ಪುಣೆ: ಹೋಟೆಲ್​​ನಲ್ಲಿ ಪತ್ನಿ ಆಧಾರ್ ಕಾರ್ಡ್ ತೋರಿಸಿ ಪ್ರಿಯತಮೆಯೊಂದಿಗೆ ಪತಿ ಪಲ್ಲಂಗದಾಟ, ಕೇಸ್ ದಾಖಲು

 

 

 

ಪುಣೆ: ಮಹಾರಾಷ್ಟ್ರದ ಪುಣೆಯ ಹೋಟೆಲ್‌ ನಲ್ಲಿ ತಪಾಸಣೆ ವೇಳೆ ಪತ್ನಿಯ ಆಧಾರ್ ಕಾರ್ಡ್ ಬಳಸಿದ ಆರೋಪದ ಮೇಲೆ 41 ವರ್ಷದ ವ್ಯಕ್ತಿ ಮತ್ತು ಆತನ ಪ್ರಿಯತಮೆಯ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.ವ್ಯಕ್ತಿ ಹಾಗೂ ಆತನ ಗರ್ಲ್ ಫ್ರೆಂಡ್ ಇಬ್ಬರ ವಿರುದ್ಧ ಹಿಂಜೆವಾಡಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಪತ್ನಿ ಜೊತೆ ಮಲಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಫರ್ ಕೊಟ್ಟ ಪತಿರಾಯ ಅಂದರ್, ಗಂಡನ ಕುಕೃತ್ಯಕ್ಕೆ ಹೆಂಡತಿ ಸಾಥ್!!ಪೊಲೀಸರ ಪ್ರಕಾರ, ಈ ವ್ಯಕ್ತಿ ಗುಜರಾತ್ ಮೂಲದ ಉದ್ಯಮಿಯಾಗಿದ್ದು, ಅವರ ಪತ್ನಿ ಕಂಪನಿಯಲ್ಲಿ ನಿರ್ದೇಶಕರಾಗಿದ್ದಾರೆ. ಪತಿ ತನಗೆ ಸುಳ್ಳು ಹೇಳಿ ಹೊರಗೆ ಹೋಗುತ್ತಿದ್ದರಿಂದ ಅನುಮಾನಗೊಂಡ ಮಹಿಳೆ ತನ್ನ ಗಂಡನ ಕಾರಿಗೆ ಜಿಪಿಎಸ್ ಸಾಧನವನ್ನು ಅಳವಡಿಸಿದ್ದರು. ಈ ವೇಳೆ ಗಂಡ ತನಗೆ ಮೋಸ ಮಾಡುತ್ತಿದ್ದಾನೆ ಎಂಬುದು ತಿಳಿದು ಬಂದಿದೆ. ಹೀಗಾಗಿ ಪೊಲೀಸರಿಗೆ ಗಂಡನ ವಿರುದ್ಧ ದೂರು ನೀಡಿದ್ದರು.ಮಹಿಳೆ ತನ್ನ ಪತಿಯ ಎಸ್ ಯುವಿ ಕಾರಿನಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಪತಿ ವ್ಯಾಪಾರದ ಮೇಲೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಆದರೆ ಅವರ ಕಾರಿನ ಸ್ಥಳವನ್ನು ಪರಿಶೀಲಿಸಿದಾಗ ಕಾರು ಪುಣೆಯಲ್ಲಿರುವುದು ಪತ್ತೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೂರುದಾರ ಮಹಿಳೆ ಹೋಟೆಲ್ ಅನ್ನು ಸಂಪರ್ಕಿಸಿದಾಗ, ಆ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಹೋಟೆಲ್ ನಲ್ಲಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಆ ವ್ಯಕ್ತಿ ಪತ್ನಿ ಆಧಾರ್ ಕಾರ್ಡ್ ಬಳಸಿ ಬೇರೊಬ್ಬ ಮಹಿಳೆಯೊಂದಿಗೆ ಹೋಟೆಲ್‌ ಬುಕ್ ಮಾಡಿರುವುದು ಪತ್ತೆಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.ತಲೆಮರೆಸಿಕೊಂಡಿರುವ ವ್ಯಕ್ತಿ ಮತ್ತು ಆತನ ಗೆಳತಿಯ ವಿರುದ್ಧ ಐಪಿಸಿಯ ಸೆಕ್ಷನ್ 419(ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ ದಂಡ ಪಡೆದ ಕಾನ್​ಸ್ಟೇಬಲ್​ ಅಮಾನತು

Sat Feb 5 , 2022
  ಬೆಂಗಳೂರು: ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ 100 ರೂ. ದಂಡ ಪಡೆದು ನಂತರ ವಾಪಸ್​ ಕೊಟ್ಟ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.ಎಚ್​ಎಎಲ್​ ಸಂಚಾರ ಠಾಣೆ ಕಾನ್​ಸ್ಟೇಬಲ್​ ಪವನ್​ ದ್ಯಾಮಣ್ಣನವರ್​ ಅಮಾನತಿಗೆ ಒಳಗಾದವರು.ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ 100 ರೂ. ದಂಡ ಪಡೆದಿದ್ದರು. ಬೈಕ್​ ಸವಾರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ದಂಡವನ್ನು ಪೇದೆ ವಾಪಸ್​ ಕೊಟ್ಟಿದ್ದರು. ಈ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿತ್ತು.ಸ್ಥಳದಲ್ಲಿ ದಂಡ ವಿಧಿಸುವ […]

Advertisement

Wordpress Social Share Plugin powered by Ultimatelysocial