ನಾಳೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮದಿನ: ಐವರು ಮಕ್ಕಳಿಗೆ ‘ಪುನೀತ್ ರಾಜ್ ಕುಮಾರ್’ ಎಂದು ಹೆಸರಿಟ್ಟು, ನಟಿ ತಾರಾ ನಾಮಕರಣ

ಬೆಂಗಳೂರು: ನಾಳೆ ದಿವಂಗತ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ. ಈ ದಿನಕ್ಕೂ ಮುನ್ನಾ, ತಮ್ಮ ನೆಚ್ಚಿನ ನಟನ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ, ಇಂದು ಐವರು ಮಕ್ಕಳಿಗೆ ಪುನೀತ್ ರಾಜ್ ಕುಮಾರ್ ( Puneet Rajkumar ) ಎಂಬುದಾಗಿ ಹೆಸರಿಟ್ಟು, ನಾಮಕರಣವನ್ನು ನಟಿ ತಾರಾ ಮಾಡಿದ್ದಾರೆ.

 

ಈ ಮೂಲಕ ಅಪ್ಪು, ಸದಾ ಅಭಿಮಾನಿಗಳ ಹೃದಯಾಂತರಾಳದಲ್ಲಿ ಜೀವಂತವಾಗಿಸಿದ್ದಾರೆ.

ಇಂದು ಸ್ಯಾಂಡಲ್ ವುಡ್ ಹಿರಿಯ ನಟಿ ತಾರಾ ಅನುರಾಧ ಹಾಗೂ ಪುನೀತ್ ರಾಜ್ ಕುಮಾರ್ ಹೋದರಿ ಪೂರ್ಣಿಮಾ ಅವರು, ಬೆಂಗಳೂರಿನ ಕಾಕ್ಸ್ ಟೌನ್ ನಲ್ಲಿರುವಂತ ಸರ್ಕಾರಿ ಆಸ್ಪತ್ರೆಯಲ್ಲಿ ಅಭಿಮಾನಿಗಳ ಪುತ್ರರ ಮಕ್ಕಳಿಗೆ ಪುನೀತ್ ರಾಜ್ ಕುಮಾರ್ ಎಂಬುದಾಗಿ ಹೆಸರಿಟ್ಟರು.ಈ ಬಳಿಕ ಮಾತನಾಡಿದ ನಟಿ ತಾರಾ, ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಗಳಾಗಿರುವಂತ ಈ ತಾಯಂದಿರ ಮಕ್ಕಳಿಗೆ, ಅವರ ಹೆಸರನ್ನಿಡಲಾಗಿದೆ. ಈ ಐವರು ಗಂಡು ಮಕ್ಕಳು ಬೆಳೆದು ದೊಡ್ಡವರಾಗಿ, ಈ ಸಮಾಜಕ್ಕೆ ಪುನೀತ್ ರಾಜ್ ಕುಮಾರ್ ನಂತೆ ಕೊಡುಗೆ ನೀಡಲಿ ಎಂದು ಅರಸಿ, ಹಾರೈಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಸದ ಬುಟ್ಟಿಯಲ್ಲಿ, ಖಾಲಿ ಸೈಟ್ ನಲ್ಲಿ ಚಿನ್ನ-ಬೆಳ್ಳಿ, ನಾಣ್ಯ, ಕಂತೆ-ಕಂತೆ ನೋಟು: ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಶಾಕ್!

Wed Mar 16 , 2022
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ 75ಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಇಲಾಖೆಗಳ 18 ಅಧಿಕಾರಿಗಳ ಮನೆ ಮೇಲೆ ಇಂದು ಬುಧವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಶೋಧ ನಡೆಸುತ್ತಾ ಹೋದ ಅಧಿಕಾರಿಗಳಿಗೆ ಶಾಕ್ ಆಗಿದೆ.   ರಾಶಿ ರಾಶಿ ಚಿನ್ನ, ಬೆಳ್ಳಿ, ನೋಟಿನ ಕಂತೆಗಳು, ಅಪಾರ ಆಸ್ತಿಪಾಸ್ತಿ ಪತ್ತೆಯಾಗಿದ್ದು ಇದನ್ನು ಕಂಡ ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಚಿಕ್ಕಮಗಳೂರಿನ ಪಿಡಬ್ಲ್ಯುಡಿ ಎಇಇ ಗವಿ ರಂಗಪ್ಪ ಮನೆಯಲ್ಲಿ ಅಪಾರ ಚಿನ್ನದ ಬಿಸ್ಕತ್ ಪತ್ತೆಯಾಗಿದೆ.ಚಿಕ್ಕಮಗಳೂರಿನ […]

Advertisement

Wordpress Social Share Plugin powered by Ultimatelysocial