದರತ್ತೆ ನಾಗಮ್ಮಗೆ ತನ್ನ ಪ್ರೀತಿಯ ಸೋದರಳಿಯ ಇನ್ನಿಲ್ಲ ಎಂಬ ವಿಚಾರ ಇನ್ನೂ ತಿಳಿದಿಲ್ಲವಂತೆ..!

90 ವರ್ಷ ಪ್ರಾಯದ ನಾಗಮ್ಮ ವರನಟ ಡಾ. ರಾಜ್​ಕುಮಾರ್​​ರ ಸಹೋದರಿ. ನಾಗಮ್ಮ ಕುಟುಂಬದಲ್ಲಿಯೇ ಹಿರಿಯರು ಹಾಗೂ ಅಪ್ಪು ಅಂದರೆ ಇವರಿಗೆ ಪಂಚಪ್ರಾಣ. ಡಾ. ರಾಜ್​ಕುಮಾರ್​ ಮಕ್ಕಳನ್ನು ನಾಗಮ್ಮನೇ ನೋಡಿಕೊಂಡಿದ್ದಾರೆ. ಪುನೀತ್​ ಕೂಡ ಆಗಾಗ್ಗೆ ಗಾಜನೂರಿನಿಗೆ ಭೇಟಿ ನೀಡುವ ಮೂಲಕ ತನ್ನ ಪ್ರೀತಿಯ ಸೋದರತ್ತೆಯನ್ನು ಭೇಟಿಯಾಗುತ್ತಿದ್ದರು. ಪುನೀತ್​ ರಾಜ್​ಕುಮಾರ್​ ಇನ್ನಿಲ್ಲ ಎಂಬ ಸುದ್ದಿ ಇಂದಿಗೂ ನಾಗಮ್ಮರಿಗೆ ತಿಳಿದಿಲ್ಲ. ಇಡೀ ರಾಜ್​ ಕುಟುಂಬ ನಾಗಮ್ಮರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದೆ.

ಪುನೀತ್​ ನೆನಪಾದಾಗೆಲ್ಲ ನಾಗಮ್ಮ ಅಪ್ಪು ಎಲ್ಲಿ ಎಂದು ಕೇಳುತ್ತಾರಂತೆ. ಇದಕ್ಕೆ ಮನೆಯವರು ಪುನೀತ್​ ಶೂಟಿಂಗ್​ ನಿಮಿತ್ತ ವಿದೇಶದಲ್ಲಿದ್ದಾರೆ. ಶೀಘ್ರದಲ್ಲಿಯೇ ಹಿಂತಿರುಗುತ್ತಾರೆ ಎಂದು ಹೇಳಲಾಗುತ್ತದೆಯಂತೆ.

ಪುನೀತ್​ ಸಿನಿಮಾವನ್ನು ನಾಗಮ್ಮ ನೋಡುತ್ತಾ ಖುಷಿ ಪಡುತ್ತಾರೆ. ಕೆಲವು ವರ್ಷಗಳ ಹಿಂದೆ ರಾಘವೇಂದ್ರ ರಾಜ್​ಕುಮಾರ್​​ಗೆ ಹೃದಯಾಘಾತವಾದ ಸುದ್ದಿ ಕೇಳಿ ನಾಗಮ್ಮ ಹಾಸಿಗೆ ಹಿಡಿದಿದ್ದರು. ಅವರಿಗೆ ಅಪ್ಪು ಸಾವಿನ ಸುದ್ದಿಯನ್ನು ಸಹಿಸಲು ಸಾಧ್ಯವೇ ಇಲ್ಲ. ಹೀಗಾಗಿ ನಾವು ಗೌಪ್ಯತೆ ಕಾಪಾಡುತ್ತಿದ್ದೇವೆ ಎಂದು ಕುಟುಂಬ ಸದಸ್ಯರೊಬ್ಬರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಫಿಲ್ಮಿ ಕ್ಷಣವನ್ನು ಲೈವ್ ಮಾಡಲು ಭಾರತೀಯ ಚಲನಚಿತ್ರಗಳಿಂದ ಈ 5 ಸ್ಥಳಗಳಿಗೆ ಭೇಟಿ ನೀಡಿ!

Thu Mar 17 , 2022
ನಾವೆಲ್ಲರೂ ಭಾರತೀಯ ಚಲನಚಿತ್ರಗಳನ್ನು ನೋಡುತ್ತಾ ಬೆಳೆದಿದ್ದೇವೆ. ರೊಮ್ಯಾನ್ಸ್, ಡ್ರಾಮಾ, ಥ್ರಿಲ್ಲರ್, ಆಕ್ಷನ್ ಮತ್ತು ಹಾರರ್ ಕಥೆಗಳು ನಮ್ಮನ್ನು ಎಷ್ಟು ರಂಜಿಸಿದವೋ, ನಾವು ಯಾವಾಗಲೂ ಬಯಸುವ ಒಂದು ವಿಷಯವೆಂದರೆ ಚಲನಚಿತ್ರಗಳಲ್ಲಿ ತೋರಿಸಿರುವ ಭವ್ಯವಾದ ಸ್ಥಳಗಳಿಗೆ ಭೇಟಿ ನೀಡುವುದು. ಒಮ್ಮೊಮ್ಮೆ ಚಿತ್ರವೊಂದರ ಚಿತ್ರೀಕರಣ ನಡೆದ ರಮಣೀಯ ಸ್ಥಳಗಳಲ್ಲಿ ನಾವೇ ಕಲ್ಪಿಸಿಕೊಂಡಿರುತ್ತೇವೆ. ಚಲನಚಿತ್ರ ನಿರ್ಮಾಪಕರು ಅಂತರಾಷ್ಟ್ರೀಯ ಗಡಿಗಳಲ್ಲಿ ಚಿತ್ರೀಕರಣವನ್ನು ಇಷ್ಟಪಡುತ್ತಾರೆ, ವಿವಿಧ ಭಾರತೀಯ ಸ್ಥಳಗಳು ಸಹ ಅದೇ ರೀತಿಯಲ್ಲಿ ಅವರನ್ನು ಕುತೂಹಲ ಕೆರಳಿಸಿದೆ. ಆದ್ದರಿಂದ, […]

Advertisement

Wordpress Social Share Plugin powered by Ultimatelysocial