ಬೆಳಗಾವಿಯಲ್ಲೂ ‘ಪುನೀತ್’ ಹಬ್ಬ: ಅಪ್ಪು ನಮ್ಮೊಂದಿಗೇ ಇದ್ದಾರೆ ಎಂದ ಅಭಿಮಾನಿಗಳು

ಬೆಳಗಾವಿ: ನಗರದಲ್ಲಿ ಚಲನಚಿತ್ರ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಗುರುವಾರ ಆಚರಿಸಿದರು. ಅವರ ಅಭಿನಯದ ಕೊನೆಯ ಚಲನಚಿತ್ರ ‘ಜೇಮ್ಸ್‌’ ಅನ್ನು ವೀಕ್ಷಿಸಿ ತಮ್ಮೆ ನೆಚ್ಚಿನ ನಟ ಇನ್ನಿಲ್ಲ ಎನ್ನುವುದನ್ನು ನೆನೆದು ಭಾವುಕರಾದರು.

ಇಲ್ಲಿನ ‘ಚಿತ್ರಾ’ ಚಿತ್ರಮಂದಿರ ಆವರಣದಲ್ಲಿ ಫ್ಲೆಕ್ಸ್‌ಗಳು, ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಅಭಿಮಾನಿಗಳ ಸಂಘದವರು ಆವರಣವನ್ನು ವಿಶೇಷವಾಗಿ ಅಲಂಕಾರ ಮಾಡಿ ಅಭಿಮಾನ ಮೆರೆದರು. ಪವರ್‌ಸ್ಟಾರ್‌ನ ಕಟೌಟ್‌ಗಳನ್ನು ರಾರಾಜಿಸುತ್ತಿವೆ. ಜಯಘೋಷಗಳು ಮೊಳಗಿದವು.

ಅಭಿಮಾನಿಗಳು ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಪುನೀತ್‌ ಫೋಟೊಗೆ ಪೂಜೆ ಸಲ್ಲಿಸಿ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಿದರು. ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದಾಗಿ ಅಭಿಮಾನಿಗಳ ಮೆರವಣಿಗೆಗೆ ಪೊಲೀಸರು ಆವಕಾಶ ಕೊಡಲಿಲ್ಲ. ಆದರೂ ಕೆಲವು ಯುವಕರು ಚಿತ್ರಮಂದಿರದ ಸುತ್ತಲೂ ದ್ವಿಚಕ್ರವಾಹನಗಳಲ್ಲಿ ಕನ್ನಡ ಬಾವುಟಗಳೊಂದಿಗೆ ಸುತ್ತಾ ಹಾಕುತ್ತಾ ಅಭಿಮಾನ ಮೆರೆದರು. ಪಟಾಕಿಗಳನ್ನು ಸಿಡಿಸಿ, ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಜೈ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿತ್ತು.

ಥಿಯೇಟರ್‌ಗಳಲ್ಲಿ ‘ಜೇಮ್ಸ್‌’ ಚಲನಚಿತ್ರ ಆರಂವಾಗುತ್ತಿದ್ದಂತೆಯೇ ಜಯಘೋಷಗಳು, ಸಿಳ್ಳೆ, ಚಪ್ಪಾಳೆಗಳು ಮುಗಿಲುಮುಟ್ಟಿದವು. ಚಿತ್ರಾ ಚಿತ್ರಮಂದಿರದಲ್ಲಿ ಕೆಲವು ಯುವಕರು ಕನ್ನಡ ಬಾವುಟವನ್ನು ಹಾರಾಡಿಸುತ್ತಾ ಸಂಭ್ರಮಿಸಿದರು. ಕೆಲವರು ಭಾವುಕರಾಗಿದ್ದರು.

ಕೆಲ ಅಭಿಮಾನಿಗಳು ‘ಜೊತೆಗಿರದ ಜೀವ ಜೀವಂತ’ ಎಂದು ಬರೆದಿದ್ದ ಅಪ್ಪು ಫೋಟೊವನ್ನು 17ನೇ ನಂಬರ್‌ ಸೀಟಿನಲ್ಲಿಟ್ಟು ಜನ್ಮದಿನವನ್ನು ವಿಶೇಷವಾಗಿ ಆಚರಿಸಿದರು. ಮಾರ್ಚ್‌ 17- ಪುನೀತ್‌ ರಾಜ್‌ಕುಮಾರ್ ಜನಿಸಿದ ದಿನ. ಆದ್ದರಿಂದ 17ನೇ ನಂಬರ್ ಸೀಟನ್ನು ಬುಕ್ ಮಾಡಿ ಕಾಯ್ದಿರಿಸಿದ್ದೆವು. ಎಂದು ತಿಳಿಸಿದರು.

ಫೋಟೊಗೆ ಹಾರ ಹಾಕಿ ‘ಅಪ್ಪು ಅಪ್ಪು ಅಪ್ಪು ಅಪ್ಪು’ ಎಂದು ಜಯಘೋಷಗಳನ್ನು ಕೂಗಿದರು. ‘ಅಪ್ಪು ಎಲ್ಲೂ ಹೋಗಿಲ್ಲ. ನಮ್ಮೊಂದಿಗೇ ಇದ್ದಾರೆ. ನಾವು ಅವರೊಂದಿಗೆ ಚಿತ್ರ ವೀಕ್ಷಿಸುತ್ತಿದ್ದೇವೆ’ ಎಂದು ಅಭಿಮಾನಿಗಳು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಕ್ಕಳೂ ಸೇರಿ ಸಾವಿರ ಜನರಿಗೆ ಆಶ್ರಯ ನೀಡಿದ್ದ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ

Thu Mar 17 , 2022
ಮಾರಿಯುಪೋಲ್‌ (ಉಕ್ರೇನ್‌): ಉಕ್ರೇನ್‌ನ ಬಂದರು ನಗರ ಮಾರಿಯುಪೋಲ್‌ನಲ್ಲಿ ಮಕ್ಕಳೂ ಸೇರಿದಂತೆ ಸಾವಿರಕ್ಕೂ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದ್ದ ರಂಗಮಂದಿರದ ಮೇಲೆ ರಷ್ಯಾ ಬಾಂಬ್‌ ದಾಳಿ ನಡೆಸಿದೆ ಎಂದು ಉಕ್ರೇನ್ ಗುರುವಾರ ಹೇಳಿದೆ. ಸಾವಿನ ನಿಖರ ಸಂಖ್ಯೆ ಇನ್ನಷ್ಟೇ ತಿಳಿಯಬೇಕಿದೆ.ರಂಗಮಂದಿರ ಹೊತ್ತಿ ಉರಿಯುತ್ತಿರುವ ಚಿತ್ರವನ್ನು ಉಕ್ರೇನ್‌ನ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.   ‘ರಷ್ಯಾದ ಆಕ್ರಮಣಕಾರರು ರಂಗಮಂದಿರವನ್ನು ನಾಶಪಡಿಸಿದ್ದಾರೆ. ಅದರಲ್ಲಿ ಸಾವಿರಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದರು. ಇದನ್ನು ನಾವು ಎಂದಿಗೂ ಕ್ಷಮಿಸುವುದಿಲ್ಲ’ […]

Advertisement

Wordpress Social Share Plugin powered by Ultimatelysocial